Credit-Debit Card New Rule: ವಿದೇಶಿ ಕ್ರೆಡಿಟ್ ಕಾರ್ಡ್‌ಗಳಿಂದ ವಿದೇಶದಲ್ಲಿ ಮಾಡುವ ವೆಚ್ಚವನ್ನು ಎಲ್‌ಆರ್‌ಎಸ್ ಯೋಜನೆಯಡಿ ತರಲು ಫೆಮಾ ಕಾನೂನನ್ನು ಬದಲಾಯಿಸುವ ಮತ್ತು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ಕಳುಹಿಸುವ ಮೊತ್ತದ ತೆರಿಗೆ ಅಂಶಗಳಲ್ಲಿ ಏಕರೂಪತೆಯನ್ನು ತರುವುದು ತನ್ನ ಉದ್ದೇಶವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ವಿದೇಶಿ ವಿನಿಮಯ ನಿರ್ವಹಣೆ (ಫೆಮಾ) ತಿದ್ದುಪಡಿ ನಿಯಮಗಳು, 2023 ರ ಮೂಲಕ, ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಿದೇಶದಲ್ಲಿ ಖರ್ಚು ಮಾಡುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲ್‌ಆರ್‌ಎಸ್ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಜುಲೈ 1 ರಿಂದ ಹೊಸ ದರಗಳು ಅನ್ವಯವಾಗಲಿದೆ
ಇದು ವಿದೇಶದಲ್ಲಿ ಖರ್ಚು ಮಾಡಿದ ಮೊತ್ತದ ಅನ್ವಯವಾಗುವ ದರಗಳಲ್ಲಿ 'ಮೂಲದಲ್ಲಿ ತೆರಿಗೆ ಸಂಗ್ರಹ' (TCS) ಅನ್ನು ಸಕ್ರಿಯಗೊಳಿಸುತ್ತದೆ. TCS ಪಾವತಿಸುವ ವ್ಯಕ್ತಿಯು ತೆರಿಗೆದಾರನಾಗಿದ್ದರೆ, ಆತ ತನ್ನ ಆದಾಯ ತೆರಿಗೆ ಅಥವಾ ಮುಂಗಡ ತೆರಿಗೆ ಹೊಣೆಗಾರಿಕೆಗಳ ವಿರುದ್ಧ ಕ್ರೆಡಿಟ್ ಅಥವಾ ಸೆಟ್-ಆಫ್ ಅನ್ನು ಕ್ಲೈಮ್ ಮಾಡಬಹುದು ಎಂದು ಸಚಿವಾಲಯ ಹೇಳಿದೆ.ಈ ವರ್ಷದ ಬಜೆಟ್‌ನಲ್ಲಿ, ವಿದೇಶಿ ಪ್ರವಾಸದ ಪ್ಯಾಕೇಜ್‌ಗಳು ಮತ್ತು ಎಲ್‌ಆರ್‌ಎಸ್ ಅಡಿಯಲ್ಲಿ ವಿದೇಶಕ್ಕೆ ಕಳುಹಿಸುವ ಹಣದ ಮೇಲೆ ಟಿಸಿಎಸ್ ಅನ್ನು ಶೇ. 5 ರಿಂದ ಶೇ. 20 ಕ್ಕೆ ಹೆಚ್ಚಿಸಲು ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ಹೊಸ ತೆರಿಗೆ ದರಗಳು ಜುಲೈ 1 ರಿಂದ ಜಾರಿಗೆ ಬರಲಿದೆ.


ಫೆಮಾ ಕಾಯಿದೆಗೆ ತಿದ್ದುಪಡಿ
ಈ ಹಿನ್ನೆಲೆಯಲ್ಲಿ ಮಂಗಳವಾರವೇ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಫೆಮಾ ಕಾನೂನಿಗೆ ತಿದ್ದುಪಡಿ ತರುವ ಕುರಿತು ಮಾಹಿತಿ ನೀಡಿದೆ. ಈ ಅಧಿಸೂಚನೆಯಲ್ಲಿ LRS ಅನ್ನು ಸೇರಿಸಿದ ನಂತರ, 2.5 ಲಕ್ಷಕ್ಕಿಂತ ಹೆಚ್ಚಿನ ವಿದೇಶಿ ಕರೆನ್ಸಿಯ ಯಾವುದೇ ಕಳುಹಿಸುವಿಕೆಗೆ RBI ಅನುಮೋದನೆಯ ಅಗತ್ಯವಿರುತ್ತದೆ. ಈ ಅಧಿಸೂಚನೆಯ ಜಾರಿಯಾಗುವ ಮೊದಲು, ವಿದೇಶದಲ್ಲಿ ಪ್ರಯಾಣಿಸುವಾಗ ಉಂಟಾದ ವೆಚ್ಚಗಳಿಗೆ ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಪಾವತಿಗಳು LRS ಗೆ ಅರ್ಹವಾಗಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.


ಸೆಕ್ಷನ್  7ನ್ನು ತೆಗೆದುಹಾಕಲಾಗಿದೆ
ಆರ್‌ಬಿಐನೊಂದಿಗೆ ಸಮಾಲೋಚಿಸಿದ ನಂತರ ಹೊರಡಿಸಲಾದ ಈ ಅಧಿಸೂಚನೆಯಲ್ಲಿ ಹಣಕಾಸು ಸಚಿವಾಲಯವು ಫೆಮಾ ಕಾಯಿದೆ, 2000 ರ ಸೆಕ್ಷನ್ ಏಳನ್ನು ಕೈಬಿಟ್ಟಿದೆ. ಈ ಕಾರಣದಿಂದಾಗಿ, ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಿದೇಶದಲ್ಲಿ ಮಾಡಿದ ಪಾವತಿಗಳು ಸಹ ಇನ್ಮುಂದೆ ಎಲ್‌ಆರ್‌ಎಸ್ ವ್ಯಾಪ್ತಿಗೆ ಬರಲಿವೆ.


ಇದನ್ನೂ ಓದಿ-RBI Money: 535 ಕೋಟಿ ಹೊತ್ತೋಯ್ಯುತ್ತಿದ್ದ ಲಾರಿ, ದಾರಿಯಲ್ಲಿ ಇದ್ದಕ್ಕಿದಂತೆ ಇಂಜಿನ್ ನಿಂದ ಹೊಗೆ ಬರಲಾರಂಭಿಸಿತು... ಮುಂದೇನಾಯ್ತು?


ಇದಲ್ಲದೆ ಸಚಿವಾಲಯವು ಈ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗಳ ಪಟ್ಟಿ ಮತ್ತು ಅವುಗಳ ಉತ್ತರಗಳನ್ನು ಬಿಡುಗಡೆ ಮಾಡುವ ಮೂಲಕ ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದೆ. ಡೆಬಿಟ್ ಕಾರ್ಡ್ ಪಾವತಿಗಳನ್ನು ಈಗಾಗಲೇ ಎಲ್‌ಆರ್‌ಎಸ್ ಅಡಿಯಲ್ಲಿ ಒಳಗೊಂಡಿದೆ ಆದರೆ ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚಗಳು ಈ ಮಿತಿಯ ಅಡಿಯಲ್ಲಿ ಬರುತ್ತಿರಲಿಲ್ಲ ಎಂದು ಅದು ಹೇಳಿದೆ. ಇದರಿಂದಾಗಿ ಅನೇಕ ಜನರು ಎಲ್ಆರ್ಎಸ್ ಮಿತಿಯನ್ನು ದಾಟುತ್ತಿದ್ದರು ಎಂದು ಸಚಿವಾಲಯ ಹೇಳಿದೆ.


ಇದನ್ನೂ ಓದಿ-Indian Economy: 2024 ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.6.7 ರಷ್ಟಿರಲಿದೆ, ಹಣದುಬ್ಬರದಲ್ಲಿಯೂ ಕೂಡ ಇಳಿಕೆ


ಸರ್ಕಾರಕ್ಕೆ ಪತ್ರ ಬರೆದ ಆರ್‌ಬಿಐ
ಸಾಗರೋತ್ತರ ಹಣ ರವಾನೆ ಕಂಪನಿಗಳಿಂದ ಪಡೆದ ಮಾಹಿತಿಯು ಅಸ್ತಿತ್ವದಲ್ಲಿರುವ LRS ಮಿತಿ 2.50 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಅನುಮತಿಗಳೊಂದಿಗೆ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂದು ಬಹಿರಂಗಪಡಿಸಿದೆ. ಸಚಿವಾಲಯದ ಪ್ರಕಾರ, ವಿದೇಶಿ ಡೆಬಿಟ್ ಮತ್ತು ಕ್ರೆಡಿಟ್ ಪಾವತಿಗಳ ಬೇರೆ ಬೇರೆ ಪರಿಶೀಲನೆಯನ್ನು ತೆಗೆದುಹಾಕಬೇಕು ಎಂದು ಆರ್‌ಬಿಐ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ