How to Use Credit Card: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚುತ್ತಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಲ್ಲಿ ಹೆಚ್ಚಿನವರು ಯುವ ಪೀಳಿಗೆಯವರು. ಕೈಯಲ್ಲಿ ಹಣವಿಲ್ಲದಿದ್ದರೂ ಶಾಪಿಂಗ್ ಮಾಡಲು, ಅಗತ್ಯ ವಸ್ತುಗಳನ್ನು ಕೊಳ್ಳಲು ಕ್ರೆಡಿಟ್ ಕಾರ್ಡ್ ಅತ್ಯಂತ ಪ್ರಯೋಜನಕಾರಿ ಸಾಧನವಾಗಿದೆ. ಆದಾಗ್ಯೂ, ನಮ್ಮಲ್ಲಿ ಹಲವರು ಕ್ರೆಡಿಟ್ ಕಾರ್ಡ್ ಬಳಕೆ ಜನರ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. ಅದು  ಅನಗತ್ಯ ವೆಚ್ಚವೆಂದು ಪರಿಗಣಿಸುತ್ತಾರೆ. ಆದರೆ, ಕ್ರೆಡಿಟ್ ಕಾರ್ಡ್‌ಗಳನ್ನು ಬುದ್ದಿವಂತಿಕೆಯಿಂದ ಬಳಸುವುದರಿಂದ ನೀವು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ನೀವು ಯೋಚಿಸಿ, ಬುದ್ದಿವಂತಿಕೆಯಿಂದ ಬಳಸಿದರೆ ಕ್ರೆಡಿಟ್ ಕಾರ್ಡ್‌ನಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಬಳಕೆದಾರರಿಗೆ ಹಣಕಾಸಿನ ನೆರವು ನೀಡುವುದಲ್ಲದೆ, ಕ್ಯಾಶ್‌ಬ್ಯಾಕ್, ರಿವಾರ್ಡ್ ಪಾಯಿಂಟ್‌ಗಳಂತಹ ಅನೇಕ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಹಾಗಿದ್ದರೆ, ಯಾವ ಸ್ಮಾರ್ಟ್ ವಿಧಾನಗಳಲ್ಲಿ ಕ್ರೆಡಿಟ್ ಕಾರ್ಡ್‌ನ್ನು ಬಳಸುವುದರಿಂದ ನೀವು ಗರಿಷ್ಠ ಲಾಭವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ... 


ಕ್ರೆಡಿಟ್ ಕಾರ್ಡ್‌ನಿಂದ ಹೆಚ್ಚುವರಿ ಪ್ರಯೋಜನವನ್ನು ಪಡೆಯಲು ಅದನ್ನು ಈ ರೀತಿ ಬಳಸಿ:-
* ಕ್ರೆಡಿಟ್ ಮಿತಿಯನ್ನು ಹೊಂದಿಸಿ: 

ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಕ್ರೆಡಿಟ್ ಕಾರ್ಡ್ ಬಳಕೆಗೆ ಕ್ರೆಡಿಟ್ ಮಿತಿಯನ್ನು ಹೊಂದಿಸುವುದು ಮುಖ್ಯವಾಗಿದೆ. ಹೀಗೆ ಮಾಡುವುದರಿಂದ ಅನಗತ್ಯ ಖರ್ಚುಗಳನ್ನೂ ತಪ್ಪಿಸಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಬಜೆಟ್ ಮತ್ತು ಕ್ರೆಡಿಟ್ ಮಿತಿಯನ್ನು ಹೊಂದಿಸುವ ಮೂಲಕ, ನೀವು ಸಾಲದ ಹೊರೆಯಲ್ಲಿ ಸಿಲುಕುವುದನ್ನು ತಪ್ಪಿಸಬಹುದು. 


ಇದನ್ನೂ ಓದಿ- ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆ ಪ್ರಕಟಿಸಿದ Paytm


* ಶಾಪಿಂಗ್ ಮಾಡುವಾಗ ಎಚ್ಚರ: 
ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ನಿಮ್ಮ ಅಗತ್ಯಗಳ ಆಧಾರದ ಮೇಲೆ ಶಾಪಿಂಗ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಕೈಯಲ್ಲಿ ಕ್ರೆಡಿಟ್ ಕಾರ್ಡ್ ಇದೆ ಎಂದು ಸುಖಾಸುಮ್ಮನೆ ಕಂಡಕಂಡದ್ದನ್ನೆಲ್ಲಾ ಕೊಳ್ಳುವ ಕಡು ಬಯಕೆಗೆ ಬ್ರೇಕ್ ಹಾಕುವುದನ್ನು ತಪ್ಲ್ಪಿಸಿ. 


* ಬುಕ್ಕಿಂಗ್: 
ಒಂದೊಮ್ಮೆ ನೀವು ನಿಮ್ಮ ಆದಾಯದ ಹೆಚ್ಚಿನ ಭಾಗವನ್ನು ವಿಮಾನ ಟಿಕೆಟ್‌ಗಳು, ಹೋಟೆಲ್‌ಗಳು ಮತ್ತು ಹೆಚ್ಚಿನದನ್ನು  ಪ್ರಯಾಣಕ್ಕಾಗಿ ಟಿಕೆಟ್/ಹೊಟೇಲ್ ಬುಕ್ಕಿಂಗ್ ಗಾಗಿ ಖರ್ಚು ಮಾಡಿದರೆ, ನಂತರ ಪ್ರಯಾಣ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ. ಇದರೊಂದಿಗೆ ನೀವು ರಿವಾರ್ಡ್ ಪಾಯಿಂಟ್‌ಗಳನ್ನು ಸಹ ಗಳಿಸಬಹುದು.


* ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಿ: 
ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೋಟೆಲ್ ಬುಕಿಂಗ್, ಫ್ಲೈಟ್ ಟಿಕೆಟ್‌ಗಳು ಇತ್ಯಾದಿಗಳಲ್ಲಿ ರಿಯಾಯಿತಿಗಳನ್ನು ಪಡೆಯಲು ತಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತವೆ. ವಿಭಿನ್ನ ರೀತಿಯ ವಹಿವಾಟುಗಳು ವಿಭಿನ್ನ ರಿವಾರ್ಡ್ ಪಾಯಿಂಟ್‌ಗಳನ್ನು ಸಹ ನೀಡುತ್ತವೆ. ಉದಾಹರಣೆಗೆ, ನೀವು ಚಲನಚಿತ್ರ ಟಿಕೆಟ್‌ಗೆ 500 ರೂಪಾಯಿಗಳನ್ನು ಖರ್ಚು ಮಾಡಿದರೆ ನೀವು 50 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು. ಈ ರಿವಾರ್ಡ್ ಪಾಯಿಂಟ್‌ಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ನೀವು ಯಾವುದೇ ಟಿಕೆಟ್ ಬುಕ್ಕಿಂಗ್ ಮಾಡುವ ಸಂದರ್ಭದಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಸರಿಯಾಗಿ ಬಳಸಿಕೊಳ್ಳಿ. 


ಇದನ್ನೂ ಓದಿ- Finance Minister Nirmala Sitharaman:  ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವ ನಿರ್ಮಲಾ ಸೀತಾರಾಮನ್ ಪಡೆಯುವ ವೇತನ ಎಷ್ಟು ಗೊತ್ತಾ ? 


* ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಟ್ರ್ಯಾಕ್ ಮಾಡಿ: 
ನಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿರುತ್ತಾರೆ. ಆದರೆ, ಸ್ಟೇಟ್ಮೆಂಟ್ ಪರಿಶೀಲಿಸುವುದಿಲ್ಲ. ಆದರೆ, ಈ ತಪ್ಪನ್ನು ಎಂದಿಗೂ ಮಾಡಬೇಡಿ. ಆಗಾಗ್ಗೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಪರಿಶೀಲಿಸಿ. ಇದು ನಿಮ್ಮ ಖರ್ಚುಗಳನ್ನು ಉತ್ತಮವಾಗಿ ನಿರ್ವಹಿಸಲು, ವಂಚನೆಯನ್ನು ಪತ್ತೆಹಚ್ಚಲು ಮತ್ತು ತಡವಾಗಿ ಪಾವತಿ ದಂಡವನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ನೀವು ಹೊಸ ಕೊಡುಗೆಗಳು ಮತ್ತು ಮುಂಬರುವ ಡೀಲ್‌ಗಳ ಬಗ್ಗೆಯೂ ಸರಿಯಾದ ಸಮಯಕ್ಕೆ ಮಾಹಿತಿ ಪಡೆಯಲು ಇದು ಅನುಕೂಲವಾಗುತ್ತದೆ. 


ನೀವು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.