Credit Card Tips: ತುರ್ತು ಪರಿಸ್ಥಿತಿಯಲ್ಲಿ ಹಣಕಾಸಿನ ಅವಶ್ಯಕತೆಯನ್ನು ಪೂರೈಸಲು ಕ್ರೆಡಿಟ್ ಕಾರ್ಡ್ (Credit Card) ಬಹಳ ಉಪಯುಕ್ತವಾಗಿದೆ. ಕ್ರೆಡಿಟ್ ಕಾರ್ಡ್‌ಗಳಲ್ಲಿ ಆಕರ್ಷಕ ಬಹುಮಾನಗಳು, ಕ್ಯಾಶ್‌ಬ್ಯಾಕ್, ರಿಯಾಯಿತಿಗಳು, ಕೊಡುಗೆಗಳು ಇತ್ಯಾದಿ ಪ್ರಯೋಜನಗಳು ಕೂಡ ಲಭ್ಯವಾಗುತ್ತವೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ (Credit Card Usage) ಹೆಚ್ಚಾಗಿದೆ ಆದರೂ, ಕೆಲವರು ಕ್ರೆಡಿಟ್ ಕಾರ್ಡ್ ಬಳಕೆಯಿಂದ ನಾವು ಸಾಲಗಾರರಾಗುತ್ತೇವೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ಇಂದೇ ಈ ಮನಸ್ಥಿತಿಯಿಂದ ಹೊರಬನ್ನಿ. 


ವಾಸ್ತವವಾಗಿ, ಕ್ರೆಡಿಟ್ ಕಾರ್ಡ್ (Credit Card)ತಕ್ಷಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಇದು ನಮ್ಮ ಸಿಬಿಲ್ ಸ್ಕೋರ್ (CIBIL Score) ಅನ್ನು ಕೂಡ ಸುಧಾರಿಸುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಬಲಸುವಾಗ ಕೆಲವು ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ಇದು ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುವುದರಲ್ಲಿ ಅನುಮಾನವೇ ಇಲ್ಲ. 


ಇದನ್ನೂ ಓದಿ- PANCARD ಡ್ಯಾಮೇಜ್ ಆಗಿದ್ದರೆ ಅಥವಾ ಕಳೆದು ಹೋಗಿದ್ದರೆ ಕುಳಿತಲ್ಲೇ ಮಾಡಿಸಿಕೊಳ್ಳಿ ಡ್ಯುಪ್ಲಿಕೆಟ್ ಪ್ಯಾನ್ !


ಕ್ರೆಡಿಟ್ ಕಾರ್ಡ್ ಅನ್ನು ಲಾಭದಾಯಕವನ್ನಾಗಿಸಲು ಏನು ಮಾಡಬೇಕು? ಯಾವ ವಿಷಯಗಳ ಬಗ್ಗೆ ಗಮನವಹಿಸಬೇಕು ಎಂದು ನೋಡುವುದಾದರೆ... 
* ಖರ್ಚಿನ ಮಿತಿ: 

ಖರ್ಚುಗಳನ್ನು ಪೂರೈಸಲು ಕ್ರೆಡಿಟ್ ಕಾರ್ಡ್ ಪ್ರಯೋಜನಕಾರಿಯೇ, ಆದರೂ, ಇದು ಹಿತ-ಮಿತವಾಗಿದ್ದರೆ ಮಾತ್ರವೇ ಪ್ರಯೋಜನಕಾರಿ. ಕೈಯಲ್ಲಿ ಕ್ರೆಡಿಟ್ ಕಾರ್ಡ್ ಇದೆ ಎಂದು ಬೇಕಾಬಿಟ್ಟಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು. ಇದನ್ನು ತಪ್ಪಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ ಶೇಕಡಾ 30ಕ್ಕಿಂತ ಹೆಚ್ಚಿನ ಹಣವನ್ನು ಬಳಸದೆ ಇರುವಂತೆ ನಿಮ್ಮ ಖರ್ಚಿಗೆ ಮಿತಿಯನ್ನು ಹೊಂದಿಸಿ. 


* ನಿಗದಿತ ದಿನಾಂಕವನ್ನು ಮರೆಯಬೇಡಿ: 
ನೀವು ತಿಂಗಳಿಡೀ ಬಳಸಿದ ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಪಾವತಿಸಲು ಬ್ಯಾಂಕ್ ನಿಗದಿಗೊಳಿಸಿರುವ ದಿನಾಂಕವನ್ನು ಎಂದಿಗೂ ಮರೆಯಬೇಡಿ. ಕ್ರೆಡಿಟ್ ಕಾರ್ಡ್ ಡ್ಯೂ ಡೇಟ್ ಬಳಿಕ ಪಾವತಿಸಲಾಗುವ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 


* ಕೊಡುಗೆಗಳು/ರಿಯಾಯಿತಿಗಳಿಗಾಗಿ ಶಾಪಿಂಗ್ ಮಾಡಬೇಡಿ: 
ಕೆಲವರು ತಮಗೆ ಅಗತ್ಯವಿಲ್ಲದಿದ್ದರೂ ಕೊಡುಗೆಗಳು, ರಿಯಾಯಿತಿಗಳಿಗಾಗಿ ಶಾಪಿಂಗ್ ಮಾಡುತ್ತಾರೆ. ಈ ಅಭ್ಯಾಸ ನಿಮಗೂ ಇದ್ದರೆ, ಇಂದೇ ಇಂತಹ ಅಭ್ಯಾಸವನ್ನು ಬಿಡಿ. ಏಕೆಂದರೆ ಇದು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ- Home Loan Prepayment: ಹೋಮ್ ಲೋನ್ ಪೂರ್ವಪಾವತಿ ಮಾಡುವಾಗ ಈ 5 ವಿಷಯಗಳನ್ನು ನೆನಪಿಡಿ


* ಅಧಿಕ ಕ್ರೆಡಿಟ್ ಕಾರ್ಡ್: 
ನಿಮ್ಮ ಬಳಿ ಈಗಾಗಲೇ ಒಂದು ಕ್ರೆಡಿಟ್ ಕಾರ್ಡ್ ಇದ್ದರೆ, ಇನ್ನೊಂದು ಕ್ರೆಡಿಡ್ ಕಾರ್ಡ್ ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ. ಏಕೆಂದರೆ ಅಧಿಕ ಕ್ರೆಡಿಟ್ ಕಾರ್ಡ್ ಹೊಂದಿರುವುದು ಕೆಲವೊಮ್ಮೆ ನಿಮ್ಮನ್ನು ಅನಗತ್ಯ ವೆಚ್ಚಗಳಿಗೆ ಪ್ರೇರೇಪಿಸಬಹುದು. ಮಾತ್ರವಲ್ಲ, ಭವಿಷ್ಯದಲ್ಲಿ ಇದು ನಿಮ್ಮನ್ನು ಸಾಲದ ಸುಳಿಯಲ್ಲೂ ಸಿಲುಕಿಸಬಹುದು. 


* ಕ್ಯಾಶ್ ವಿತ್ ಡ್ರಾ: 
ಕ್ರೆಡಿಟ್ ಕಾರ್ಡ್‌ನ್ನು ಬಳಸಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಗದು ವಹಿವಾಟಿಗೆ ಹೆಚ್ಚಿನ ಶೂಲವನ್ನು ಕಡಿತಗೊಳಿಸಲಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಬಡ್ಡಿರಹಿತ ಕ್ರೆಡಿಟ್ ಅವಧಿಯ ಯಾವುದೇ ಪ್ರಯೋಜನವೂ ಸಹ ಲಭ್ಯವಿರುವುದಿಲ್ಲ. ನೀವು ಸಾಲವನ್ನು ತೆಗೆದುಕೊಂಡ ದಿನದಿಂದ, ಬಡ್ಡಿಯು ಪ್ರಾರಂಭವಾಗುತ್ತದೆ. 


ನೀವು ಕ್ರೆಡಿಟ್ ಕಾರ್ಡ್ ಬಳಸುವಾಗ ಈ ಐದು ಪ್ರಮುಖ ವಿಷಯಗಳ ಬಗ್ಗೆ ಹೆಚ್ಚಿನ ಗಮನವಹಿಸಿದರೆ ಕ್ರೆಡಿಟ್ ಕಾರ್ಡ್ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.