ನವದೆಹಲಿ: Credit Card Late Payment Fee - ಕಳೆದ ಕೆಲವು ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್  (Credit Card)  ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ನೀವು ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡುತ್ತಿದ್ದರೆ, ಈ ಸುದ್ದಿ ಓದಲು ಮರೆಯಬೇಡಿ. ಹಲವು ಬಾರಿ ಕಾರಣಾಂತರಗಳಿಂದ ಕ್ರೆಡಿಟ್ ಕಾರ್ಡ್ ಬಿಲ್ (Credit Card Bill)  ಪಾವತಿಸಲು ವಿಳಂಬವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದು ನಿಮ್ಮ ಬಜೆಟ್ ಅನ್ನು ಮತ್ತಷ್ಟು ಬಿಗಡಾಯಿಸಲಿದೆ.


COMMERCIAL BREAK
SCROLL TO CONTINUE READING

ಹಿಂದಿನ ಶುಲ್ಕಕ್ಕೆ ಹೋಲಿಸಿದರೆ ವಿಳಂಬ ಶುಲ್ಕವನ್ನು ಹೆಚ್ಚಿಸಲಾಗಿದೆ (Banking News)
ಐಸಿಐಸಿಐ ಬ್ಯಾಂಕ್ (ICICI Bank Credit Card) ಕ್ರೆಡಿಟ್ ಕಾರ್ಡ್ ಸಮಯಕ್ಕೆ ಸರಿಯಾಗಿ ಪಾವತಿಯಾಗದ ಹಣದ ಮೇಲಿನ ಲೇಟ್ ಫೀ ಹೆಚ್ಚಿಸಿದೆ. ಹೀಗಿರುವಾಗ ಪಾವತಿಯನ್ನು ಮಾಡಲು ನೀವು ಮೊದಲಿಗಿಂತ ಹೆಚ್ಚು ಜಾಗರೂಕರಾಗಿರಬೇಕು. ಶುಕ್ರವಾರ ಸಂಜೆ, ಐಸಿಐಸಿಐ ಬ್ಯಾಂಕ್ ವತಿಯಿಂದ, ಗ್ರಾಹಕರಿಗೆ ಸಂದೇಶಗಳು ಮತ್ತು ಇ-ಮೇಲ್‌ಗಳ ಮೂಲಕ ಹೆಚ್ಚಿದ ಶುಲ್ಕದ ಬಗ್ಗೆ ಮಾಹಿತಿ ನೀಡಲಾಗಿದೆ. 


ಇತರ ಬ್ಯಾಂಕ್‌ಗಳು ಸಹ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆ ಇದೆ
ಈ ಮಾಹಿತಿಯಲ್ಲಿ ಹೆಚ್ಚಿದ ಶುಲ್ಕಗಳು ಫೆಬ್ರವರಿ 10, 2022 ರಿಂದ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ತಡವಾಗಿ ಪಾವತಿ ಜೊತೆಗೆ, ಈಗ ಕ್ರೆಡಿಟ್ ಕಾರ್ಡ್‌ನಿಂದ ನಗದು ಹಿಂಪಡೆಯುವುದು ಸಹ ಮೊದಲಿಗಿಂತ ಹೆಚ್ಚು ದುಬಾರಿಯಾಗಲಿದೆ. ಮೂಲಗಳ ಪ್ರಕಾರ, ಇತರ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್‌ಗಳು ಸಹ ಮೊದಲಿಗಿಂತ ತಡವಾಗಿ ಪಾವತಿಗೆ ಹೆಚ್ಚಿನ ಶುಲ್ಕ ವಿಧಿಸಲು ಪರಿಗಣಿಸುತ್ತಿವೆ. ಈ ಕುರಿತು ಶೀಘ್ರದಲ್ಲೇ ಬ್ಯಾಂಕ್‌ಗಳಿಂದ ಪ್ರಕಟಣೆ ನಿರೀಕ್ಷಿಸಲಾಗಿದೆ.


ಜೇಬಿಗೆ ಮೊದಲಿಗಿಂತ ಹೆಚ್ಚು ಹೊರೆ
ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಕಳುಹಿಸಿರುವ ಸಂದೇಶದ ಪ್ರಕಾರ, ನಿಮ್ಮ ಬಾಕಿಯು 100 ರೂ.ಗಿಂತ ಕಡಿಮೆಯಿದ್ದರೆ, ನೀವು ತಡವಾಗಿ ಶುಲ್ಕವಾಗಿ ಏನನ್ನೂ ಪಾವತಿಸಬೇಕಾಗಿಲ್ಲ. ಆದರೆ ನೀವು ಇದಕ್ಕಿಂತ ಹೆಚ್ಚು ಸಾಲವನ್ನು ಹೊಂದಿದ್ದರೆ, ನಿಮ್ಮ ಜೇಬಿಗೆ ಮೊದಲಿಗಿಂತ ಹೆಚ್ಚು ಹೊರೆ ಬೀಳಲಿದೆ.


ಇದನ್ನೂ ಓದಿ-Low Investment Business Idea: ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಈ 7 ಬಿಸ್ನೆಸ್ ಆರಂಭಿಸಿ ಕೈತುಂಬಾ ಸಂಪಾದನೆ ಮಾಡಿ


ಹೊಸ ಶುಲ್ಕಗಳು ಕೆಳಗಿನಂತಿವೆ
ನಿಮ್ಮ ಬಾಕಿಯು ರೂ 100 ರಿಂದ ರೂ 500 ರ ನಡುವೆ ಇದ್ದರೆ, ತಡವಾಗಿ ಪಾವತಿಯ ಮೇಲೆ ರೂ 100 ವಿಧಿಸಲಾಗುತ್ತದೆ. ಅದೇ ರೀತಿ 501 ರೂ.ನಿಂದ 5000 ರೂ.ವರೆಗಿನ ಬಾಕಿಗೆ 500 ರೂ. ಮತ್ತೊಂದೆಡೆ, 5000 ರಿಂದ 10000ವರೆಗೆ ಬಾಕಿ ಇದ್ದರೆ, ದಂಡ 750 ರೂ. 10001 ರಿಂದ 25 ಸಾವಿರದವರೆಗಿನ ಬಾಕಿ ಮೊತ್ತದ ಮೇಲೆ ರೂ 900 ದಂಡ ಇರಲಿದೆ. ಮತ್ತೊಂದೆಡೆ, 25001 ರಿಂದ 50 ಸಾವಿರದವರೆಗಿನ ಬಾಕಿಗಳಿಗೆ ಒಂದು ಸಾವಿರ ರೂಪಾಯಿ ದಂಡ ಮತ್ತು ಅದಕ್ಕಿಂತ ಹೆಚ್ಚಿನ 1200 ರೂಪಾಯಿ ದಂಡ ವಿಧಿಸಲಾಗುವುದು.


ಇದನ್ನೂ ಓದಿ-Ration Card ನಿಯಮದಲ್ಲಿ ಬದಲಾವಣೆ! ಇಲ್ಲದಿದ್ದರೆ ಪಡಿತರ ಪಡೆಯಲು ತಪ್ಪಿದಲ್ಲ ಸಮಸ್ಯೆ


ನಗದು ಹಿಂಪಡೆಯುವಿಕೆ ತುಂಬಾ ದುಬಾರಿಯಾಗಿದೆ
ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಿಂದ ಹಣವನ್ನು ಹಿಂಪಡೆಯಲು, ಒಟ್ಟು ಮೊತ್ತದ ಶೇ. 2.5ರಷ್ಟು  ಅಥವಾ 500 ರೂ, ಯಾವುದು ಹೆಚ್ಚೋ ಅದನ್ನು ಪಾವತಿಸಬೇಕಾಗುತ್ತದೆ. ಇದೇ ವೇಳೆ ಚೆಕ್ ರಿಟರ್ನ್ ಮತ್ತು ಆಟೋ ಡೆಬಿಟ್ ರಿಟರ್ನ್ ಸಂದರ್ಭದಲ್ಲಿ, ಕನಿಷ್ಠ 500 ರೂ. 25 ಸಾವಿರಕ್ಕಿಂತ ಹೆಚ್ಚು ಬಾಕಿ ಇದ್ದರೆ ಶೇ.2ರಷ್ಟು ದಂಡ ವಿಧಿಸಲಾಗುತ್ತದೆ. ಇದಲ್ಲದೆ ಮೇಲಿನ ಎಲ್ಲಾ ಶುಲ್ಕಗಳ ಮೇಲೆ ರೂ 50 + ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗಲಿದೆ.


ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಗುಡ್ ನ್ಯೂಸ್! ಜನವರಿಯಲ್ಲಿ DA ಹೆಚ್ಚಳ, ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.