Credit Card Rules Change By RBI: ಭಾರತೀಯ ರಿಸರ್ವ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳನ್ನು ಬದಲಾಯಿಸಿದೆ. ಈ ಮೂಲಕ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳ ನಿರಂಕುಶತೆಗೆ ಲಗಾಮು ಹಾಕಿದ್ದು, ಈಗ ಗ್ರಾಹಕರು ತಮ್ಮ ಇಚ್ಛೆಗೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಆಯ್ಕೆ ಮಾಡುವ ಹಕ್ಕನ್ನು ಪಡೆಯಲಿದ್ದಾರೆ. ಈ ಮೂಲಕ ಆರ್‌ಬಿ‌ಐ ಗ್ರಾಹಕರ ಹಕ್ಕುಗಳನ್ನು ಹೆಚ್ಚಿಸಿದೆ. ಇಷ್ಟೇ ಅಲ್ಲದೆ, ಕ್ರೆಡಿಟ್ ಕಾಡ್ ಬಿಲ್ಲಿಂಗ್ ಸೈಕಲ್ ಅನ್ನು ಕೂಡ ಗ್ರಾಹಕರೇ ಆರಿಸಬಹುದಾಗಿದೆ. ಇದರಿಂದಾಗಿ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ದೊಡ್ಡ ಪರಿಹಾರ ದೊರೆತಂತಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ವಿತರಕರಿಗೆ ಹೊಸ ಮಾರ್ಗದರ್ಶನವನ್ನು ನೀಡಿದೆ. ಈ ಸೂಚನೆಗಳು ಗ್ರಾಹಕರಿಗೆ ಹೆಚ್ಚಿನ ಅಧಿಕಾರದ ಜೊತೆಗೆ ಅಧಿಕ ಲಾಭದಾಯಕ ಎಂದು ಸಾಬೀತುಪಡಿಸಲಿದೆ. 


ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಈ ನಿಯಮವನ್ನು ಶೀಘ್ರದಲ್ಲೇ ಜಾರಿಗೆ ಬರಲಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮಗಳ ಪ್ರಕಾರ, ಗ್ರಾಹಕರು ಬಹು ಕಾರ್ಡ್ ನೆಟ್‌ವರ್ಕ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.  


ಇದನ್ನೂ ಓದಿ- EPFO: ಫಾರ್ಮ್ 10C, 10Dಯ ಪ್ರಯೋಜನಗಳೇನು? ಇಪಿಎಫ್ಒ ಸದಸ್ಯರು ಇದನ್ನು ತಿಳಿದಿರಲೇಬೇಕು!


ಗ್ರಾಹಕರಿಗೆ ಸಿಗಲಿದೆ ನೆಚ್ಚಿನ ಕ್ರೆಡಿಟ್ ಕಾರ್ಡ್: 
ಆರ್‌ಬಿ‌ಐ ಹೊಸ ನಿಯಮದ ಪ್ರಕಾರ, ಕಾರ್ಡ್ ಹೊಂದಿರುವವರು ತಮ್ಮ ಆಯ್ಕೆಯ ಪ್ರಕಾರ ವೀಸಾ, ಮಾಸ್ಟರ್ ಕಾರ್ಡ್‌ನಂತಹ ಯಾವುದೇ ನೆಟ್‌ವರ್ಕ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.  ಕಾರ್ಡ್‌ಗಳನ್ನು ವಿತರಿಸುವಾಗ, ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ಗ್ರಾಹಕರಿಗೆ ಕಾರ್ಡ್ ನೆಟ್‌ವರ್ಕ್ ಆಯ್ಕೆಗಳನ್ನು ಕೇಳುತ್ತವೆ. 


ಒಂದೊಮ್ಮೆ ನೀವು ಈಗಾಗಲೇ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದರೆ, ಕ್ರೆಡಿಟ್ ಕಾರ್ಡ್ ನವೀಕರಣದ ಸಮಯದಲ್ಲಿ ಕಾರ್ಡ್ ನೆಟ್‌ವರ್ಕ್ ಅನ್ನು ಆಯ್ಕೆ ಮಾಡುವ ಆಯ್ಕೆ ಲಭ್ಯವಾಗಲಿದೆ. ಆದಾಗ್ಯೂ, 10 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಕಾರ್ಡ್‌ಗಳನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ವಿತರಕರಿಗೆ ಈ ಆದೇಶವು ಅನ್ವಯಿಸುವುದಿಲ್ಲ  ಎಂಬುದು ಗಮನಾರ್ಹ ಸಂಗತಿಯಾಗಿದೆ. 


ಇದನ್ನೂ ಓದಿ- Holi 2024 Gift: ಎರಡು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್, ಯಾವ ಸ್ಕೀಮ್, ಯಾರಿಗೆ ಲಾಭ?


ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್‌ನಲ್ಲಿಯೂ ಸಿಗಲಿದೆ ಬಿಗ್ ರಿಲೀಫ್: 
ತಮ್ಮಿಚ್ಚೆಯ ಕ್ರೆಡಿಟ್ ಕಾರ್ಡ್ ಆಯ್ಕೆಯ ಜೊತೆ ಜೊತೆಗೆ ಆರ್‌ಬಿ‌ಐ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್‌ನಲ್ಲಿಯೂ ದೊಡ್ಡ ಪರಿಹಾರವನ್ನು ನೀಡಲಿದೆ. ಈ ಸಂಬಂಧ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿರುವ ಆರ್‌ಬಿ‌ಐ, ಈಗ ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಅನುಕೂಲಕ್ಕೆ ಅನುಗುಣವಾಗಿಯೇ ಕಾರ್ಡ್‌ನ ಬಿಲ್ಲಿಂಗ್ ಸೈಕಲ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ. ಆದರೆ, ಈ ಸೌಲಭ್ಯವನ್ನು ಪಡೆಯಲು ಗ್ರಾಹಕರು ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. 


ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಸೈಕಲ್ ಬದಲಾಯಿಸಲು ಅನುಸರಿಸಬೇಕಾದ ಹಂತಗಳೆಂದರೆ:- 
* ಮೊದಲು ನಿಮ್ಮ ಕ್ರೆಡಿಟ್ ಕಾರ್ಡ್‌ನ ಹಿಂದಿನ ಬಾಕಿಗಳನ್ನು ಸಂಪೂರ್ಣವಾಗಿ ಪಾವತಿಸಬೇಕು. 
* ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಸೈಕಲ್ ಬದಲಾವಣೆಗೆ ಸಂಬಂಧಿಸಿದಂತೆ ನೀವು ಫೋನ್ ಅಥವಾ ಇಮೇಲ್ ಮೂಲಕ ಕ್ರೆಡಿಟ್ ಕಾರ್ಡ್ ಕಂಪನಿಗೆ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ. 
* ನೀವು ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದಲೂ ವಿನಂತಿ ಸಲ್ಲಿಸಬಹುದು.
* ಈ ನಿಯಮಗಳನ್ನು ಅನುಸರಿಸಿ ವಿನಂತಿಸುವ ಮೂಲಕ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಲ್ ಪಾವತಿ ದಿನಾಂಕವನ್ನು ಬದಲಾಯಿಸಬಹುದಾಗಿದೆ. 
* ಆರ್‌ಬಿ‌ಐನ ಈ ಕ್ರಮವು ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಬಡ್ಡಿ ರಹಿತ ಅವಧಿಯನ್ನು ಗರಿಷ್ಠ ಮಟ್ಟಕ್ಕೆ ವಿಸ್ತರಿಸಲು ನಿಮಗೆ ಅನುಕೂಲತೆಯನ್ನು ಕಲ್ಪಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.