Lucky Time For Donkey: ಆ ಪ್ರಾಣಿಗಳು ಯಾವ ಕೆಲಸಕ್ಕೂ ಬರೋದಿಲ್ಲ ಅಂತಾ ಅವುಗಳನ್ನ ತುಚ್ಚವಾಗಿ ಕಾಣುತ್ತಿದ್ದರು. ಯಾರಿಗಾದ್ರು ಕೆಲ್ಸಾ ಕಾರ್ಯ ಇಲ್ಲ ಅಂದ್ರೆ ಆ ಪ್ರಾಣಿಗಳ ಹೆಸರಲ್ಲಿ ಬೈಯುತ್ತಿದ್ದರು.. ಆದ್ರೆ ಆ ಪ್ರಾಣಿಗಳ ಲಕ್ ನೋಡಿ.. ಈಗ ಅವುಗಳಿಗೆ ಮಾರುಕಟ್ಟೆಯಲ್ಲಿ ಪುಲ್ ಡಿಮ್ಯಾಂಡ್ ಬಂದಿದೆ, ಜನ ಲಕ್ಷ - ಲಕ್ಷ ಹಣ ಕೊಟ್ಟು ಅವುಗಳನ್ನ ಖರೀದಿ ಮಾಡುತ್ತಿದ್ದಾರೆ.. ಅಷ್ಟೇ ಅಲ್ಲ, ಅಲ್ಲಿಯ ಜನರು ಆ ಪ್ರಾಣಿಗಳ ಹೈನುಗಾರಿಕೆಯಿಂದಲೇ ಕೋಟ್ಯಾಧಿಪತಿ ಆಗುವ ಕನಸ್ಸು ಕಾಣುತ್ತಿದ್ದಾರೆ... ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ....


COMMERCIAL BREAK
SCROLL TO CONTINUE READING

ಹೌದು, ಒಂದು ಟೈಮ್‌ನಲ್ಲಿ ಕತ್ತೆಗಳು ಅಂದ್ರೆ ಯಾವ ಕೆಲಸಕ್ಕೂ ಬರೋದಿಲ್ಲ, ಪ್ರಯೋಜನ ಇಲ್ಲದ ಪ್ರಾಣಿಗಳು ಅಂತಾ ತುಚ್ಚವಾಗಿ ಕಾಣುತ್ತಿದ್ರು.. ಕೆಲ್ಸಾ ಕಾರ್ಯ ಇಲ್ಲದ ವ್ಯಕ್ತಿಗಳನ್ನ ಏಯ್ ಕತ್ತೆ, ಕತ್ತೆ ಕಾಯಲಿಕ್ಕೆ ಹೋಗು ಅಂತಾ ಬೈಯುತ್ತಿದ್ರು.. ಆದ್ರೆ ಈಗ ಆ ಕತ್ತೆಗಳಿಗೆ ಸಕತ್ ಡಿಮ್ಯಾಂಡ್.. ಲಕ್ಷ - ಲಕ್ಷ ಹಣ ಕೊಟ್ಟು ಅಲ್ಲಿಯ ಜನ ಕತ್ತೆಗಳನ್ನ ಖರೀದಿ ಮಾಡುತ್ತಿದ್ದಾರೆ...  


ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕತ್ತೆಗಳ ಖರೀದಿ ಭರಾಟೆ ಜೋರಾಗಿದ್ದು, ಜನರು ತಾ ಮುಂದು, ನಾ ಮುಂದು ಅಂತಾ ಕತ್ತೆಗಳನ್ನ ಖರೀದಿ ಮಾಡುತ್ತಿದ್ದಾರೆ.. ಹೌದು, ಹೊಸಪೇಟೆಯಲ್ಲಿ ಸ್ಥಾಪನೆಯಾಗಿರುವ 'ಜಿನ್ನಿ ಮಿಲ್ಕ್' ಅನ್ನೊ ಖಾಸಗಿ ಕಂಪನಿಯೊಂದು ಕತ್ತೆಗಳನ್ನ ಮಾರಾಟ ಮಾಡುತ್ತಿದೆ. ಜೊತೆಗೆ ಆ ಕತ್ತೆಗಳ ಹಾಲನ್ನು ಅವರೇ ಖರೀದಿ ಮಾಡುತ್ತಿದ್ದಾರೆ.. ಇನ್ನು ಮೂರು ಕತ್ತೆ ಹಾಗೂ ಮೂರು ಮರಿಗಳನ್ನ ಸೇರಿಸಿ ಒಂದು ಯುನಿಟ್ ಮಾಡಿ 3 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ..  ಜೊತೆಗೆ ಒಂದು ಲೀಟರ್ ಕತ್ತೆ ಹಾಲಿಗೆ 2736  ರೂ. ಕೊಟ್ಟು ಅವರೆ ಖರೀದಿ ಮಾಡುತ್ತಿದ್ದಾರೆ... ಹೀಗಾಗಿ ಅಧಿಕ ಲಾಭಾಂಶ ಬರುತ್ತಿದೆ ಅಂತಾ ಜನ ಕತ್ತೆ ಖರೀದಿಗೆ ಮುಂದಾಗುತ್ತಾರೆ....


ಇದನ್ನೂ ಓದಿ- ಗೃಹಲಕ್ಷ್ಮಿ ಯೋಜನೆ: ಮಹಿಳೆಯರಿಗೆ ಶಾಕ್! 2 ಲಕ್ಷ ಮಹಿಳೆಯರಿಗಿಲ್ಲ ಹಣ, ನಿಮ್ಮ ಹೆಸರೂ ಇದ್ಯಾ?


ಇನ್ನು ಕತ್ತೆ ಹೈನುಗಾರಿಕೆಯಿಂದ  (Donkey Dairy Farming) ಅಧಿಕ ಲಾಭಾಂಶ ಬರುತ್ತಿದೆ ಅಂತಾ ವಿಜಯನಗರ ಜಿಲ್ಲೆಯಾದ್ಯಂತ ಜನ ಕತ್ತೆ ಖರೀದಿಗಳಿಗೆ ಮುಗಿ ಬೀಳುತ್ತಿದ್ದಾರೆ.. ಒಂದು ಲೀಟರ್ ಕತ್ತೆ ಹಾಲಿಗೆ 2736 ರೂ. ಅಂದ್ರೆ ಒಂದು ಕತ್ತೆ ದಿನಕ್ಕೆ ಒಂದೇ ಲೀಟರ್ ಹಾಲು ಕೊಟ್ರು, ತಿಂಗಳಿಗೆ ಲಕ್ಷ - ಲಕ್ಷ ಹಣ ಗಳಿಸಬಹುದು. ಹೀಗಾಗಿ ಜನ ಕತ್ತೆ ಖರೀದಿ ಮಾಡುತ್ತಿದ್ದಾರೆ.. ಇನ್ನು ಈ ಕತ್ತೆ ಮಾರಾಟ ಮಾಡುತ್ತಿರುವ ಜಿನ್ನಿ ಕಂಪನಿ ಆಂಧ್ರದ ಅನಂತಪುರದಲ್ಲಿ ಮುಖ್ಯ ಕಚೇರಿ ಹೊಂದಿದೆ.. ಪ್ರಸ್ತುತ ಆರು ತಿಂಗಳ ಹಿಂದೆ ಹೊಸಪೇಟೆಯಲ್ಲಿ ಕೇಂದ್ರ ಕಚೇರಿ ಮಾಡಿಕೊಂಡಿದೆ... ಕರ್ನಾಟಕ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಬ್ರಾಂಚ್‌ಗಳನ್ನ ಹೊಂದಿದೆ ಎನ್ನುವುದು ಅವರ ಮಾತಾಗಿದೆ.. 


ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕತ್ತೆ ಹಾಲು: 
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕತ್ತೆ ಹಾಲನ್ನು (Donkey Milk) ಔಷಧಿಗಳ ತಯಾರಿಕೆಯಲ್ಲಿ, ಸೋಪ್, ಕಾಸ್ಮೆಟಿಕ್ ತಯಾರಿಕೆ ಮಾಡಲು ಬಳಕೆ ಮಾಡಲಾಗುತ್ತಿದೆ. ಇನ್ನು ಜಿನ್ನಿ ಮಿಲ್ಕ್ ಕಂಪನಿಯಲ್ಲಿ 500 ಬಾಂಡ್ ಪೆಪರ್‌ನಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಕತ್ತೆ ಕೊಡಲಾಗುತ್ತೆ.. ಹಾಲು ಇಡಲು ಪ್ರಿಡ್ಜ್ ಕೂಡ ಅವರೆ ಕೊಡುತ್ತಾರೆ, ಪ್ರತಿ ದಿನ ಅವರೆ ಹಾಲನ್ನ ಖರೀದಿ ಮಾಡುತ್ತಾರೆ.. ಹತ್ತು ದಿನಗಳಿಗೊಮ್ಮೆ ಹಾಲಿನ ಪೇಮೆಂಟ್ ಮಾಡುತ್ತಾರಂತೆ....


ಇನ್ನೂ ಮೂರು ಲಕ್ಷ ಬಂಡವಾಳ ಹಾಕಿ ಕತ್ತೆ ಖರೀದಿ ಮಾಡೋದು ಹೇಗೆ...? ಯಾವ ಗ್ಯಾರಂಟಿ ಮೇಲೆ ಅಷ್ಟು ಹಣ ಕೊಟ್ಟು ಕತ್ತೆಗಳನ್ನ ಖರೀದಿ ಮಾಡಬೇಕು ಎನ್ನುವ ಪ್ರಶ್ನೆಗೆ.. ಲೀಗಲ್ ಆಗಿ ಅಗ್ರಿಮೆಂಟ್ ಮಾಡಿಕೊಡಲಾಗುತ್ತೆ.. ಇದರಲ್ಲಿ ಎಂಡಿ ಅಡ್ರೆಸ್ ಎಲ್ಲಾ ಇರುತ್ತೆ.. 


ಇದನ್ನೂ ಓದಿ- ಎಲೋನ್ ಮಸ್ಕ್‌ಗೆ ಪ್ರತಿಸ್ಪರ್ಧಿ ಆಗ್ತಾರಾ ಈ ಭಾರತೀಯ ಉದ್ಯಮಿ...!


ಜಿನ್ನಿ ಕಂಪನಿಯಲ್ಲಿ ಕೆಲಸ ಮಾಡುವವರು ಕೇಂದ್ರ ಕಚೇರಿ ಇದೆ ಅಂತಾರೆ.. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ.. ಸದ್ಯಕ್ಕೆ ಜಿನ್ನಿ ಕಂಪನಿ ಬಗ್ಗೆ ರೈತರಿಂದ ದೂರು ಬಂದಿವೆ, ಆ ಕಂಪನಿ ಬಗ್ಗೆ ಪರಿಶೀಲನೆ ಮಾಡಿ ಅಂತಾ ಅದರ ಪ್ರಕಾರವಾಗಿ ನಾವು ಪರಿಶೀಲನೆ ಮಾಡುತ್ತಿದ್ದೇವೆ.. ಪ್ರಾರಂಭದಲ್ಲಿ ಅವರು ಟ್ರೇಡ್ ಲೈಸೆನ್ಸ್ ತೆಗೆದುಕೊಳ್ಳ ಬೇಕಿತ್ತು ತೆಗೆದುಕೊಂಡಿಲ್ಲ.. ಹೀಗಾಗಿ ಅದರ ಬಗ್ಗೆ ಕ್ರಮ ಆಗುತ್ತೆ... ಇನ್ನು ಇತರೆ ವಿಚಾರವಾಗಿ ಪರಿಶೀಲನೆ ಮಾಡಲು ಹೇಳಿದ್ದೇನೆ.. ರೈತರ ಬಗ್ಗೆ ನಮಗೆ ಕಾಳಜಿ ಇದೆ.. ಕೆಲ ರೈತರು ಜಿನ್ನ ಕಂಪನಿಯಿಂದ ಒಳ್ಳೆದಾಗಿದೆ ಅಂತಾ ಹೇಳಿದ್ದಾರೆ.. ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಪರಿಶೀಲನೆ ಮಾಡಿ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೆವೆ ಎನ್ನುತ್ತಾರೆ.....


ಒಟ್ಟಿನಲ್ಲಿ ಒಂದ ಟೈಮ್‌ನಲ್ಲಿ ಕೆಲ್ಸಾ ಇಲ್ಲದವನಿಗೆ ಕತ್ತೆ ಮೆಯಿಸಲಿಕ್ಕೆ ಹೋಗು ಅಂತಿದ್ರು.. ಈಗ ನೋಡಿದ್ರೆ ಲಕ್ಷ - ಲಕ್ಷ ಹಣ ಕೊಟ್ಟು ಕತ್ತೆ ಖರೀದಿ ಮಾಡಿ ಕತ್ತೆ ಮೇಯಿಸಲಿಕ್ಕೆ ಹೋಗುತ್ತಿದ್ದಾರೆ. ಜೊತೆಗೆ ಲಕ್ಷಾಂತರ ರೂಪಾಯಿ ಹಣವನ್ನು ಅದರಿಂದ ಸಂಪಾದಿಸುತ್ತಾರೆ.. ಸದ್ಯಕ್ಕೆ ಇದೆಲ್ಲವೂ ಚೆನ್ನಾಗಿದ್ದು ಮುಂದೆ ಈ ಬಿಸಿನೆಸ್ ಹೇಗಿರುತ್ತೆ..? ಹೇಗೆ ನಡೆಯುತ್ತೆ ಎಂಬುದನ್ನ ಕಾದು ನೋಡಬೇಕಿದೆ....


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.