ನವದೆಹಲಿ: ಜಿಯೋ ತನ್ನ ಗ್ರಾಹಕರಿಗೆ 1 ತಿಂಗಳ ವ್ಯಾಲಿಡಿಟಿ ಪ್ಲಾನ್‌ನಿಂದ 1 ವರ್ಷದ ವ್ಯಾಲಿಡಿಟಿ ಪ್ಲಾನ್‌ವರೆಗೆ ವಿವಿಧ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಆದರೆ ಈಗ 1 ವರ್ಷದ ವ್ಯಾಲಿಡಿಟಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಕಂಪನಿಯು ಈ ಯೋಜನೆಯ ಮಾನ್ಯತೆ ಅಂದರೆ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಈಗ ಬಳಕೆದಾರರು ಹೆಚ್ಚಿನ ಡೇಟಾ ಜೊತೆಗೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ನೀವು ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ರೀಚಾರ್ಜ್ ಮಾಡಬಯಸಿದರೆ ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: 7th Pay Commission : ಕೇಂದ್ರ ನೌಕರರ DA ಬಾಕಿ ಬಗ್ಗೆ ಬಿಗ್ ಅಪ್ಡೇಟ್, ಸಂಸತ್ತಿನಲ್ಲಿ ಕೇಂದ್ರ ಸಚಿವರು ಹೇಳಿದ್ದು ಹೀಗೆ


ಈ ಯೋಜನೆ ಏನು?


ನಾವು ಮಾತನಾಡುತ್ತಿರುವ ರಿಚಾರ್ಜ್ ಪ್ಲಾನ್‍ನ ಬೆಲೆ 2999 ರೂ. ಈ ಪ್ಲಾನ್‌ನ ವೆಚ್ಚವು ನಿಮಗೆ ಹೆಚ್ಚು ಅನಿಸಬಹುದು. ಆದರೆ ಇದರಲ್ಲಿ ಮೊದಲು 365 ದಿನಗಳ ವ್ಯಾಲಿಡಿಟಿ ಇತ್ತು, ಆದರೆ ಈಗ ಅದನ್ನು 388 ದಿನಗಳವರೆಗೆ ಹೆಚ್ಚಿಸಲಾಗಿದೆ. ನೀವು ವರ್ಷವಿಡೀ ಸಿಂಧುತ್ವದ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಇದರ ಇತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ನಿಮಗೆ ದಿನಕ್ಕೆ 2.5 GB ಡೇಟಾ ನೀಡಲಾಗುತ್ತದೆ. ಹೀಗಾಗಿ ನೀವು 388 ದಿನಕ್ಕೆ ಒಟ್ಟು 912.5 GB ಡೇಟಾದ ಪ್ರಯೋಜನ ಪಡೆಯುತ್ತೀರಿ.  


ಈ ಯೋಜನೆಯಲ್ಲಿ ನಿಮಗೆ ಅನಿಯಮಿತ ಧ್ವನಿ ಕರೆ ಜೊತೆಗೆ ಪ್ರತಿದಿನ 100 sms ನೀಡಲಾಗುತ್ತದೆ. ಅಷ್ಟೇ ಅಲ್ಲ ಈ ಯೋಜನೆಯಲ್ಲಿ ಜಿಯೋ ಟಿವಿ ಜೊತೆಗೆ ಗ್ರಾಹಕರಿಗೆ ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೌಲಭ್ಯವನ್ನು ಉಚಿತವಾಗಿದೆ ನೀಡಲಾಗಿದೆ.


ಇದನ್ನೂ ಓದಿ: Income Tax Department : ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡದಿದ್ದರೆ ₹10 ಸಾವಿರ ದಂಡ : ಈಗಲೇ ಮಾಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.