7th Pay Commission DA Hike: ಮೇ ಅಂತ್ಯ, ಜೂನ್ ಪ್ರಾರಂಭದಲ್ಲಿಯೇ ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ಬಂದಿದೆ. ಕೆಲವು ತಿಂಗಳುಗಳ ಕಾಯುವಿಕೆಯ ನಂತರ, ಕೇಂದ್ರ ನೌಕರರ ತುಟ್ಟಿಭತ್ಯೆಯ ಕುರಿತ ಮಾಹಿತಿಯು ಸಂಪೂರ್ಣ ಸ್ಪಷ್ಟವಾಗಿ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಎಪ್ರಿಲ್‌ ನಲ್ಲಿ ಬಂದಿರುವ ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಕೇಂದ್ರ ನೌಕರರಿಗೆ ಈ ಬಾರಿ ಎಷ್ಟು ಡಿಎ ಹೆಚ್ಚಳವಾಗಲಿದೆ ಎಂಬುದು ಸ್ಪಷ್ಟವಾಗಿದೆ. ಏಪ್ರಿಲ್ ಆಧಾರದ ಮೇಲೆ ಬಂದಿರುವ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳಲ್ಲಿ ಉತ್ತಮ ಜಿಗಿತ ಕಂಡುಬಂದಿದೆ. ಇದರಿಂದ ನೌಕರರ ಡಿಎ ಶೇ.42 ರಿಂದ ಶೇ.46ಕ್ಕೆ ಏರಿಕೆಯಾಗಲಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ: ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!


ಪ್ರಸ್ತುತ ಸರ್ಕಾರದಿಂದ ನೌಕರರಿಗೆ ಶೇ.42 ತುಟ್ಟಿಭತ್ಯೆ ನೀಡಲಾಗುತ್ತಿದೆ. 4ರಷ್ಟು ಏರಿಕೆಯಾದ ನಂತರ ಶೇ.46ಕ್ಕೆ ಹೆಚ್ಚಳ ಕಾಣಲಿದೆ. ಈ ಬಾರಿ ಎಐಸಿಪಿಐ ಸೂಚ್ಯಂಕದಲ್ಲಿ 0.72 ಅಂಕಗಳ ಏರಿಕೆಯಾಗಿದೆ. ಅಂಕಿಅಂಶಗಳ ಹೆಚ್ಚಳದಿಂದ 52 ಲಕ್ಷ ಕೇಂದ್ರ ನೌಕರರು ಮತ್ತು 48 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಈ ಮೊದಲು, ಜನವರಿ 1, 2023 ರಿಂದ, ಹೊಸ ತುಟ್ಟಿಭತ್ಯೆಯನ್ನು ಸರ್ಕಾರವು ಜಾರಿಗೆ ತಂದಿತ್ತು.


ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಇದನ್ನು AICPI ಸೂಚ್ಯಂಕದ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ. ಮೊದಲ ತಿಂಗಳ AICPI ಡೇಟಾವನ್ನು ಪ್ರತಿ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಳೆದ ಮೇ ತಿಂಗಳಿನಲ್ಲಿ ಏಪ್ರಿಲ್ ತಿಂಗಳ ಅಂಕಿ ಅಂಶವನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್‌ ಗೆ ಹೋಲಿಸಿದರೆ ಏಪ್ರಿಲ್‌ ನ ಎಐಸಿಪಿಐ ಸೂಚ್ಯಂಕ ಹೆಚ್ಚಾಗಿದೆ. ಮಾರ್ಚ್‌ ನಲ್ಲಿ 133.3 ಪಾಯಿಂಟ್‌ ಗಳಷ್ಟಿತ್ತು, ಈಗ ಅದು 0.72 ಪಾಯಿಂಟ್‌ ಗಳಿಂದ 134.02 ಕ್ಕೆ ಏರಿದೆ. ಇದರಿಂದ ಈ ಬಾರಿಯೂ ಡಿಎ ಉತ್ತಮ ಏರಿಕೆಯಾಗಲಿದೆ ಎಂಬುದು ಸ್ಪಷ್ಟವಾಗಿದೆ.


ಈ ವರ್ಷದ ಜನವರಿಯಿಂದ ಏಪ್ರಿಲ್ ವರೆಗೆ ನೋಡುವುದಾದರೆ, ಫೆಬ್ರವರಿಯಲ್ಲಿ ಸಂಖ್ಯೆ ಕಡಿಮೆಯಾಗಿದೆ. ಉಳಿದ ತಿಂಗಳುಗಳಲ್ಲಿ, ಅದರಲ್ಲಿ ಸ್ಥಿರವಾದ ಏರಿಕೆ ಕಂಡುಬರುತ್ತಿದೆ. ಜನವರಿ 2023 ರಲ್ಲಿ, ಎಐಸಿಪಿಐ ಸೂಚ್ಯಂಕವು 132.8 ಪಾಯಿಂಟ್‌ ಗಳಷ್ಟಿತ್ತು. ಇದಾದ ಬಳಿಕ ಫೆಬ್ರವರಿಯಲ್ಲಿ 132.7 ಅಂಕಗಳಿಗೆ ಕುಸಿಯಿತು. ನಂತರ ಮಾರ್ಚ್ ನಲ್ಲಿ ಜಿಗಿತ ಕಂಡು 133.3 ಪಾಯಿಂಟ್ ಆಯಿತು. ಈಗ ಏಪ್ರಿಲ್ ನಲ್ಲಿ 134.02 ಅಂಕಗಳಿಗೆ ಏರಿಕೆಯಾಗಿದೆ.


ಏಪ್ರಿಲ್‌ ನ AICPI ಸೂಚ್ಯಂಕದ ಆಧಾರದ ಮೇಲೆ, ತುಟ್ಟಿಭತ್ಯೆ 45% ಕ್ಕಿಂತ ಹೆಚ್ಚಾಗಿ 45.04% ತಲುಪಿದೆ. ಮೇ ಮತ್ತು ಜೂನ್‌ಗೆ ಎಐಸಿಪಿಐ ಸೂಚ್ಯಂಕದ ಸಂಖ್ಯೆ ಇನ್ನೂ ಬರಬೇಕಿದೆ. ಈ ಹಿಂದೆ ಮಾರ್ಚ್ ಅಂಕಿಅಂಶಗಳ ಆಧಾರದ ಮೇಲೆ ಡಿಎ ಸ್ಕೋರ್ ಶೇ 44.46 ರಷ್ಟಿತ್ತು.


ಡೇಟಾವನ್ನು ಯಾರು ಬಿಡುಗಡೆ ಮಾಡುತ್ತಾರೆ?


ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಸರ್ಕಾರವು ನೌಕರರ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಪ್ರತಿ ತಿಂಗಳ ಕೆಲಸದ ಕೊನೆಯ ದಿನದಂದು, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಅಂಕಿಅಂಶಗಳನ್ನು ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡುತ್ತದೆ. ಈ ಸೂಚ್ಯಂಕವನ್ನು 88 ಕೇಂದ್ರಗಳು ಮತ್ತು ಇಡೀ ದೇಶಕ್ಕೆ ಸಿದ್ಧಪಡಿಸಲಾಗಿದೆ.


ಇದನ್ನೂ ಓದಿ: ಮೊದಲ ಮೂರು ಗ್ಯಾರೆಂಟಿಗಳಿಗೆ ಇಪ್ಪತ್ತು ಐದು ಸಾವಿರ ಕೋಟಿ ಹೊರೆ ಅಂದಾಜು..!


ಎಷ್ಟು ಹಣ ಹೆಚ್ಚಾಗುತ್ತದೆ?


ಪ್ರಸ್ತುತ ಸರ್ಕಾರಿ ನೌಕರನ ಮೂಲ ವೇತನ 18000 ಆಗಿದ್ದರೆ, ಇದರ ಮೇಲೆ 42 ಪ್ರತಿಶತ ತುಟ್ಟಿಭತ್ಯೆ ಅಂದರೆ 7560 ರೂ. ಹೆಚ್ಚಾಗುತ್ತದೆ. ಇನ್ನು ತುಟ್ಟಿಭತ್ಯೆ ಶೇ.46ಕ್ಕೆ ಹೆಚ್ಚಾದರೆ, ತಿಂಗಳಿಗೆ ರೂ. 8280ಕ್ಕೆ ಏರಿಕೆಯಾಗಲಿದೆ. ಅದರಂತೆ ಪ್ರತಿ ತಿಂಗಳು 720 ರೂ.ನಂತೆ ವೇತನ ಹೆಚ್ಚಳವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.