ಬೆಂಗಳೂರು : Mango Price In Market : ಬಿಸಿಲಿನ ಹೊಡೆತ ಈ ವರ್ಷ ಮಾವಿನ ಹಣ್ಣಿನ ಮೇಲೂ ಬಿದ್ದಿದೆ. ಬೇಸಿಗೆ ಬಂತೆಂದರೆ ಸಾಕು ಎಲ್ಲಿ ನೋಡಿದರೂ ಮಾವಿನ ಹಣ್ಣು ಕಾಣಿಸುತ್ತದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿಯೇ ವಿವಿಧ ತಳಿಯ ಮಾವು ಮಂಡಿಗೆ ಲಗ್ಗೆ ಇಟ್ಟಾಗುತ್ತದೆ. ಆದರೆ ಈ ವರ್ಷ ಮಳೆ ಬಾರದ ಪರಿಣಾಮ  ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌ 


COMMERCIAL BREAK
SCROLL TO CONTINUE READING

ಮಾವುಗಳ ಬೆಲೆಯಲ್ಲಿ ಹೆಚ್ಚಳ : 
ಸಾಮಾನ್ಯವಾಗಿ ಮಾರ್ಚ್, ಏಪ್ರೀಲ್‌ ತಿಂಗಳಲ್ಲಿಯೇ ರಾಜ್ಯರಾಜಾಧಾನಿಯಲ್ಲಿ ಮಾವಿನ ಸೀಸನ್ ಆರಂಭವಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳು ಆರಂಭವಾದರೂ ಮಾವಿನ ಮಂಡಿಗೆ ಹಣ್ಣುಗಳು ಇನ್ನು ಬಂದಿಲ್ಲ.‌
 ಮಾರುಕಟ್ಟೆಗೆ ನಿರೀಕ್ಷಿತ ರೂಪದಲ್ಲಿ ಮಾವಿನ ಹಣ್ಣಿನ ಪೂರೈಕೆಯಾಗದ ಕಾರಣ ಮಾವಿನ ಹಣ್ಣಿನ ಬೆಲೆ ಕೂಡಾ ಹೆಚ್ಚಾಗಿದೆ.ಈ ಬೆಲೆ ಏರಿಕೆಯ ನಡುವೆಯೂ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ. 


ಇದನ್ನೂ ಓದಿ : 35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ


ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.6-7ರಷ್ಟು ವ್ಯಾಪಾರ ಕುಸಿತ ಕಂಡಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವಿನ ಹಣ್ಣು ಪೂರೈಕೆ ಆಗುವ ಸಾಧ್ಯತೆ ಇದೆ.ನೆರೆಯ ತಮಿಳುನಾಡು ಮಾವಿನ ಫಸಲಿಗೆ ಹೆಸರುವಾಸಿ.ಇಲ್ಲಿ ಮಾವು ಬೆಳೆಗಾರರು ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಕೃಷ್ಣಗಿರಿ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಮಾವಿನ ಹಣ್ಣು ಪೂರೈಕೆ ಆಗುತ್ತಿದೆ. ಕೆಲವರು ರಾಸಾಯಿನಿಕಗಳನ್ನು ಬಳಕೆ ಮಾಡಿ ಹಣ್ಣು ಮಾಡಿರುವ ಹಿನ್ನೆಲೆಯಲ್ಲಿ ಅವುಗಳು ರಚಿಕಳೆದುಕೊಂಡಿವೆ. ಇನ್ನು ಕೆಲವು ಮಾವಿನ ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಮಹಾರಾಷ್ಟ್ರದ ರತ್ನಾಗಿರಿ ಮೂಲದ ಅಲ್ಫೋನ್ಸೊ, ಸಿಂಧೂರ ಮತ್ತು ಬಾದಾಮಿ ಕಳೆದ ವರ್ಷ  ಕೆಜಿಗೆ 100 ರೂ.ಗೆ ಮಾರಾಟ ಆಗಿತ್ತು. ಆದರೆ ಈ ಬಾರಿ ಪೂರೈಕೆಯಿಲ್ಲದ ಹಿನ್ನೆಲೆಯಲ್ಲಿ ಈ ಹಣ್ಣುಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ  ಕೆಜಿಗೆ 150-200 ರೂ.ಗೆ ಮಾರಾಟವಾಗುತ್ತದೆ.  


ಇದನ್ನೂ ಓದಿ : Home Loan Prepayment: ಹೋಮ್ ಲೋನ್ ಪೂರ್ವಪಾವತಿ ಮಾಡುವಾಗ ಈ 5 ವಿಷಯಗಳನ್ನು ನೆನಪಿಡಿ


ಹಣ್ಣುಗಳ ಬೆಲೆ ಎಷ್ಟಿದೆ  ನೋಡೋಣ : 
ಹಿಮಾಯತ್ - 300
ಬಾದಾಮಿ - 250 
ಸಕ್ಕರೆಗುತ್ತಿ- 150 
ಬಾಗಾನ್ ಪಲ್ಲಿ - 150 
ಸಿಂಧೂರ - 150 
ಕೇಸರಿ - 200
ಕಸ್ತೂರಿ - 200
ಅಲ್ಪಾನ್ಸಾ- 300
ರಸ್ಪುರಿ - 160



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.