ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ! ಡಿಎ ಅರಿಯರ್ಸ್ ನೊಂದಿಗೆ ಖಾತೆ ಸೇರಲಿದೆ ಇಷ್ಟು ದೊಡ್ಡ ಮೊತ್ತ
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಶೀಘ್ರದಲ್ಲೇ ಹೆಚ್ಚಿಸಲಿದೆ. ಇದಲ್ಲದೇ ಬಾಕಿ ಇರುವ ಡಿಎ ಹಣವೂ ಈ ಬಾರಿ ನೌಕರರ ಖಾತೆ ಸೇರುವ ನಿರೀಕ್ಷೆ ಇದೆ.
ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ. ಈ ವರ್ಷ ನೌಕರರು ಮತ್ತು ಪಿಂಚಣಿದಾರರಿಗೆ ಬಹಳ ಮುಖ್ಯವಾದ ವರ್ಷವಾಗಿದೆ. ಏಕೆಂದರೆ ಸರ್ಕಾರ ಒಂದೇ ಬಾರಿಗೆ ಎರಡು ದೊಡ್ಡ ಗಿಫ್ಟ್ ಸಿಗಲಿದೆ. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಶೀಘ್ರದಲ್ಲೇ ಹೆಚ್ಚಿಸಲಿದೆ. ಇದಲ್ಲದೇ ಬಾಕಿ ಇರುವ ಡಿಎ ಹಣವೂ ಈ ಬಾರಿ ನೌಕರರಖಾತೆ ಸೇರುವ ನಿರೀಕ್ಷೆ ಇದೆ.
ತುಟ್ಟಿಭತ್ಯೆಯಲ್ಲಿ ಹೆಚ್ಚಳ - 1 ಕೋಟಿ ಕುಟುಂಬಗಳಿಗೆ ಲಾಭ :
ತುಟ್ಟಿ ಭತ್ಯೆ ಹೆಚ್ಚಳವಾದಾಗ ಉದ್ಯೋಗಿಗಳ ಮೂಲ ವೇತನದಲ್ಲಿ ಗಣನೀಯ ಹೆಚ್ಚಳವಾಗುವುದು. ಡಿಎ ಹೆಚ್ಚಳವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಮುಂದಿನ ತಿಂಗಳ ಆರಂಭದಲ್ಲಿ ಈ ಬಗ್ಗೆ ಖಂಡಿತವಾಗಿಯೂ ಘೋಷಣೆ ಮಾಡಬಹುದು ಎಂದೇ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 25,000 ರೂ. ಪಿಂಚಣಿ ! ನೆಮ್ಮದಿಯಿಂದ ಸಾಗುವುದು ವೃದ್ದಾಪ್ಯ ಜೀವನ
ಡಿಎ ಹೆಚ್ಚಳ: ಶೀಘ್ರದಲ್ಲೇ ಹೊರ ಬೀಳಲಿದೆ ಶುಭ ಸುದ್ದಿ :
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಮೋದಿ ಸರ್ಕಾರ ಆದಷ್ಟು ಬೇಗ ಭಾರಿ ಏರಿಕೆ ಮಾಡಲಿದೆ. ಈ ಮೂಲಕ ನೌಕರರ ವೇತನದಲ್ಲಿಯೂ ಉತ್ತಮ ಏರಿಕೆಯಾಗಲಿದೆ. AICPI ದತ್ತಾಂಶದ ಆಧಾರದ ಮೇಲೆ, ಈ ಬಾರಿಯೂ DA ಸುಮಾರು 4 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ಒಂದು ಮೂಲದ ಪ್ರಕಾರ ಡಿಎ ಶೇಕಡಾ 3 ರಷ್ಟು ಮಾತ್ರ ಹೆಚ್ಚಳವಾಗುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಸರ್ಕಾರದ ಅಧಿಸೂಚನೆಯ ನಂತರವೇ ಈ ಬಗ್ಗೆ ಸ್ಪಷ್ಟನೆ ಹೊರ ಬೀಳಲಿದೆ.
7ನೇ ವೇತನ ಆಯೋಗ: ಹಬ್ಬದ ಸಮಯದಲ್ಲಿ ಒಳ್ಳೆಯ ಸುದ್ದಿ :
ಹಬ್ಬ ಹರಿದಿನಗಳಿಗೆ ಮುನ್ನ ಅಂದರೆ ನವರಾತ್ರಿ ಆರಂಭಕ್ಕೂ ಮುನ್ನ ಸರ್ಕಾರ ಡಿಎ ಹೆಚ್ಚಳವನ್ನು ಘೋಷಿಸಬಹುದು ಎಂದು ಮೂಲಗಳು ಸೂಚಿಸಿವೆ. ಈ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಸಾಮಾನ್ಯವಾಗಿ ಸರ್ಕಾರವು ಪ್ರತಿ ವರ್ಷ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸುತ್ತದೆ. ಈ ಹೆಚ್ಚಳ ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತವೆ.
ಇದನ್ನೂ ಓದಿ : ವಾರ ಪೂರ್ತಿ ಇಳಿಕೆ ಕಂಡ ನಂತರ ಇಂದು ಎಷ್ಟಿದೆ 10 ಗ್ರಾಂ ಚಿನ್ನದ ಬೆಲೆ ?
ಖಾತೆ ಸೇರುವುದು ಬಾಕಿ ಡಿಎ :
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರವು ನೌಕರರ ಮೂಲ ವೇತನ ಹೆಚ್ಚಳವನ್ನು ಸ್ಥಗಿತಗೊಳಿಸಿತ್ತು. ಈ ಅವಧಿಯ ತುಟ್ಟಿಭತ್ಯೆಯ ಅರಿಯರ್ಸ್ ಮೊತ್ತ ಇನ್ನು ಕೂಡಾ ಪಾವತಿಯಾಗಿಲ್ಲ. ಇದನ್ನು ನೀಡುವಂತೆ ಕೇಂದ್ರ ಸರ್ಕಾರಿ ನೌಕರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಈಗ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಬಹುದು ಎನ್ನಲಾಗಿದೆ.
ಈಗ ಜುಲೈ 2023 ಕ್ಕೆ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದರೆ, ನೌಕರರು ತಮ್ಮ ವೇತನದೊಂದಿಗೆ ಜುಲೈ 1 ರಿಂದ ಬಾಕಿ ಇರುವ ಮೊತ್ತವನ್ನು ಪಡೆಯುತ್ತಾರೆ.
ಕನಿಷ್ಠ ಮೂಲ ವೇತನ 18,000 ಮೇಲೆ ಡಿಎ ಹೆಚ್ಚಳ ಲೆಕ್ಕಾಚಾರ :
ನೌಕರರ ಮೂಲ ವೇತನ - ತಿಂಗಳಿಗೆ 18,000 ರೂ
ಹೊಸ ತುಟ್ಟಿಭತ್ಯೆ (46%) - ತಿಂಗಳಿಗೆ ರೂ 8280
ಹಿಂದಿನ ತುಟ್ಟಿಭತ್ಯೆ (42%) - ರೂ. 7560
ತುಟ್ಟಿಭತ್ಯೆ ಹೆಚ್ಚಳ - 8280-7560 = ರೂ. 720
ವಾರ್ಷಿಕ ವೇತನ ಹೆಚ್ಚಳ 720X12 = ರೂ.8640
ಇದನ್ನೂ ಓದಿ : ಇನ್ನು ಎನ್ ಪಿಎಸ್ ನಲ್ಲೂ ಸಿಗುವುದು ಈ ಲಾಭ ! ಪಿಂಚಣಿದಾರರಲ್ಲಿ ಸಂತಸ
56,900 ರೂ.ಗಳ ಗರಿಷ್ಠ ಮೂಲ ವೇತನದಲ್ಲಿ ಡಿಎ ಹೆಚ್ಚಳ ಲೆಕ್ಕಾಚಾರ :
ನೌಕರರ ಮೂಲ ವೇತನ = ತಿಂಗಳಿಗೆ 56,900 ರೂ
ಹೊಸ ತುಟ್ಟಿಭತ್ಯೆ (46%) = ತಿಂಗಳಿಗೆ ರೂ 26,174
ಹೊಸ ತುಟ್ಟಿಭತ್ಯೆ (42%) = ರೂ. 23,898
ತುಟ್ಟಿಭತ್ಯೆ ಹೆಚ್ಚಳ - 26,174-23,898 = ರೂ. 2,276
ವರ್ಷಕ್ಕೆ ಹೆಚ್ಚಳ = 2276X12= ರೂ. 27,312
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.