ನವದೆಹಲಿ : LIC New Jeevan Shanti Policy : ನಮ್ಮ ಇಂದಿನ ಜೀವನ, ಇಂದಿನ ಖರ್ಚು ವೆಚ್ಚಗಳ ಬಗ್ಗೆ ಯೋಚಿಸುವುದು ಎಷ್ಟು ಮುಖ್ಯವೋ,   ವೃದ್ಧಾಪ್ಯವನ್ನು ಸುರಕ್ಷಿತವಾಗಿಡುವುದು ಕೂಡಾ ಅಷ್ಟೇ  ಮುಖ್ಯ. ಈ ಬಗ್ಗೆ ನೀವು ಕೂಡಾ ಯೋಚನೆ ಮಾಡುತ್ತಿದ್ದರೆ, ಎಲ್ಐಸಿಯಲ್ಲಿ (LIC) ಉತ್ತಮವಾದ ಸ್ಕೀಮ್ ಇದೆ. ಅದುವೇ  ಎಲ್ಐಸಿ ಜೀವನ್ ಶಾಂತಿ ಪಾಲಿಸಿ (LIC Jeevan Shanthi policy).  ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ, ಜೀವನ ಪೂರ್ತಿ ಪಿಂಚಣಿ ಪಡೆಯಬಹುದು. ಅಂದರೆ,  ಪಾಲಿಸಿ ಮೂಲಕ ನಿವೃತ್ತಿಯ ನಂತರದ ನಿಮ್ಮ ಜೀವನವನ್ನು ನೆಮ್ಮದಿಯಿಂದ ಕಳೆಯಬಹುದು. 


COMMERCIAL BREAK
SCROLL TO CONTINUE READING

ಏನಿದು ಎಲ್‌ಐಸಿ ಜೀವನ ಶಾಂತಿ ಯೋಜನೆ :
ಈ ಯೋಜನೆಯು ಎಲ್ಐಸಿಯ (LIC) ಹಳೆಯ ಯೋಜನೆಯಾದ ಜೀವನ್ ಅಕ್ಷಯ್ ಅನ್ನು ಹೋಲುತ್ತದೆ. ಜೀವನ ಶಾಂತಿ ಪಾಲಿಸಿಯಲ್ಲಿ ನಿಮಗೆ ಎರಡು ಆಯ್ಕೆಗಳಿವೆ. ಮೊದಲನೆಯದು ಇಮ್ಮಿಡಿಯೇಟ್ ಎನ್ಯುಟಿ ಮತ್ತು  ಎರಡನೆಯದು ಡೆಫರಡ್   ಎನ್ಯುಟಿ. ಇದೊಂದು ಸಿಂಗಲ್ ಪ್ರೀಮಿಯಂ ಪ್ಲಾನ್. ಮೊದಲ ಅಂದರೆ ಇಮ್ಮಿಡಿಯೇಟ್ ಎನ್ಯುಟಿ ಅಡಿಯಲ್ಲಿ ಪಾಲಿಸಿ ತೆಗೆದುಕೊಂಡರೆ,  ತಕ್ಷಣ ಪಿಂಚಣಿ ಸೌಲಭ್ಯ ಲಭ್ಯವಿರುತ್ತದೆ. ಮತ್ತೊಂದೆಡೆ, ಡೆಫರಡ್ ಎನ್ಯುಟಿ ಆಯ್ಕೆಯಲ್ಲಿ, ಪಾಲಿಸಿಯನ್ನು ತೆಗೆದುಕೊಂಡ 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ (Pension) ಸೌಲಭ್ಯ ಆರಂಭವಾಗುತ್ತದೆ.  


ಇದನ್ನೂ ಓದಿ : SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಕಾರ್ ಹಾಗೂ ಗೋಲ್ಡ್ ಲೋನ್ ಮೇಲೆ ಸಿಗುತ್ತಿದೆ ಈ ಅದ್ಭುತ ಕೊಡುಗೆ


ಎಷ್ಟು ಪಿಂಚಣಿ ಸಿಗುತ್ತದೆ : 
ಈ ಯೋಜನೆಯಡಿ ಪಿಂಚಣಿ ಮೊತ್ತವನ್ನು ನಿಗದಿಪಡಿಸಲಾಗಿಲ್ಲ. ನಿಮ್ಮ ಹೂಡಿಕೆ, ವಯಸ್ಸು ಮತ್ತು ಮುಂದೂಡುವಿಕೆಯ ಅವಧಿಗೆ ಅನುಗುಣವಾಗಿ ಪಿಂಚಣಿ ಸಿಗುತ್ತದೆ. ಹೂಡಿಕೆ ಮತ್ತು ಪಿಂಚಣಿ ಆರಂಭಿಸುವ ಅವಧಿ ಅಥವಾ ನಿಮ್ಮ ವಯಸ್ಸು, ಎಷ್ಟಿರುತ್ತದೆಯೋ, ನೀವು ಅಷ್ಟೇ ಪಿಂಚಣಿ ಪಡೆಯಬಹುದು. ನೀವು ಮಾಡುವ ಹೂಡಿಕೆಯ ಮೇಲೆ ಶೇಕಡಾವಾರು ಪ್ರಕಾರ ಎಲ್ಐಸಿ (LIC Policy) ಪಿಂಚಣಿ ನೀಡುತ್ತದೆ.


ಯಾರಿಗೆ ಸಿಗುತ್ತದೆ ಲಾಭ : 
ಎಲ್‌ಐಸಿಯ ಈ ಯೋಜನೆಯನ್ನು ಕನಿಷ್ಠ 30 ವರ್ಷ ಮತ್ತು ಗರಿಷ್ಠ 85 ವರ್ಷಗಳವರೆಗಿನ ವ್ಯಕ್ತಿಗಳು ತೆಗೆದುಕೊಳ್ಳಬಹುದು. ಇದಲ್ಲದೇ, ಜೀವನ್ ಶಾಂತಿ ಯೋಜನೆಯಲ್ಲಿ ಪಿಂಚಣಿ ಪ್ರಾರಂಭವಾದ 1 ವರ್ಷದ ನಂತರ ಸಾಲವನ್ನು ಪಡೆಯಬಹುದು  ಮತ್ತು ಪಿಂಚಣಿ ಪ್ರಾರಂಭವಾದ 3 ತಿಂಗಳ ನಂತರ ಅದನ್ನು ಸರೆಂಡರ್ ಮಾಡಬಹುದು. ಎರಡೂ ಆಯ್ಕೆಗಳಿಗೆ ಪಾಲಿಸಿಯನ್ನು ತೆಗೆದುಕೊಳ್ಳುವಾಗ ವಾರ್ಷಿಕ ದರಗಳನ್ನು ಖಾತರಿಪಡಿಸಲಾಗುತ್ತದೆ. ಆದರೆ ಈ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಒಮ್ಮೆ ಆಯ್ಕೆ ಮಾಡಿದ ಆಯ್ಕೆಯನ್ನು ಬದಲಾಯಿಸಲು ಸಾಧ್ಯವಿರುವುದಿಲ್ಲ. ಈ ಯೋಜನೆಯನ್ನು ಆಫ್‌ಲೈನ್ ಹಾಗೂ ಆನ್‌ಲೈನ್‌ (Online) ಎರಡರಲ್ಲಿಯೂ ಖರೀದಿಸಬಹುದು.


ಇದನ್ನೂ ಓದಿ : ನಿಮಗೆ ಬೇಕಾದ ಸಮಯದಲ್ಲಿ ಸಿಲಿಂಡರ್ ಪಡೆಯಲು ಹೀಗೆ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ