ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಯುವಕರೇ ಹೆಚ್ಚು ಫಿದಾ
Vande Bharat Express: ಭಾರತೀಯ ರೈಲು ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಾನುರಾಗಿಯಾಗಿರುವ ರೈಲು ವಂದೇ ಭಾರತ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಐಷಾರಾಮಿ ಹಾಗೂ ಪ್ರಯಾಣಿಕರ ಸ್ನೇಹಿಯಾದ ವಂದೇ ಭಾರತ ಟ್ರೇನ್ ಗೆ ಭಾರೀ ಬೇಡಿಕೆ ಸಹ ಬಂದಿದೆ.
Vande Bharat Express: ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಗಮವಾಗಿ, ಅತ್ಯಂತ ಪ್ರೀತಿಯಿಂದ ಹಾಗೂ ಸರಳವಾಗಿ ಹೆಚ್ಚು ಹೆಚ್ಚು ಸಾರಿಗೆಯಲ್ಲಿ ರೈಲು ಸೇವೆಯನ್ನು ಪ್ರಯಾಣಿಕರು ಇಷ್ಟ ಪಡುತ್ತಿದ್ದಾರೆ. ಅದರಲ್ಲೂ ಕೇಲವೇ ದಿನಗಳ ಹಿಂದೇಯಷ್ಟೇ ಲೋಕಾರ್ಪಣೆಗೊಂಡ ವಂದೇ ಭಾರತ ರೈಲು ತುಂಬಾ ಕಡಿಮೆ ಸಮಯದಲ್ಲಿಯೇ ಜನರ ಮನ್ನಣೆ ಪಡೆದಿದೆ.
ಭಾರತೀಯ ರೈಲು ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಾನುರಾಗಿಯಾಗಿರುವ ರೈಲು ವಂದೇ ಭಾರತ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಐಷಾರಾಮಿ ಹಾಗೂ ಪ್ರಯಾಣಿಕರ ಸ್ನೇಹಿಯಾದ ವಂದೇ ಭಾರತ ಟ್ರೇನ್ ಗೆ ಭಾರೀ ಬೇಡಿಕೆ ಸಹ ಬಂದಿದೆ. ಈ ರೈಲಿನ ಸೇವೆಯನ್ನು ಯುವ ಪ್ರಯಾಣಿಕರು ಹೆಚ್ಚು ಲೈಕ್ ಮಾಡಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಕೇಂದ್ರ ಸರ್ಕಾರ ಜನರ ಪ್ರಯಾಣಿಕ್ಕೆ ಅನುಕೂಲ ಆಗಲಿ ಅಂತಾ ಪರಿಚಯಿಸಿರುವ ವಂದೇ ಭಾರತ್ ಎಕ್ಸಪ್ರೆಸ್ ಟ್ರೇನ್ ಯುವಕರ ಅಚ್ಚುಮೆಚ್ಚಿನ ಆಯ್ಕೆಯಾಗಿ ಹೊರ ಹೊಮ್ಮಿದ್ದು, ಅದರಲ್ಲೂ ಐಟಿ ಬಿಟಿ ಹಾಗೂ ಸರ್ಕಾರಿ, ಅರೆ ಸರಕಾರಿ ನೌಕರಸ್ಥ ಯುವಕರಿಂದ ಬಹುಬೇಡಿಕೆ ಬಂದಿದೆ.
ಇದನ್ನೂ ಓದಿ- ದೇಶದ ಅತಿದೊಡ್ಡ ರೈಲ್ವೆ ಜಂಕ್ಷನ್: ಇಲ್ಲಿಂದ ದೇಶದ ಮೂಲೆ ಮೂಲೆಗೂ ಸಿಗುತ್ತೆ ಟ್ರೈನ್
ಸಮೀಕ್ಷೆಯೊಂದರ ಪ್ರಕಾರ, ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ 25 ರಿಂದ 59 ವಯೋಮಿತಿ ಪ್ರಯಾಣಿಕರು ಶೇ 62ರಷ್ಟು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ, 18-24 ವಯೋಮಿತಿಯ ಯುವಕರು 20%, 25-34 ವರ್ಷ ವಯಸ್ಸಿನ ಯುವಕರು 20% ಹಾಗೂ 35-49 ವರ್ಷ ವಯಸ್ಸಿನ ಪ್ರಯಾಣಿಕರು 30% ಸಂಚರಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ವಂದೇ ಭಾರತ್ ರೈಲು ಸಂಚಾರ ತ್ವರಿತ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ. ಇದರಿಂದ ಸಮಯ ಉಳಿತಾಯ ಕೂಡ ಆಗಿದೆ ಎಂದು ವಂದೇ ಭಾರತ್ ರೈಲು ಪ್ರಯಾಣಿಕರಾದ ವೈಷ್ಣವಿ, ಚೇತನಾ, ಸಿದ್ದು ಹಾಗೂ ದೇವು ಎಂಬುವವರು ತಮ್ಮ ಅಭಿಪ್ರಾಯ ಹಂಚಿಕೆಕೊಂಡಿದ್ದಾರೆ.
ಈ ಟ್ರೇನ್ ನಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಉತ್ತಮ ಆಸನಗಳಿವೆ. ಪ್ರತಿ ಸೀಟಿಗೆ ಟಚ್ ಆಧಾರಿತ ರೀಡಿಂಗ್ ಲೈಟ್‌ಗಳು, ಸ್ವಯಂಚಾಲಿತ ಪ್ಲಗ್ ಬಾಗಿಲುಗಳು, ಪ್ರತಿ ಸೀಟಿಗೆ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು, ಜಿಪಿಎಸ್ ಆಧಾರಿತ ಆಡಿಯೋ ವಿಶುವಲ್ ವ್ಯವಸ್ಥೆ, ಮನರಂಜನೆಗಾಗಿ ಆನ್ಬೋರ್ಡ್ ವೈ-ಫೈ, ಆರಾಮದಾಯಕ ಸೀಟುಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ- ಮಾರುಕಟ್ಟೆಯಲ್ಲಿ ಹೊಸ ಹವಾ ಕ್ರಿಯೇಟ್ ಮಾಡಲು ಬರುತ್ತಿದೆ ಈ ದೇಶೀ 5G ಫೋನ್..!
ವಂದೇ ಭಾರತ್ ಇದೊಂದು ಕ್ರಾಂತಿಕಾರಿ ಬದಲಾವಣೆ ಆಗಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ರೈಲು ಸಚಿವರ ಪರಿಶ್ರಮದ ಫಲವಾಗಿ ಇಂತಹ ಪ್ರಯಾಣಿಕರ ಸ್ನೇಹಿ ಟ್ರೈನ್ ಆರಂಭ ಮಾಡಲಾಯಿತು ಎಂದು ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ ಆರ್ ಪಾಟೀಲ್ ಅವರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.
ನೈರುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಆನೀಶ ಹೆಗಡೆ ಅವರು ಪ್ರಯಾಣಿಕರಿಗೆ ದಕ್ಷ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ಒದಗಿಸಲು ನೈರುತ್ಯ ರೈಲ್ವೆ ಬದ್ಧವಾಗಿದೆ ಎಂದರು.
ರೈಲು ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಡುತ್ತದೆ. ಹುಬ್ಬಳ್ಳಿ, ದಾವಣಗೆರೆ, ಯಶವಂತಪುರ ನಿಲುಗಡೆಯಾಗುತ್ತದೆ. ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 7.45ಕ್ಕೆ ಸಂಚಾರ ಆರಂಭಿಸುತ್ತದೆ. ಇನ್ನು ಸಹ ಹೆಚ್ಚು ಹೆಚ್ಚು ವಂದೇ ಭಾರತ್ ಟ್ರೇನ್ ಸಹ ಓಡಿಸಬೇಕು ಎಂಬ ಕೂಗು ಸಹ ಪ್ರಯಾಣಿಕರಿಂದ ಕೇಳಿ ಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.