Searching For Diamond: ವಿಜಯನಗರ ಸಾಮ್ರಾಜ್ಯದಲ್ಲಿ ವಜ್ರ-ವೈಡೂರ್ಯಗಳನ್ನು ರಸ್ತೆಗಳಲ್ಲಿ ಮಾರುತ್ತಿದ್ದರು ಎಂಬ ಗತವೈಭವದ ವರ್ಣನೆಯನ್ನು ನೀವು ಕೇಳಿರಬಹುದು. ಆದರೆ, ವಿಜಯನಗರ ಅರಸರು ಆಳಿದ ಈ ಪ್ರದೇಶಗಳಲ್ಲಿ ಇಂದಿಗೂ ಕೂಡ ವಜ್ರ ಸಿಗುತ್ತೆ ಎಂದರೆ ನೀವು ನಂಬುತ್ತೀರಾ! ಇದು ನಂಬಲಸಾಧ್ಯವಾದರೂ ಸತ್ಯ. 


COMMERCIAL BREAK
SCROLL TO CONTINUE READING

ವಿಜಯನಗರ ಅರಸರು ಆಳಿದ ಗ್ರಾಮಗಳಲ್ಲಿ ಸಿಗುತ್ತಂತೆ ವಜ್ರಗಳು..!
ಹೌದು, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ರಾಯಲಸೀಮೆ ಅಮೂಲ್ಯವಾದ ಕಲ್ಲುಗಳು ಮತ್ತು ವಜ್ರಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿದ್ದ ವಜ್ರಕರೂರು, ತುಗ್ಗಲಿ, ಜೊನ್ನಗಿರಿ, ಮಡ್ಡಿಕೇರಾ, ಪಗಿದಿರೈ, ಪೆರವಳಿ, ಮಹಾನದಿ, ಮಹದೇವಪುರಂ ಮುಂತಾದ ಪ್ರದೇಶಗಳು ವಜ್ರ ಬೇಟೆಗಾರರ ​​ಪಾಲಿಗೆ ಅಚ್ಚುಮೆಚ್ಚಿನ ಪ್ರದೇಶಗಳಾಗಿವೆ. 


ತೆಲುಗು ರಾಜ್ಯಗಳ ವಿವಿಧ ಭಾಗಗಳಿಂದ ವಜ್ರ ಬೇಟೆಗಾರರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮತ್ತು ಹಣ ಗಳಿಸಲು ಈ ಪ್ರದೇಶಗಳಿಗೆ ಸೇರುತ್ತಾರೆ. ತಮ್ಮ ಅದೃಷ್ಟವನ್ನು ಪರೀಕ್ಷಿಸಲು ವಜ್ರ ಬೇಟೆಗಾರರು ಪಟ್ಟಣಕ್ಕೆ ಹೋಗುತ್ತಿದ್ದಂತೆ ಅನಂತಪುರ ಜಿಲ್ಲೆಯ ಗೂಟಿ ಪಟ್ಟಣದ ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ. ಕೆಲವು ಜನರು ಜೂನ್ ಮತ್ತು ಸೆಪ್ಟೆಂಬರ್ ನಡುವೆ ತೆರೆದ ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್‌ಗಳಲ್ಲಿ ಬೀಡು ಬಿಟ್ಟಿರುತ್ತಾರೆ. 


ಇದನ್ನೂ ಓದಿ- ಐದು ನೂರು ಮುಖಬೆಲೆಯ ನೋಟು ನಿಷ್ಕ್ರೀಯಗೊಳ್ಳಲಿದೆಯೇ? ಮಹತ್ವದ ಹೇಳಿಕೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!


ಮಲೆಯಾದಾಗ ಹೊರಬರುತ್ತಂತೆ ವಜ್ರಗಳು: 
ಸ್ಥಳೀಯ ಜನರು ಮತ್ತು ವಜ್ರದ ವ್ಯಾಪಾರಿಗಳು ಋತುವಿನ ಮೊದಲ ಮಳೆಗೆ ಮಣ್ಣಿನ ಮೇಲಿನ ಪದರವನ್ನು ಕೊಚ್ಚಿಕೊಂಡು ಹೋದಾಗ ಈ ವಜ್ರಗಳು ಮೇಲ್ಮೈಗೆ ಬರುತ್ತವೆ ಎಂದು ನಂಬುತ್ತಾರೆ. ಮಳೆಯಾದಾಗ ಮಣ್ಣ ಹುದುಗಿರುವ ವಜ್ರಗಳು ಹೊರಗೆ ಬರುತ್ತದೆ ಎಂದು ನಂಬಿರುವ ಜನರು ಪ್ರತಿ ವರ್ಷ ಜೂನ್, ಜುಲೈ ತಿಂಗಳಿನಿಂದ ಸೆಪ್ಟೆಂಬರ್ ಮಾಸದವರೆಗೆ ಈ ಪ್ರದೇಶಗಳಲ್ಲಿ ವಜ್ರಗಳ ಹುಡುಕಾಟವನ್ನು ನಡೆಸುತ್ತಾರೆ. 


ಇದನ್ನೂ ಓದಿ- ವಿವಿಧ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಸಾಲ ರೈಟ್ ಆಫ್‌: ಆರ್‌ಬಿಐ ಮಾಹಿತಿ


ಈ ವರ್ಷ ಈಗಾಗಲೇ ಬಳ್ಳಾರಿ ಗಡಿಭಾಗದಲ್ಲಿರುವ ವಜ್ರಕಾಳೂರು ಗ್ರಾಮದಲ್ಲಿ ವಜ್ರಕ್ಕಾಗಿ ಜನರು ಹುಡುಕಾಟ ಆರಂಭಿಸಿದ್ದಾರೆ. ವಜ್ರಕ್ಕಾಗಿ ಹೊಲಗಳಲ್ಲಿ ನೂರಾರು ಜನರಿಂದ ದಿನವಿಡೀ ಶೋಧ ಕಾರ್ಯ ಮುಂದುವರೆಸಿದ್ದಾರೆ. ವರದಿಯ ಪ್ರಕಾರ, ಈಗಾಗಲೇ ಜಮೀನುಗಳಲ್ಲಿ ರೈತರಿಗೆ ವಜ್ರದ ಹರಳುಗಳು ಸಹ ಸಿಕ್ಕಿವೆಯಂತೆ ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.