ನವದೆಹಲಿ:  Digital Gold - ಚಿನ್ನದತ್ತ ಭಾರತೀಯರ ಆಕರ್ಷಣೆ ಯಾರಿಗೆ ತಾನೇ ಗೊತ್ತಿಲ್ಲ. ಇಲ್ಲಿ ಚಿನ್ನದ ವ್ಯಾಪಾರ ಭರದಿಂದ ಸಾಗುವುದರ ಜೊತೆಗೆ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯನ್ನಾಗಿ ಪರಿಗಣಿಸಲಾಗುತ್ತದೆ. ಚೀನಾ ಬಳಿಕ, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಖರೀದಿಸುತ್ತದೆ. ಚಿನ್ನದ ಆಕರ್ಷಣೆಗೆ ಬಹುದೊಡ್ಡ ಕಾರಣವೆಂದರೆ ಸುರಕ್ಷಿತ ಹೂಡಿಕೆ ಆಯ್ಕೆಯೆಂದು ಪರಿಗಣಿಸಲಾಗುತ್ತದೆ. ಹೂಡಿಕೆಯ ಆಯ್ಕೆಗಳನ್ನು ಯಾವಾಗಲು ವೈವಿಧ್ಯಗೊಳಿಸಬೇಕು ಇದರಿಂದ ಮಾರುಕಟ್ಟೆಯ ಏರಿಳಿತಗಳು ಆದಾಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಹೆಚ್ಚಿನ ಹೂಡಿಕೆದಾರರ ಹೂಡಿಕೆ ಆಯ್ಕೆಯಲ್ಲಿ ಚಿನ್ನವು ಖಂಡಿತವಾಗಿಯೂ ಇರುತ್ತದೆ ಏಕೆಂದರೆ ಅದು ಸ್ಥಿರವಾಗಿ ಉತ್ತಮ ಆದಾಯ ನೀಡುತ್ತದೆ. ಈ ಮೊದಲು, ಭೌತಿಕ ಚಿನ್ನದ ಮಳೆ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿತ್ತು, ಆದರೆ ಇದೀಗ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ ಮತ್ತು ಸ್ಟಾಕ್ ಬ್ರೋಕರ್‌ಗಳು ಬಿಡುಗಡೆ ಮಾಡುವ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವಾಗ, ತೆರಿಗೆ, ಎಲ್ಲಿಂದ ಖರೀದಿಸುತ್ತಿರುವಿರಿ ಇತ್ಯಾದಿಗಳ ಕುರಿತು ಹೋಮ್ ವರ್ಕ್ ಮಾಡಿಕೊಳ್ಳುವುದು ತುಂಬಾ ಮಹತ್ವದ್ದಾಗಿದೆ.


COMMERCIAL BREAK
SCROLL TO CONTINUE READING

Digital Goldನಲ್ಲಿ ಹೂಡಿಕೆ ಮಾಡುವ ಮೊದಲು ಈ ಅಂಶಗಳು ನಿಮಗೆ ತಿಳಿದಿರಲಿ
ಎಲ್ಲಿಂದ ಖರೀದಿಸಬೇಕು - ಅಧಿಕೃತ ಮಾರಾಟಗಾರರು ಹಾಗೂ ವೆಂಡರ್ ಗಳು ಡಿಜಿಟಲ್ ಚಿನ್ನವನ್ನು ಮಾರಾಟ ಮಾಡುತ್ತಾರೆ. ಇವರು ಹಲವು ಬ್ಯಾಂಕ್, ಬ್ರೋಕಿಂಗ್ ಸಂಸ್ಥೆಗಳು ಹಾಗೂ ಫಿನ್ ಟೆಕ್ ಕಂಪನಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಇವರು ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಮಧ್ಯವರ್ತಿಯಾಗಿ ವರ್ತಿಸುತ್ತಾರೆ. ಆದರೆ, ಯಾವುದೇ ಪ್ಲಾಟ್ ಫಾರ್ಮ್ ನಲ್ಲಿ ಚಿನ್ನ (Gold) ಖರೀದಿಸುವಾಗ ಅದರ ಶುದ್ಧತೆ, ಹಾಲ್ಮಾರ್ಕಿಂಗ್, ರಿಫಂಡ್ ಪಾಲಸಿ ಹಾಗೂ ವೆಂಡರ್ ಗಳ ಬಗ್ಗೆ ಸರಿಯಾದ ಮಾಹಿತಿ ಕಲೆಹಾಕಿ.


ಪಾರದರ್ಶಕತೆ ಹಾಗೂ ರಿಯಲ್ ಟೈಮ್ ಅಪ್ಡೇಟ್ - ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ತುಂಬಾ ಸುಲಭವಾಗಿ ಲಭ್ಯವಾಗುತ್ತಿದೆ. ಇಂತಹುದರಲ್ಲಿ ಹೂಡಿಕೆದಾರರು ಸುಲಭವಾಗಿ ಡಿಜಿಟಲ್ ಚಿನ್ನವನ್ನು ರಿಯಲ್ ಟೈಮ್ ಮಾರ್ಕೆಟ್ ದರದ ಮೇಲೆ ನೀವು ಖರೀದಿಸಬಹುದು. ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯಲ್ಲಿನ ಏರಿಳಿತದ ಪ್ರಭಾವ ಡಿಜಿಟಲ್ ಚಿನ್ನದ ಮೇಲೆ ತಕ್ಷಣ ಕಂಡುಬರುತ್ತದೆ. ಉತ್ತಮ ಇಂಟರ್ ನೆಟ್ ಆಕ್ಸಸ್ ಹೊಂದುವ ಮೂಲಕ ಖರೀದಿದಾರರು ಉತ್ತಮ ನಿರ್ಣಯಗಳನ್ನು ಕೈಗೊಳ್ಳಬಹುದು. 


ಮೇಕಿಂಗ್ ಹಾಗೂ ಡಿಲೆವರಿ ಶುಲ್ಕಗಳು - ಯಾವುದೇ ಓರ್ವ ಗ್ರಾಹಕ ಡಿಜಿಟಲ್ ಚಿನ್ನವನ್ನು ಖರೀದಿಸಿದರೆ, ಅದರ ಮೇಲೆ ಶೇ.3 ರಷ್ಟು GST ಅನ್ವಯಿಸುತ್ತದೆ. ಇದಲ್ಲದೆ ಡಿಜಿಟಲ್ ಚಿನ್ನದ ಮೇಲೆ ಬಂದ ಲಾಭದ ಮೇಲೆ  ಭೌತಿಕ ಚಿನ್ನದ (Physical Gold) ಮೇಲೆ ಬಂದ ಲಾಭ, ಗೋಲ್ಡ್ ಮ್ಯೂಚವಲ್ ಫಂಡ್ (Gold Mutual Fund) ಅಥವಾ ETF (Gold ETF) ಗಳ ಮೇಲೆ ಬಂದ ಲಾಭದಂತೆಯೇ ನೀವು ತೆರಿಗೆ ಪಾವತಿಸಬೇಕು ಎಂಬುದನ್ನು ಮರೆಯಬೇಡಿ.