Digital Payment In Offline Mode: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ದೇಶಾದ್ಯಂತದ ಗ್ರಾಹಕರಿಗೆ ವಿಶೇಷ ಸೇವೆಯೊಂದನ್ನು ಘೋಷಿಸಿದ್ದು, ಅದರ ಮೂಲಕ ನೀವು ಇಂಟರ್ನೆಟ್ ಇಲ್ಲದೆ ಹಣವನ್ನು ವರ್ಗಾಯಿಸಬಹುದು. ಶುಕ್ರವಾರ ಎಂಪಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸುವಾಗ RBI ಗವರ್ನರ್ಶಕ್ತಿಕಾಂತ ದಾಸ್ (RBI Governor Shaktikanta Das) ಈ ಸೇವೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಸರ್ವ್ ಬ್ಯಾಂಕ್ ದೇಶಾದ್ಯಂತ ಆಫ್‌ಲೈನ್ ಮೋಡ್ ಮೂಲಕ ಪಾವತಿ ಮಾಡುವ ಚೌಕಟ್ಟನ್ನು ಪರಿಚಯಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ದೇಶಾದ್ಯಂತ ಜಾರಿಯಾಗಿದೆ ಈ ವ್ಯವಸ್ಥೆ
ಭಾರತೀಯ ರಿಸರ್ವ್ ಬ್ಯಾಂಕ್ ಇಂದಿನ ಪ್ರಕಟಣೆಯಲ್ಲಿ ಆಫ್‌ಲೈನ್ ಪಾವತಿ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗುವುದು ಎಂದು ಹೇಳಿದೆ. ಸರ್ಕಾರದ ಈ ಕ್ರಮವು ಇಂಟರ್ನೆಟ್ ಸೌಲಭ್ಯವನ್ನು ಹೊಂದಿರದ ಜನರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಇದರ ಹೊರತಾಗಿ, ಇಂದಿಗೂ ಸಹ ಹಲವು ಪ್ರದೇಶಗಳಿದ್ದು, ಅಲ್ಲಿ ಇದುವರೆಗೆ ಇಂಟರ್ನೆಟ್ ಸೌಲಭ್ಯವು ಗ್ರಾಹಕರನ್ನು ತಲುಪಿಲ್ಲ, ಹೀಗಾಗಿ ಆ ಪ್ರದೇಶಗಳಲ್ಲಿ ವಾಸಿಸುವರು ಈ ವ್ಯವಸ್ಥೆಯ ಮೂಲಕ  ಆಫ್‌ಲೈನ್ ವಹಿವಾಟಿನ ಮೂಲಕ ಹಣ ಪಾವತಿಸಲು/ಪಡೆಯಲು ಸಾಧ್ಯವಾಗಲಿದೆ.


ಆಗಸ್ಟ್ 6ರಂದು ಈ ಕುರಿತು ಘೋಷಿಸಲಾಗಿತ್ತು 
ರಿಸರ್ವ್ ಬ್ಯಾಂಕ್ 6 ಆಗಸ್ಟ್ 2020 ರಂದು ಈ ಸೌಲಭ್ಯದ ಕುರಿತು ಘೋಷಣೆ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ. ಬಳಿಕ ಅದರ ಪರೀಕ್ಷೆ ನಡೆದಿತ್ತು. ಇದಲ್ಲದೇ, ಪೈಲಟ್ ಪರೀಕ್ಷೆಯ ಮೂಲಕ ಡಿಜಿಟಲ್ ಪಾವತಿಗಳನ್ನು  ಮಾಡಬಹುದು. ಸೆಪ್ಟೆಂಬರ್ 2020 ರಿಂದ ಜೂನ್ 2021 ರವರೆಗೆ ಮೂರು ಪೈಲಟ್‌ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದಾದ ಬಳಿಕ  ಸರ್ಕಾರವು ಈ ಸೌಲಭ್ಯವನ್ನು ಶೀಘ್ರದಲ್ಲೇ ದೇಶದಾದ್ಯಂತ ಆರಂಭಿಸುವುದಾಗಿ ಘೋಷಿಸಿತ್ತು.


ಇದನ್ನೂ ಓದಿ-Today Gold Price : ನವರಾತ್ರಿಯಲ್ಲಿ ಚಿನ್ನದ ಖರೀದಿಸಬೇಕಾ? ಹಾಗಿದ್ರೆ ನಿಮ್ಮ ನಗರದ ಬೆಲೆ ಪರಿಶೀಲಿಸಿ


ಆಫ್ಲೈನ್ ಪೇಮೆಂಟ್ ಮೆಕ್ಯಾನಿಸಂ ಬಳಕೆಯಾಗಲಿದೆ
ಪೈಲಟ್ ಯೋಜನೆಯಡಿ, ಇದರಲ್ಲಿ ಪಾವತಿ ವಹಿವಾಟು ಮಿತಿ ರೂ 200 ಕ್ಕಿಂತ ಹೆಚ್ಚಿತ್ತು. ಆದರೆ ಇದೀಗ ಆಫ್‌ಲೈನ್ ವಹಿವಾಟಿನ ಒಟ್ಟು ಮಿತಿಯನ್ನು ರೂ 2000 ಕ್ಕೆ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆಫ್‌ಲೈನ್ ಪಾವತಿ ಕಾರ್ಯವಿಧಾನದ ಸಹಾಯದಿಂದ ಗ್ರಾಹಕರು ಶೀಘ್ರದಲ್ಲೇ ಪಾವತಿ ಮಾಡಬಹುದಾಗಿದೆ.


ಇದನ್ನೂ ಓದಿ-ಸ್ಟಂತ ವ್ಯಾಪಾರ ಆರಂಭಿಸುವ ಯೋಚನೆಯಿದ್ದರೆ ಇಲ್ಲಿದೆ ಉತ್ತಮ ಅವಕಾಶ ; ತಿಂಗಳಿಗೆ ಲಕ್ಷಗಳಲ್ಲಿ ಗಳಿಸಿ ಆದಾಯ


IMPS ಲಿಮಿಟ್ ಹೆಚ್ಚಳ
ಇದಲ್ಲದೇ, ರಿಸರ್ವ್ ಬ್ಯಾಂಕ್ ಇಂದು IMPS ವಹಿವಾಟಿನ ಮಿತಿಯನ್ನು ಹೆಚ್ಚಿಸಿದೆ. ಐಎಂಪಿಎಸ್ ಸೇವೆಯ ಮೂಲಕ 5 ಲಕ್ಷ ರೂಪಾಯಿ ವಹಿವಾಟು ನಡೆಸುವ ಸೌಲಭ್ಯವನ್ನು ಆರ್‌ಬಿಐ ನೀಡಿದೆ. ಇದರ ಹೊರತಾಗಿ, ನೀವು 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಹಣವನ್ನು ಕಳುಹಿಸಬಹುದು. ಅಂದರೆ ಇದಕ್ಕೆ ಈ ಮೊದಲಿದ್ದ ಸಮಯದ ನಿರ್ಬಂಧವನ್ನು RBI ತೆಗೆದುಹಾಕಿದೆ. ಮೊದಲು ಈ ಮಿತಿಯು ರೂ 2 ಲಕ್ಷವಾಗಿತ್ತು, ಇದನ್ನು ಆರ್‌ಬಿಐ ಇಂದು 5 ಲಕ್ಷಕ್ಕೆ ಹೆಚ್ಚಿಸಿದೆ.


ಇದನ್ನೂ ಓದಿ-ನಿಮ್ಮ LIC ಪಾಲಿಸಿಗಳಿಗೆ ನೇರವಾಗಿ ಲಿಂಕ್ ಮಾಡಬಹುದು PAN ಕಾರ್ಡ್ : ಹೇಗೆ ಇಲ್ಲಿಯೇ ಪರಿಶೀಲಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ