Diwali gift : ರೇಶನ್ ಕಾರ್ಡ್ ದಾರರಿಗೆ ದೀಪಾವಳಿ ಗಿಫ್ಟ್ ನೀಡಿದ ಸರ್ಕಾರ..!
ಅಕ್ಟೋಬರ್ 20 ರಿಂದ ಅಕ್ಟೋಬರ್ 31 ರವರೆಗೆ ಆಗಸ್ಟ್ ತಿಂಗಳ ಪಡಿತರ ವಿತರಣೆಯನ್ನು ಪೂರ್ಣಗೊಳಿಸಲಾಗುವುದು. ಅಕ್ಟೋಬರ್ 31 ರೊಳಗೆ ಪಡಿತರ ವಿತರಣೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ.
Ration Card rules : ಪಡಿತರ ಚೀಟಿದಾರರಿಗೆ ಉತ್ತರ ಪ್ರದೇಶದ ಯೋಗಿ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ದೀಪಾವಳಿ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ ಸಿಹಿತಿಂಡಿ ಮಾಡಲು ಸರ್ಕಾರ ರಿಯಾಯಿತಿ ದರದಲ್ಲಿ ಸಕ್ಕರೆ ನೀಡಲು ಮುಂದಾಗಿದೆ. ಈ ಬಾರಿಯೂ ಫಲಾನುಭವಿಗಳಿಗೆ ಗೋಧಿ ಬದಲು ಅಕ್ಕಿ ನೀಡಲಾಗುವುದು.
ಅಕ್ಟೋಬರ್ 20 ರಿಂದ 31 ರವರೆಗೆ ಪಡಿತರ ವಿತರಣೆ:
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ನಂತರ, ಪಡಿತರ ವಿತರಣೆ ಸರಿಯಾದ ಸಮಯಕ್ಕೆ ಆಗುತ್ತಿರಲಿಲ್ಲ. ಹೀಗಾಗಿ ಆಗಸ್ಟ್ ತಿಂಗಳ ಪಡಿತರವನ್ನು ಅಕ್ಟೋಬರ್‌ನಲ್ಲಿ ಸರ್ಕಾರ ವಿತರಿಸಲಿದೆ. ರಾಜ್ಯ ಸರ್ಕಾರದ ವತಿಯಿಂದ ಆಗಸ್ಟ್ ತಿಂಗಳ ಪಡಿತರ ವಿತರಣೆ ಕಾರ್ಯವನ್ನು ಅಕ್ಟೋಬರ್ 20 ರಿಂದ ಅಕ್ಟೋಬರ್ 31 ರವರೆಗೆ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ. ಅಕ್ಟೋಬರ್‌ನಲ್ಲಿ ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗುವುದು.
ಇದನ್ನೂ ಓದಿ : PM Kisan ರೈತರಿಗೆ ಬಿಗ್ ಶಾಕ್ : ಸರ್ಕಾರದಿಂದ ನಿಯಮದಲ್ಲಿ ಭಾರಿ ಬದಲಾವಣೆ!
ರಾಜ್ಯದ ಒಟ್ಟು 3.6 ಕೋಟಿ ಪಡಿತರ ಚೀಟಿದಾರರು :
ಪಡಿತರ ವಿತರಣೆ ಸಂದರ್ಭದಲ್ಲಿ ಒಂದು ಘಟಕದಲ್ಲಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಅವಕಾಶವಿದೆ. ಈ ಬಾರಿ ಸರ್ಕಾರದ ಕಡೆಯಿಂದ ಅಂತ್ಯೋದಯ ಕಾರ್ಡ್ ದಾರರಿಗೂ ಮೂರು ಕೆಜಿ ಸಕ್ಕರೆ ನೀಡಲಾಗುವುದು. 18 ರೂ.ಗೆ ಕೆ.ಜಿ ಸಕ್ಕರೆ ದೊರೆಯಲಿದೆ.
ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ, ರಾಜ್ಯದ ಎಲ್ಲಾ ಪಡಿತರ ಅಂಗಡಿಯಲ್ಲಿ ಅಕ್ಟೋಬರ್ 20 ರಿಂದ ಪಡಿತರ ವಿತರಣೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಈ ವಿತರಣೆ ಪ್ರಕ್ರಿಯೆಯು ಅಕ್ಟೋಬರ್ 31 ರವರೆಗೆ ಮುಂದುವರಿಯಲಿದೆ. ಈ ವಿತರಣೆಯಲ್ಲಿ ಗೋಧಿ ಬದಲು ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಲಾಗುವುದು. ಅಕ್ಟೋಬರ್ 19 ರೊಳಗೆ ಪಡಿತರ ಅಂಗಡಿಗಳಲ್ಲಿ ಅಕ್ಕಿ ಮತ್ತು ಸಕ್ಕರೆ ಎರಡೂ ಲಭ್ಯವಿರಲಿದೆ.
ಇದನ್ನೂ ಓದಿ : ಧಂತೇರಸ್‌ನಲ್ಲಿ ಚಿನ್ನಾಭರಣ ಖರೀದಿಸುವ ಯೋಜನೆ ಇದೆಯೇ? ಈ 5 ವಿಷಯಗಳ ಬಗ್ಗೆ ಇರಲಿ ಮಾಹಿತಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.