Inflation: ದೀಪಾವಳಿಗೆ ಮುನ್ನವೇ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜನಸಾಮಾನ್ಯರಿಗೆ ಭರ್ಜರಿ ಉಡುಗೊರೆ ನೀಡಿದೆ. ದೇಶದ ಶ್ರೀಸಾಮಾನ್ಯರಿಗೆ ಅಗ್ಗದ ದರದಲ್ಲಿ ಆಹಾರವನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ. ಬೇಳೆಕಾಳುಗಳು ಮತ್ತು ಈರುಳ್ಳಿಯನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ದೀಪಾವಳಿಯಂದು ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣದಲ್ಲಿಡಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಹಕ ಸಚಿವಾಲಯ ಗುರುವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಸರ್ಕಾರದ ಮಹತ್ವದ ನಿರ್ಧಾರ
ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ರಾಜ್ಯಗಳಿಗೆ ಅತಿ ಕಡಿಮೆ ದರದಲ್ಲಿ ಬೇಳೆಕಾಳುಗಳನ್ನು ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ಬೇಳೆಕಾಳುಗಳ ಬೆಲೆಯನ್ನು 8 ರೂ. ಕಡಿತಗೊಳಿಸಿದೆ ಮತ್ತು ಅದೇ ಬೆಲೆಯಲ್ಲಿ ರಾಜ್ಯಗಳಿಗೆ ಬೇಳೆಕಾಳುಗಳನ್ನು ನೀಡುತ್ತಿದೆ, ಇದರಿಂದ ಗ್ರಾಹಕರಿಗೆ ಅಗ್ಗದ ಆಹಾರ ಧಾನ್ಯಗಳು ತಲುಪುವ ನಿರೀಕ್ಷೆಯನ್ನು ಹೊಂದಲಾಗಿದೆ ಮತ್ತು ಹಬ್ಬ ಸೀಸನ್ ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ  ಹಣದುಬ್ಬರದಿಂದ ಸಾರ್ವಜನಿಕರಿಗೆ ಪರಿಹಾರ ಸಿಗಲಿದೆ.


ಇದಲ್ಲದೇ ದೊಡ್ಡ ಹೆಜ್ಜೆ ಇಟ್ಟಿರುವ ಸರ್ಕಾರ ಈರುಳ್ಳಿ ಬೆಲೆ ಇಳಿಕೆ ಮಾಡಿದೆ. ಗ್ರಾಹಕ ಸಚಿವಾಲಯದ ಪ್ರಕಾರ, ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯನ್ನು ತಪ್ಪಿಸಲು ಸರ್ಕಾರವು ಹಬ್ಬಗಳಂದು ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ನೀಡುತ್ತಿದೆ.


ಇದನ್ನೂ ಓದಿ-Dhanteras 2022: ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಮಾರುತಿ ಆಲ್ಟೊ CNG ಕಾರು..!


ಸರ್ಕಾರವು ದಾಸ್ತಾನು ಹೊಂದಿದೆ
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಸದ್ಯ ಸರ್ಕಾರದ ಬಳಿ ಸುಮಾರು 43 ಟನ್ ಬೇಳೆಕಾಳು ದಾಸ್ತಾನು ಇದೆ. ಹಬ್ಬಗಳ ಮುಂಚೆಯೇ ಸರ್ಕಾರವು ರಾಜ್ಯಗಳಿಗೆ ಕೈಗೆಟುಕುವ ದರದಲ್ಲಿ ಬೇಳೆಕಾಳುಗಳನ್ನು ಲಭ್ಯವಾಗುವಂತೆ ಮಾಡಲಿದೆ. ಇದುವರೆಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ 88,000 ಟನ್ ಬೇಳೆಕಾಳುಗಳನ್ನು ನೀಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಸರ್ಕಾರವು ಚನ್ನಂಗಿ ಬೇಳೆಯ ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ 500 ರೂ ಹೆಚ್ಚಿಸಿದೆ. ಇದಾದ ಬಳಿಕ ಉದ್ದಿನಬೇಳೆಗೆ 5,500 ರೂ.ನಿಂದ 6,000 ರೂ. ನೀಡಲಾಗುತ್ತಿದೆ. ಅಂದರೆ ರೈತರ ಹಿತರಕ್ಷಣೆಯ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.


ಇದನ್ನೂ ಓದಿ-PF ಖಾತೆದಾರರಿಗೆ ಸಿಹಿ ಸುದ್ದಿ : ಸರ್ಕಾರದಿಂದ ನಿಮ್ಮ ಖಾತೆಗೆ ಬರಲಿದೆ ₹81,000


ಸರ್ಕಾರ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಲಿದೆ
ಭಾರತವು ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಲಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, 2022 ರಿಂದ 2026 ರ ಆರ್ಥಿಕ ವರ್ಷದವರೆಗೆ ಪ್ರತಿ ವರ್ಷ 2.5 ಲಕ್ಷ ಟನ್ ಉದ್ದು ಮತ್ತು 1 ಲಕ್ಷ ಟನ್ ತೊಗರಿ ಬೇಳೆಯನ್ನು  ಅನ್ನು ಮ್ಯಾನ್ಮಾರ್‌ನಿಂದ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದೆ. ಇದಲ್ಲದೇ, ಮುಂದಿನ ಐದು ವರ್ಷಗಳಲ್ಲಿ ಆಗ್ನೇಯ ಆಫ್ರಿಕಾದ ಮಲಾವಿಯಿಂದಲೂ 50 ಸಾವಿರ ಟನ್‌ಗಳಷ್ಟು ಕಡ್ಲೆಬೇಳೆಯನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.