ಈ ಸರ್ಕಾರಿ ನೌಕರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ರಾಜ್ಯ ಸರ್ಕಾರ! ದೀಪಾವಳಿ ಬೋನಸ್ ಕೂಡ ಸಿಗಲಿದೆ!
Diwali 2023 Salary Hike And Bonus: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿಗೂ ಮುನ್ನ ರಾಜ್ಯದ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ದೀಪಾವಳಿ ಬೋನಸ್ ಗಿಫ್ಟ್ ಕೂಡ ಸರ್ಕಾರಿ ನೌಕರರಿಗೆ ಸಿಗಲಿದೆ. (Business News In Kannada)
ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ ತುಟ್ಟಿಭತ್ಯೆ ಶೇ 4ರಷ್ಟು ಹೆಚ್ಚಿಸುವುದಾಗಿ ಸಿಎಂ ಯೋಗಿ ಸೋಮವಾರ ಘೋಷಿಸಿದ್ದಾರೆ. ಇದರಿಂದ ಅಲ್ಲಿನ ರಾಜ್ಯ ನೌಕರರ ತುಟ್ಟಿಭತ್ಯೆ ಶೇ.46ಕ್ಕೆ ಏರಿಕೆಯಾಗಿದೆ. ಇದಲ್ಲದೇ ಮುಖ್ಯಮಂತ್ರಿಗಳು ನೌಕರರಿಗೆ 30 ದಿನಗಳ ಬೋನಸ್ ಕೂಡ ಘೋಷಿಸಿದ್ದಾರೆ. ಎಲ್ಲಾ ಗೆಜೆಟೆಡ್ ಅಲ್ಲದ ರಾಜ್ಯ ಉದ್ಯೋಗಿಗಳಿಗೆ ಬೋನಸ್‌ನ ಗರಿಷ್ಠ ಮಿತಿಯನ್ನು 7,000 ರೂ.ಗೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ-ಉದ್ಯೋಗ ಆಧಾರ್ ಗಾಗಿ ಈ ರೀತಿ ಆನ್ಲೈನ್ ಅರ್ಜಿ ಸಲ್ಲಿಸಿ, ನಿಮ್ಮ ಬಿಸ್ನೆಸ್ ಗೆ ಸರ್ಕಾರ ನೀಡುತ್ತೇ ಲಕ್ಷಾಂತರ ಧನಸಹಾಯ!
ಹೆಚ್ಚಾಗಲಿದೆ ತುಟ್ಟಿ ಭತ್ಯೆ
ಸಿಎಂ ಯೋಗಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 46 ಶೇಕಡಾ ದರದಲ್ಲಿ ತುಟ್ಟಿ ಭತ್ಯೆಯನ್ನು ನೀಡುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ-ಬ್ಯಾಂಕ್ ಗ್ರಾಹಕರಿಗೊಂದು ಬಂಬಾಟ್ ಸುದ್ದಿ, ದೀಪಾವಳಿ ಧಮಾಕ ಕೊಡುಗೆ ಆರಂಭಿಸಿದ ಮೂರು ಬ್ಯಾಂಕುಗಳು!
ದೀಪಾವಳಿ ಬೋನಸ್ ಕೂಡ ಘೋಷಣೆಯಾಗಿದೆ
ಇದಕ್ಕೂ ಮುಂದುವರೆದು ಬರೆದುಕೊಂಡಿರುವ ಸಿಎಂ ಯೋಗಿ, "ಅಂತೆಯೇ, ಎಲ್ಲಾ ರಾಜ್ಯ ನೌಕರರಿಗೆ (ಗಜೆಟೆಡ್ ಅಲ್ಲದ / ಕೆಲಸದ ಶುಲ್ಕದ ನೌಕರರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಮತ್ತು ದಿನಗೂಲಿ ನೌಕರರು) ಗರಿಷ್ಠ 7,000 ರೂ.ಮಿತಿಯೊಂದಿಗೆ 30 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ನೀಡಲು ನಿರ್ಧರಿಸಲಾಗಿದೆ" ಎಂದು ಪ್ರಕಟಿಸಿದ್ದಾರೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ