ನಿರುದ್ಯೋಗಿ ಯುವಕ-ಯುವತಿಯರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್! ಬಂಗಾರದಂತ ಅವಕಾಶ ಕೈ ಜಾರಲು ಬಿಡಬೇಡಿ!
Unemployment: ಆಧುನಿಕ ಯುಗದಲ್ಲಿ ಬಹುತೇಕ ಕೆಲಸಗಳನ್ನು ಯಂತ್ರೋಪಕರಣಗಳೆ ಮಾಡಿ ಮುಗಿಸುವುದರಿಂದ ಸಾಕಷ್ಟು ಯುವಕ ಯುವತಿಯರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಂತಹವರಿಗಾಗಿ ಕೇಂದ್ರ ಸರ್ಕಾರದಿಂದ ಸುವರ್ಣಾವಕಾಶ ನೀಡಲಾಗುತ್ತಿದೆ.
Diwali Gift to unemployed youths: ನಿರುದ್ಯೋಗ ದೇಶದಲ್ಲಿ ಬಹುದೊಡ್ಡ ಸಮಸ್ಯೆ ಆಗಿದೆ. ನಿರುದ್ಯೋಗಿಗಳನ್ನು ಸ್ವಂತ ಉದ್ಯಮಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕಛೇರಿಗಳಲ್ಲಿ ಕೆಲಸಕ್ಕಾಗಿ ಅಲೆಯದೇ ತಾವೇ ಸ್ವಂತ ಉದ್ಯೋಗ ಮಾಡಲು ಬಯಸುವವರಿಗಾಗಿ ಸರ್ಕಾರದ ಈ ಯೋಜನೆ ದಾರಿದೀಪವಾಗಲಿದೆ.
ಪ್ರಸ್ತುತ ಉದ್ಯೋಗ ಹರಸಿ ಗ್ರಾಮಗಳಿಂದ ಪಟ್ಟಣ, ಪಟ್ಟಣಗಳಿಂದ ದೊಡ್ಡ ನಗರಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಯುವ ಜನರು ಕೆಲಸ ಹರಸಿ ಬೇರೆಡೆ ತೆರಳುವ ಬದಲಿಗೆ ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಹುಟ್ಟು ಹಾಕಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಬೇಕಿದೆ. ಇದಕ್ಕಾಗಿ ಸರ್ಕಾರವೇ ಬೆಂಬಲ ನೀಡಲಿದೆ.
ಇದನ್ನೂ ಓದಿ- ಪಡಿತರ ಚೀಟಿದಾರರಿಗೆ ರೇಷನ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಸೌಲಭ್ಯಗಳು!
ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಮೋದಿ ಸರ್ಕಾರ ಪ್ರಧಾನಮಂತ್ರಿ ಸೃಜನ ಯೋಜನೆ (PMEGP) ಅನ್ನು ಆರಂಭಿಸಿದೆ. ಈ ಯೋಜನೆಯಡಿ ಹೊಸದಾಗಿ ಸ್ವಂತ ಉದ್ಯೋಗ ಆರಂಭಿಸಲು ಇಚ್ಛಿಸುವ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಸೃಜನ ಯೋಜನೆ:
ಪ್ರಧಾನಮಂತ್ರಿ ಸೃಜನ ಯೋಜನೆಯಲ್ಲಿ ಉತ್ಪಾದನೆ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ನೀಡಲಾಗುವುದು. ವಾಸ್ತವವಾಗಿ, ನಿರುದ್ಯೋಗಕ್ಕೆ ಸೆಡ್ಡು ಹೊಡೆದು ತಮ್ಮದೇ ಆದ ಸ್ವಂತ ಉದ್ಯಮ ಮಾಡಲು ಬಯಸುವ ಯುವ ಪೀಳಿಗೆಗೆ ಆರ್ಥಿಕ ನೆರವು ಒಂದು ದೊಡ್ಡ ಸವಾಲಾಗಿದೆ. ಇಂತಹವರಿಗೆ ಪ್ರಧಾನಮಂತ್ರಿ ಸೃಜನ ಯೋಜನೆಯಡಿ ಆರ್ಥಿಕ ನೆರವು ದೊರಯ್ಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ- ನಕಲಿ ದಾಖಲೆ ತೋರಿಸಿ ಬಿಪಿಎಲ್ ಕಾರ್ಡ್ ಪಡೆದು ಶಾಕ್‌ನಲ್ಲಿದ್ದವರಿಗೆ ಗುಡ್ ನ್ಯೂಸ್..!
50ಲಕ್ಷದವರೆಗೆ ಸಾಲ ಸೌಲಭ್ಯ:
ಸ್ವ-ಉದ್ಯೋಗದ ಕನಸು ಕಾಣುವವರಿಗೆ ಪ್ರಧಾನಮಂತ್ರಿ ಸೃಜನ ಯೋಜನೆ ಮೆಟ್ಟಿಲಾಗಿದ್ದು ಇದರಲ್ಲಿ ಹೊಸ ಉದ್ಯಮ ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸುವ ಸರ್ಕಾರ ಗರಿಷ್ಠ 25 ರಿಂದ 35% ಸಬ್ಸಿಡಿಯನ್ನೂ ಒದಗಿಸಲಿದೆ.
ಯೋಜನೆಯ ಲಾಭ ಪಡೆಯುವುದು ಹೇಗೆ?
ಈ ಯೋಜನೆಯಲ್ಲಿ ಯಾವೆಲ್ಲಾ ಉದ್ಯಮಗಳಿಗೆ ಸಾಲ ಸೌಲಭ್ಯ ದೊರೆಯಲಿದೆ ಎಂಬುದನ್ನು www.kvic.org.in (pmegp online application) ವೆಬ್ಸೈಟ್ ನಲ್ಲಿ ಪರಿಶೀಲಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.