Diwali Offers: ದೀಪಾವಳಿ ಹಬ್ಬಕ್ಕೆ ಕಾರು ಖರೀದಿಸಬೇಕೆ? ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ
Electric Cars: ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲೆ 10 ರಿಂದ 30 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ನೀಡುತ್ತಿವೆ. ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲಿನ ಕಾರ್ ಲೋನ್‌ಗಳ ಮೇಲೆ ಹೆಚ್ಚುವರಿ ಶೇ.0.25 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
Diwali Offers on Electric Cars: ಪ್ರಸ್ತುತ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಧನತ್ರಯೋದಶಿ ಹಬ್ಬ ಮತ್ತು ದೀಪಾವಳಿ 2022 ಅನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿವೆ. ಜನರು ಧನತ್ರಯೋದಶಿ ಮತ್ತು ದೀಪಾವಳಿಯಂದು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕಾರುಗಳನ್ನು ಖರೀದಿಸುತ್ತಾರೆ. ಭಾರತದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು, ಸರ್ಕಾರವು ಕೂಡ ಆದಷ್ಟು ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಜನರನ್ನು ಉತ್ತೇಜಿಸುತ್ತಿದೆ. ಈ ಹಬ್ಬದ ಋತುವಿನಲ್ಲಿ EV ಕಾರುಗಳನ್ನು ಖರೀದಿಸಲು ಜನರಿಗೆ ಪ್ರೋತ್ಸಾಹಿಸಲು, ಅನೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಸಾಲಗಳ ಬಡ್ಡಿದರದಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಇವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಹಲವು ಬ್ಯಾಂಕುಗಳು ಶಾಮೀಲಾಗಿವೆ.
ತೆರಿಗೆ ಪಾವತಿಸುವವರಿಗೆ ತೆರಿಗೆ ವಿನಾಯಿತಿ
ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಸಾಲದ ಬಡ್ಡಿದರದಲ್ಲಿ ರಿಯಾಯಿತಿ ಜೊತೆಗೆ, ಸರ್ಕಾರವು ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ನೀಡುತ್ತಿದೆ. ಇದರಿಂದ ತೆರಿಗೆದಾರರಿಗೆ ಹೆಚ್ಚಿನ ಲಾಭವಾಗಲಿದೆ. ತೆರಿಗೆ ವಿನಾಯಿತಿಯಿಂದಾಗಿ, ಅನೇಕ ಜನರು ತಮ್ಮ ಪೆಟ್ರೋಲ್-ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಕಾರಿಗೆ ನವೀಕರಿಸಲು ಬಯಸುತ್ತಿದ್ದಾರೆ. ಒಂದೆಡೆ, ಗ್ರಾಹಕರು ಸಾಲ ಮತ್ತು ಬಡ್ಡಿದರದ ರಿಯಾಯಿತಿಯನ್ನು ಪಡೆಯುತ್ತಿದ್ದರೆ, ಮತ್ತೊಂದೆಡೆ, ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದರಿಂದ ಜನರಿಗೆ ದೀರ್ಘಾವಧಿಯಲ್ಲಿ EV ಕಾರು ಬಹಳ ಮಿತವ್ಯಯಕಾರಿ ಸಾಬೀತಾಗಲಿದೆ. ಇದರೊಂದಿಗೆ, ಸಾಮಾನ್ಯ ಪೆಟ್ರೋಲ್-ಡೀಸೆಲ್ ಕಾರುಗಳಿಗೆ ಹೋಲಿಸಿದರೆ EV ಕಾರುಗಳ ನಿರ್ವಹಣೆಗೆ ತುಂಬಾ ಕಡಿಮೆ ವೆಚ್ಚ ತಗುಲುತ್ತದೆ.
ಗ್ರಾಹಕರು ಬ್ಯಾಂಕ್‌ನಿಂದ ಎಷ್ಟು ಬಡ್ಡಿ ರಿಯಾಯಿತಿ ಪಡೆಯಬಹುದು?
ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲೆ 10 ರಿಂದ 30 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ನೀಡುತ್ತಿವೆ. ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲಿನ ಕಾರ್ ಲೋನ್‌ಗಳ ಮೇಲೆ ಹೆಚ್ಚುವರಿ ಶೇ. 0.25 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ EV ಕಾರು ಖರೀದಿಗೆ SBI ಗ್ರೀನ್ ಕಾರ್ ಲೋನ್ ಕೊಡುಗೆ ಆರಂಭಿಸಿದೆ. ಇದಕ್ಕಾಗಿ ಗ್ರಾಹಕರು ಕಾರು ಸಾಲದಲ್ಲಿ ಶೇ.0.20ರಷ್ಟು ರಿಯಾಯಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ-Big News: ದೇಶದ ಕೋಟ್ಯಾಂತರ ಅನ್ನದಾತರಿಗೆ ದೀಪಾವಳಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ
ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಶೇ.7.95% ರಿಂದ ಶೇ.8.30 ವರೆಗೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿವೆ. ನೀವು SBI ನಿಂದ ಗ್ರೀನ್ ಕಾರ್ ಲೋನ್ ತೆಗೆದುಕೊಂಡರೆ, ನೀವು ಅದನ್ನು 3 ರಿಂದ 8 ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದು. ಇನ್ನೊಂದೆಡೆ, ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು 7 ವರ್ಷಗಳನ್ನು ನೀಡುತ್ತದೆ. ಹೆಚ್ಚಿನ ಬ್ಯಾಂಕ್‌ಗಳು EV ಕಾರ್ ಲೋನ್‌ಗಳ ಮೇಲೆ ತಮ್ಮ ಗ್ರಾಹಕರಿಂದ ಯಾವುದೇ ಡೌನ್ ಪೇಮೆಂಟ್ ವಿಧಿಸುತ್ತಿಲ್ಲ. ಬ್ಯಾಂಕ್‌ಗಳು ಗ್ರಾಹಕರಿಂದ ಇಂತಹ ಸಾಲಗಳಿಗೆ 0.2% ರಿಂದ 2% ವರೆಗೆ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತವೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.