ಬೆಂಗಳೂರು : ಪಿಎಂ ಕಿಸಾನ್ ಯೋಜನೆಯ (PM Kisan Samman Nidhi Yojana)11 ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ ರೈತರು. ಇದುವರೆಗೆ ಈ ಯೋಜನೆಯ 10 ಕಂತುಗಳು ರೈತರ ಖಾತೆಗೆ ಬಂದಿದೆ. 2021 ರಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ ( PM Kisan YOjana) , ಕೇಂದ್ರ ಸರ್ಕಾರವು ಒಂದು ದೊಡ್ಡ ಬದಲಾವಣೆಯನ್ನು ಮಾಡಿದೆ. ಅದರ ಪ್ರಕಾರ ಈಗ ರೈತರು 11 ನೇ ಕಂತಿಗೆ ಇ-ಕೆವೈಸಿಯನ್ನು (eKYC)ಪೂರ್ಣಗೊಳಿಸಬೇಕಾಗುತ್ತದೆ. ಅಂದರೆ, ಈಗ 11ನೇ ಕಂತಿಗೆ ರೈತರು ಹಲವು ಹೊಸ ನಿಯಮಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

 ಇ-ಕೆವೈಸಿ ಪೂರ್ಣಗೊಳಿಸಿದಾಗ ಮಾತ್ರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮುಂದಿನ ಕಂತು ಅಂದರೆ 11ನೇ ಕಂತು ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇ-ಕೆವೈಸಿ (e KYC)ಇಲ್ಲದೆ ಹೋದರೆ ನಿಮ್ಮ ಕಂತಿನ ಹಣವನ್ನು ತಡೆ ಹಿಡಿಯಬಹುದು. ಶೀಘ್ರದಲ್ಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pm Kisan samman Nidhi) 11 ನೇ ಕಂತು ಕೂಡ ಬಿಡುಗಡೆಯಾಗಲಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ, ರೈತರು ಕಿಸಾನ್ ಕಾರ್ನರ್‌ನಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ ಎಂದು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ (PM Kisan Portal)ತಿಳಿಸಲಾಗಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದಲೂ ಈ ಪ್ರಕ್ರಿಯೆಯನ್ನು ಮಾಡಬಹುದು. 
 
 ಇದನ್ನೂ ಓದಿ : Multiple Bank Accounts : ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ, ತಕ್ಷಣ ಜಾಗರೂಕರಾಗಿರಿ! 
 
ಇದರ ಹೊರತಾಗಿ, ನಿಮ್ಮ ಕಂತಿನ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು. 


ಈ ರೀತಿಯ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ:
1. ಇದಕ್ಕಾಗಿ, ನೀವು ಮೊದಲು PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಹೋಗಿ.
2. ಈಗ ಅದರ ಮುಖಪುಟದಲ್ಲಿ ನೀವು Farmers Corner ಆಯ್ಕೆಯನ್ನು ಕಾಣುತ್ತೀರಿ 
3. Farmers Corner ವಿಭಾಗದಲ್ಲಿ, Beneficiary list ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಇದರ ನಂತರ ನೀವು 'Get Report' ಮೇಲೆ ಕ್ಲಿಕ್ ಮಾಡಿ.
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.


ನಿಮ್ಮ ಕಂತು ಸ್ಥಿತಿಯನ್ನು ಪರಿಶೀಲಿಸಿ :
1. ನಿಮ್ಮ ಕಂತಿನ ಸ್ಥಿತಿಯನ್ನು ನೋಡಲು, ನೀವು ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
2. ಈಗ ಬಲಭಾಗದಲ್ಲಿರುವ  Farmers Corner  ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ ನೀವು ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನಿಮ್ಮೊಂದಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಕಂತಿನ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ  ಸಿಗುತ್ತದೆ


 ಇದನ್ನೂ ಓದಿ : Accelero Electric Scooter: ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್ ಚಾರ್ಜ್‌ನಲ್ಲಿ 190 ಕಿಮೀ ವರೆಗೆ ಚಲಿಸುತ್ತಂತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.