ನವದೆಹಲಿ : ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಂಚಾರ ನಿಯಮಗಳಿದ್ದರೂ ಹೆಚ್ಚಿನವರು ಅದನ್ನು ಪಾಲಿಸುತ್ತಿಲ್ಲ. ಕೆಲವು ಸಮಯದ ಹಿಂದೆ, ಸಂಚಾರ ನಿಯಮಗಳನ್ನು (driving rules) ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಮೋಟಾರು ವಾಹನ ಕಾಯ್ದೆ (MVA) 1988 ಅನ್ನು ತಿದ್ದುಪಡಿ ಮಾಡುವ ಮೂಲಕ ಮೋಟಾರು ವಾಹನ (ತಿದ್ದುಪಡಿ) ಮಸೂದೆ, 2019 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.


COMMERCIAL BREAK
SCROLL TO CONTINUE READING

'ಹತ್ತು ಸಾವಿರ ದಂಡ' :
ರಸ್ತೆ ಸಾರಿಗೆ ನಿಯಮಗಳನ್ನು (driving rules) ಉಲ್ಲಂಘಿಸುವುದು ಎಂದರೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ರಸ್ತೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದರೆ, ನಿಮ್ಮ ಜೇಬಿಗೆ ಹೊರೆಯಾಗಬಹುದು. ನೀವು ಮಾಡುವ ಒಂದು ತಪ್ಪಿನಿಂದ ನೀವು ಮಾತ್ರವಲ್ಲದೆ, ಬೇರೊಬ್ಬರು ಕೂಡಾ ಬೆಲೆ ತೆರಬೇಕಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಪಾನಮತ್ತರಾಗಿ, (drink and drive) ವಾಹನ ಚಲಾಯಿಸಬೇಡಿ. ಪಾನಮತ್ತರಾಗಿ ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ 10 ಸಾವಿರ ರೂಪಾಯಿ ದಂಡ (drink and drive fine) ಪಾವತಿಸಬೇಕಾಗುತ್ತದೆ. ಮಾತ್ರವಲ್ಲ, 6 ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ.


ಇದನ್ನೂ ಓದಿ : RBI Monetary Policy Review: ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ- ಆರ್‌ಬಿಐ


ಸಂಪೂರ್ಣ ನಿಬಂಧನೆಯನ್ನು ತಿಳಿಯಿರಿ :
ಮದ್ಯಪಾನ ಮಾಡಿ ವಾಹನ ಚಲಾಯಿಸುವಾ ಮೊದಲ ಬಾರಿಗೆ ಸಿಕ್ಕಿ ಬಿದ್ದರೆ, 10 ಸಾವಿರ ರೂಪಾಯಿ ದಂಡ (ten thousand rupees fine) ಮತ್ತು 6 ತಿಂಗಳು ಜೈಲು (jail) ಶಿಕ್ಷೆಯಾಗಬಹುದು. ಮತ್ತೆ ಅದು ಮರುಕಳಿಸಿದರೆ ದಂಡದ ಮೌಲ್ಯವು 15 ಸಾವಿರ ರೂಪಾಯಿಗಳಿಗೆ ಹೆಚ್ಚಾಗುತ್ತದೆ. ಜೊತೆಗೆ 6 ತಿಂಗಳ ಬದಲು 2 ವರ್ಷ ಜೈಲು ವಾಸ ಅನುಭವಿಸಬೇಕಾಗುತ್ತದೆ. ಈ ಹಿಂದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಕೇವಲ 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ  ಮೊತ್ತವನ್ನು 10 ಸಾವಿರಕ್ಕೆ ಏರಿಸಲಾಗಿದೆ. 


ಈ ರೀತಿ ಪಾರಾಗಬಹುದು :
ಶಿಕ್ಷೆಯ ಹೊರತಾಗಿ  ಸೇವಿಸಿ ಕಾರನ್ನು ಓಡಿಸುವ ಮೂಲಕ ನಿಮ್ಮ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತೀರಿ ಎನ್ನುವುದು ಕೂಡಾ ಗಮನದಲ್ಲಿಡಬೇಕಾದ ಸಂಗತಿ. ಹಾಗಾಗಿ ಈ ದಂಡದಿಂದ ತಪ್ಪಿಸಲು ಇರುವ ಏಕೈಕ ಮಾರ್ಗವೆಂದರೆ, ನೀವು ಮದ್ಯಪಾನ ಮಾಡಿದ್ದರೆ, ವಾಹನ ಚಾಲನೆ ಮಾಡದೇ ಇರುವುದು. 


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಹೊಸ ವರ್ಷದಲ್ಲಿ ಸಿಗಲಿದೆ ಗಿಫ್ಟ್, ವೇತನ ಹೆಚ್ಚಳದೊಂದಿಗೆ ಪ್ರಕಟವಾಗಲಿದೆ ಈ ನಿರ್ಧಾರಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ