Deadline Alert: ಪ್ರತಿ ವರ್ಷ 01 ಏಪ್ರಿಲ್ ನಿಂದ 31 ಮಾರ್ಚ್ ವರೆಗೆ ವಿತ್ತೀಯ ವರ್ಷ ಎಂದು ಪರಿಗಣಿಸಲಾಗುತ್ತದೆ. ಈ ವಿತ್ತೀಯ ವರ್ಷ ಮುಗಿಯುವ ಮೊದಲು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಮತ್ತು ತೆರಿಗೆ ಉಳಿತಾಯ ಹೂಡಿಕೆಗಳನ್ನು ಮಾಡುವುದರಿಂದ ಹಿಡಿದು ನೀವು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ನಿಗದಿತ ಕನಿಷ್ಠ  ಮೊತ್ತವನ್ನು ಅದರಲ್ಲಿ ಠೇವಣಿ ಮಾಡುವುದು ತುಂಬಾ ಅಗತ್ಯ. 


COMMERCIAL BREAK
SCROLL TO CONTINUE READING

ಇದೀಗ 2023-2024ರ ಹಣಕಾಸು ವರ್ಷ ಪೂರ್ಣಗೊಳ್ಳಲು ಇನ್ನೂ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದೆ.  ಅಷ್ಟರೊಳಗೆ ನೀವು ಹಣಕಾಸಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿಲ್ಲದಿದ್ದರೆ ಇದರಿಂದ ಭವಿಷ್ಯದಲ್ಲಿ ಭಾರೀ ನಷ್ಟವಾಗಬಹುದು. ಹಾಗಿದ್ದರೆ 31 ಮಾರ್ಚ್ ಮೊದಲು ಪೂರ್ಣಗೊಳಿಸಲೇ ಬೇಕಾದ ಆ ಕೆಲಸಗಳು ಯಾವುವು ಎಂದು ತಿಳಿಯೋಣ... 


ಐಟಿಆರ್ ನವೀಕರಣ: 
ನೀವು ತೆರಿಗೆದಾರರಾಗಿದ್ದರೆ ನಿಮ್ಮ ಐಟಿಆರ್‌ನಲ್ಲಿ ಯಾವುದೇ ವಿವರಗಳನ್ನು ನವೀಕರಿಸಲು ಬಯಸಿದರೆ ಆದಾಯ ತೆರಿಗೆ ರಿಟರ್ನ್  (ಅಪ್‌ಡೇಟ್ ಐಟಿಆರ್) ಅನ್ನು ಮಾರ್ಚ್ 31 ರೊಳಗೆ ಸಲ್ಲಿಸಬೇಕು. ನೀವು ವಿತ್ತೀಯ ವರ್ಷ 2020-21 (AY 2021-22) ಗಾಗಿ ನವೀಕರಿಸಿದ ರಿಟರ್ನ್‌ಗಳನ್ನು ಈ ದಿನಾಂಕದೊಳಗೆ ಸಲ್ಲಿಸಬಹುದು. ಈ ಹಣಕಾಸು ವರ್ಷದಲ್ಲಿ ರಿಟರ್ನ್ಸ್ ಸಲ್ಲಿಸದ ಅಥವಾ ತಮ್ಮ ಆದಾಯದ ಸ್ವಲ್ಪ ಭಾಗವನ್ನು ತೋರಿಸಲು ಸಾಧ್ಯವಾಗದ ತೆರಿಗೆದಾರರು ಅಥವಾ ಅವರು ತಮ್ಮ ಆದಾಯ ತೆರಿಗೆ ರಿಟರ್ನ್‌ನಲ್ಲಿ ಕೆಲವು ತಪ್ಪು ವಿವರಗಳನ್ನು ಸಲ್ಲಿಸಿದ್ದರೆ, ಅಂತಹ ಸಂದರ್ಭಗಳಲ್ಲಿ ಮರೆಯದೆ ಮಾರ್ಚ್ 31ರ ಮೊದಲು ಆದಾಯ ತೆರಿಗೆ ಪೋರ್ಟಲ್‌ಗೆ ಹೋಗಿ ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸಬಹುದು.


ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ: 
ನೀವು ಆರ್ಥಿಕ ವರ್ಷ 2023-24ಕ್ಕೆ ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆಗಳನ್ನು ಸಲ್ಲಿಸುತ್ತಿದ್ದರೆ, ನಂತರ ನೀವು ನಿಮ್ಮ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು. ಒಂದೊಮ್ಮೆ ನೀವು ಇನ್ನೂ ಸಹ ತೆರಿಗೆ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡದಿದ್ದರೆ, ಮಾರ್ಚ್ 31ರ ಮೊದಲು ಹೂಡಿಕೆ ಮಾಡುವ ಮೂಲಕ ನೀವು ತೆರಿಗೆಯನ್ನು ಉಳಿಸಬಹುದು. 
ತೆರಿಗೆ ಉಳಿತಾಯ ಯೋಜನೆಗಳ ಮೇಲಿನ ಹೂಡಿಕೆಯಲ್ಲಿ ಸೆಕ್ಷನ್ 80C ಅಡಿಯಲ್ಲಿ ತೆರಿಗೆಯನ್ನು ಉಳಿಸುವ ಅವಕಾಶ ಲಭ್ಯವಿದೆ. ಇದಕ್ಕಾಗಿ ನೀವು ಪಿ‌ಪಿ‌ಎಫ್, ಇಎಲ್‌ಎಸ್‌ಎಸ್, ಸುಕನ್ಯಾ ಸಮೃದ್ಧಿ, ಟರ್ಮ್ ಡೆಪಾಸಿಟ್, ಎನ್‌ಪಿಎಸ್ ಮತ್ತು ಪೋಸ್ಟ್ ಆಫೀಸ್‌ನ  ಇತರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. 


ಇದನ್ನೂ ಓದಿ- ಏರಿಕೆಯಾದ ಮೂಲ ವೇತನ, ಎಲ್ಲಾ ಭತ್ಯೆ, ಅರಿಯರ್ಸ್ ಸೇರಿ ಇನ್ನೆರಡು ದಿನಗಳಲ್ಲಿ ಸರ್ಕಾರಿ ನೌಕರರ ಕೈ ಸೇರುವ ಮೊತ್ತ ಇದು !


ಕನಿಷ್ಠ ಹೂಡಿಕೆ ಖಚಿತ ಪಡಿಸಿಕೊಳ್ಳಿ: 
ಒಂದೊಮ್ಮೆ ನೀವು ಈಗಾಗಲೇ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ, ಈ ಆರ್ಥಿಕ ವರ್ಷದಲ್ಲಿ ಕನಿಷ್ಠ ಹೂಡಿಕೆ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಪಿಪಿಎಫ್‌ನಲ್ಲಿ ಒಂದು ವರ್ಷದಲ್ಲಿ ಕನಿಷ್ಠ ರೂ 500 ಮತ್ತು ಎಸ್‌ಎಸ್‌ವೈನಲ್ಲಿ ರೂ 250 ಹೂಡಿಕೆ ಮಾಡಬೇಕು. ನೀವು ಇದನ್ನು ಮಾಡದಿದ್ದರೆ, ನಿಮ್ಮ ಖಾತೆಯನ್ನು ಡಿಫಾಲ್ಟ್ ಎಂದು ಘೋಷಿಸಬಹುದು ಮತ್ತು ನೀವು ದಂಡವನ್ನು ಪಾವತಿಸಬೇಕಾಗಬಹುದು. 


ಟಿಡಿಎಸ್ ಫೈಲಿಂಗ್: 
ಜನವರಿ, 2024 ಕ್ಕೆ ವಿವಿಧ ವಿಭಾಗಗಳ ಅಡಿಯಲ್ಲಿ ಪಡೆದ ತೆರಿಗೆ ವಿನಾಯಿತಿಗಾಗಿ ತೆರಿಗೆದಾರರು ಮಾರ್ಚ್‌ನಲ್ಲಿ ಟಿ‌ಡಿ‌ಎಸ್ ಫೈಲಿಂಗ್ ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ. ಸೆಕ್ಷನ್ 194-IA, 194-IB ಮತ್ತು 194M ಅಡಿಯಲ್ಲಿ ತೆರಿಗೆ ಕಡಿತಗೊಳಿಸಿದ್ದರೆ, ನಂತರ ಚಲನ್ ಹೇಳಿಕೆಯನ್ನು ಮಾರ್ಚ್ 30 ರ ಮೊದಲು ಸಲ್ಲಿಸಬೇಕಾಗಿದ್ದು, ಇನ್ನೆರಡು ದಿನಗಳಲ್ಲಿ ಮರೆಯದೆ ಈ ಕೆಲಸವನ್ನು ಪೂರ್ಣಗೊಳಿಸಿ. 


ಜಿ‌ಎಸ್‌ಟಿ ಸಂಯೋಜನೆ ಯೋಜನೆ: 
ಅಸ್ತಿತ್ವದಲ್ಲಿರುವ ಜಿ‌ಎಸ್‌ಟಿ ತೆರಿಗೆದಾರರು ಮಾರ್ಚ್ 31 ರವರೆಗೆ FY 2024-25 ಗಾಗಿ ಜಿ‌ಎಸ್‌ಟಿ ಸಂಯೋಜನೆ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನಿರ್ದಿಷ್ಟ ವಹಿವಾಟು ಹೊಂದಿರುವ ಅರ್ಹ ವ್ಯಾಪಾರ ತೆರಿಗೆದಾರರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಇದು ಹೆಚ್ಚು ಸರಳೀಕೃತ ತೆರಿಗೆ ರಚನೆ ಯೋಜನೆಯಾಗಿದೆ. ಇದಕ್ಕಾಗಿ ಅವರು CMP-02 ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.   


ಇದನ್ನೂ ಓದಿ- Ration Card updates: ಇವರು ಮಾತ್ರ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಬಹುದು


FASTag ಕೆ‌ವೈ‌ಸಿ ಅಪ್‌ಡೇಟ್: 
ಮಾರ್ಚ್ 31 ರ ದಿನಾಂಕ ಫಾಸ್ಟ್ಯಾಗ್ ಬಳಕೆದಾರರಿಗೆ ಕೂಡ ಮುಖ್ಯವಾಗಿದೆ. ಫಾಸ್ಟ್ಯಾಗ್‌ನ ಕೆ‌ವೈ‌ಸಿ ವಿವರಗಳನ್ನು ನವೀಕರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾರ್ಚ್ 31 ರವರೆಗೆ ಸಮಯವನ್ನು ನೀಡಿದೆ. ನಿಮ್ಮ ಫಾಸ್ಟ್ಯಾಗ್ ಕಂಪನಿಯ ಪ್ರಕಾರ, ನೀವು ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್‌ನ ವೆಬ್‌ಸೈಟ್ ಅಥವಾ ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್‌ನ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಫಾಸ್ಟ್ಯಾಗ್‌ನ ಕೆ‌ವೈ‌ಸಿ ವಿವರಗಳನ್ನು ನವೀಕರಿಸಬಹುದು. ನೀವು ಇದನ್ನು ಮಾಡದಿದ್ದರೆ, ನಿಮ್ಮ ಫಾಸ್ಟ್ಯಾಗ್ ಖಾತೆ ಮತ್ತು ಸಾಧನವು ಏಪ್ರಿಲ್ 1 ರಿಂದ ಅಮಾನ್ಯವಾಗಲಿದೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.