Credit Card Alert: ಬಹುತೇಕ ಸಂದರ್ಭಗಳಲ್ಲಿ ನಮ್ಮ ತಕ್ಷಣದ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ, ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಇದಕ್ಕೆ ಸಂಬಂಧಿಸಿದ ಎಸ್ಎಂಎಸ್ ವಂಚನೆ ಬಗ್ಗೆ ಜಾಗರೂಕರಗಿರಿ. ಇಲ್ಲವೇ, ಮೋಸ ಹೋಗಬಹುದು. 


COMMERCIAL BREAK
SCROLL TO CONTINUE READING

ಹೌದು, ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಹೊಸ ರೀತಿಯ ವಂಚನೆ ಮುನ್ನಲೆಗೆ ಬಂದಿದ್ದು ಇದರಲ್ಲಿ  ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಇಷ್ಟು ಮೊತ್ತ ಬಾಕಿ ಉಳಿದಿದೆ. ಅದನ್ನು ತಕ್ಷಣವೇ ಠೇವಣಿ ಮಾಡಿ ಎಂದು ಬರೆಯಲಾಗಿರುತ್ತದೆ. ನೋಡಲು ಇದು ಬ್ಯಾಂಕ್ ಸಂದೇಶದಂತೆ ಕಂಡರೂ ಸಹ ಇದು TM-CMDSMS ಎಂಬ ಶೀರ್ಷಿಕೆಯೊಂದಿಗೆ ಬಂದಿರುತ್ತದೆ. 


ಇದನ್ನೂ ಓದಿ- 44% ವೇತನ ಹೆಚ್ಚಳದೊಂದಿಗೆ ಮುಂದಿನ ವೇತನ ಆಯೋಗವು ಕಾರ್ಯರೂಪಕ್ಕೆ ! ಸರ್ಕಾರಿ ನೌಕರರಲ್ಲಿ ಹರ್ಷ


ಇಂತಹ ಸಂದೇಶದ ಬಗ್ಗೆ ಇರಲಿ ಎಚ್ಚರ! 
ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ನಡೆಯುತ್ತಿರುವ ಈ ಹೊಸ ರೀತಿಯ ವಂಚನೆಯಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಶೀಘ್ರದಲ್ಲೇ ಪಾವತಿಸಿ ಎಂದು ಸಂದೇಶ ಕಳುಹಿಸಲಾಗಿರುತ್ತದೆ. ಉದಾಹರಣೆಗೆ ನೀವು 25,000ರೂ. ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುತ್ತೀರಿ ಎಂದು ಭಾವಿಸಿ. ನಿಮಗೆ ಬರುವ ಸಂದೇಶದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್‌ನ ಸಂಖ್ಯೆ xxxx3463 ರಲ್ಲಿ ಬಾಕಿ ಇರುವ ಹಣವನ್ನು ಶೀಘ್ರದಲ್ಲೇ ಠೇವಣಿ ಮಾಡಿ. ಇಲ್ಲದಿದ್ದರೆ, ಇದು ನಿಮ್ಮ  ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬಾಕಿ ಹಣವನ್ನು ಕೂಡಲೇ ಪಾವತಿಸಿ ಎಂದು ಬರೆಯಲಾಗಿರುತ್ತದೆ. 


ಒಂದೊಮ್ಮೆ ನೀವೇನಾದರೂ ಅಪ್ಪಿತಪ್ಪಿ ಸಂದೇಶದಲ್ಲಿ ಕಳುಹಿಸಲಾದ ಲಿಂಕ್ ಕ್ಲಿಕ್ ಮಾಡಿದ್ದೇ ಆದರೆ, ನೀವು ವಂಚನೆಗೆ ಬಲಿಯಾಗಬಹುದು. ನಿಮ್ಮ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗಬಹುದು. ಹಾಗಾಗಿ, ಇಂತಹ ಸಂದೇಶಗಳ ಬಗ್ಗೆ ಜಾಗರೂಕರಾಗಿರುವುದು ತುಂಬಾ ಅಗತ್ಯವಾಗಿದೆ. 


ಇದನ್ನೂ ಓದಿ- ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಪ್ರಮಾಣಪತ್ರ: ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗಗಳು...


ಕ್ರೆಡಿಟ್ ಕಾರ್ಡ್ ವಂಚನೆ ತಪ್ಪಿಸಲು ಈ ಮಾರ್ಗಗಳನ್ನು ಅನುಸರಿಸಿ: 
ಕ್ರೆಡಿಟ್ ಕಾರ್ಡ್ ಸಂಖ್ಯೆ ಪರಿಶೀಲನೆ: 

ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಗೆ ಸಂಬಂಧಿಸಿದ ಯಾವುದೇ ಸಂದೇಶವನ್ನು ಸ್ವೀಕರಿಸಿದರೆ ಮೊದಲು ಅದರಲ್ಲಿ ನೀಡಲಾದ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಪರಿಶೀಲಿಸಿ. ಅದು ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆಯೇ ಎಂಬುದನ್ನೂ ಖಾತರಿ ಪಡಿಸಿಕೊಳ್ಳಿ. 


ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್: 
ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್  ಚೆಕ್ ಮಾಡಿಒಳ್ಳಿ. 


ಲಿಂಕ್ ಕ್ಲಿಕ್ ಮಾಡಬೇಡಿ: 
ಯಾವುದೇ ಕಾರಣಕ್ಕೂ ನಿಮ್ಮ ಸಂದೇಶದಲ್ಲಿ ಬಂದಿರುವ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಮಾತ್ರವಲ್ಲ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಇದರಲ್ಲಿ ಹಂಚಿಕೊಳ್ಳಬೇಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.