ನವದೆಹಲಿ : ಬ್ಯಾಂಕ್ ಗಳ ಆನ್ ಲೈನ್ (online Banking) ಸೇವೆಗಳು ಬಹಳಷ್ಟು ಉತ್ತಮ ವಾಗಿದೆ. ಸರಳವಾಗಿದೆ. ಜೊತೆಗೆ ಆನ್ ಲೈನ್ ಬ್ಯಾಂಕಿಂಗ್  ವಂಚನೆ ಕೂಡಾ ಗ್ರಾಹಕರಿಗೆ ಮತ್ತು ಬ್ಯಾಂಕಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿಯೇ  ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ (SBI) ತನ್ನ 45 ಕೋಟಿ ಗ್ರಾಹಕರಿಗೆ ಅಲರ್ಟ್ ಜಾರಿ ಮಾಡಿದೆ. ಡಿಜಿಟಲ್ ಮೋಸದ ಬಗ್ಗೆ ಬ್ಯಾಂಕ್ ಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಲ ಕಾಲಕ್ಕೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಇವೆ. 


COMMERCIAL BREAK
SCROLL TO CONTINUE READING

ಹೆಚ್ಚುತ್ತಿರುವ ಡಿಜಿಟಲ್ ಮೋಸದ ಬಗ್ಗೆ ಎಚ್ಚರಿಕೆ ನೀಡಿದ ಎಸ್ ಬಿಐ :
ಎಸ್ ಬಿಐ (SBI) ಮತ್ತೊಮ್ಮೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.  ಡಿಜಿಟಲ್ ಮೋಸದ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸುವಂತೆ ಹೇಳಿದೆ. ಇಂದಿನ ದಿನಮಾನಗಳಲ್ಲಿ ಬಹುತೇಕ ಬ್ಯಾಂಕ್ ವ್ಯವಹಾರಗಳು ಮೊಬೈಲ್ ಆಪ್ (Mobile App)ಮೂಲಕವೇ ನಡೆಯುತ್ತದೆ.  ಬ್ಯಾಂಕಿಂಗ್ ಗೆ ಸೇರಿದ ಮಾಹಿತಿಗಳನ್ನು ನೀವು ಮೊಬೈಲಿನಲ್ಲಿ ಸೇವ್ ಮಾಡುವಿರಾದರೆ, ನಿಮಗೆ ಅಪಾಯ ಕಾದಿದೆ. ನೀವೂ ಮೋಸ ಹೋಗಬಹುದು. ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗಬಹುದು. 


ಇದನ್ನೂ ಓದಿ : 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!


ಎಸ್ ಬಿಐ ಹೇಳಿದ್ದೇನು..?
ಗ್ರಾಹಕರು ಎಚ್ಚರಿಕೆಯಿಂದಿರಬೇಕು.  ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಗಳನ್ನುಮೊಬೈಲಿನಲ್ಲಿ ಸೇವ್ ಮಾಡಿ ಇಡಬಾರದು.  ಮೊಬೈಲ್ ಬ್ಯಾಂಕಿಂಗ್ ಗೆ (Mobile banking)ಸಂಬಂಧಿಸಿದ ಪಿಐಎನ್, ಸಿವಿವಿ (CVV), ಡೆಬಿಟ್ ಕಾರ್ಡ್ (Debit Card),  ಕ್ರೆಡಿಟ್ ಕಾರ್ಡ್ ನಂಬರ್, ಪಾಸ್ ವರ್ಡ್ ಇತ್ಯಾದಿ ಸೂಕ್ಷ್ಮ ಮಾಹಿತಿಗಳನ್ನು ಮೊಬೈಲಿನಲ್ಲಿ ಸೇವ್ ಮಾಡುವಿರಾದರೆ, ಅದು ನಿಮ್ಮ ದೊಡ್ಡ ತಪ್ಪಾಗಲಿದೆ. ಯಾವತ್ತೂ ಹಾಗೆ ಮಾಡಬೇಡಿ ಎಂದು ಎಸ್ ಬಿಐ ಎಚ್ಚರಿಕೆ ನೀಡಿದೆ. 


ನೀವೇನಾದರೂ ಈ ಮಾಹಿತಿಗಳನ್ನು ಮೊಬೈಲಿನಲ್ಲಿ ಸೇವ್ ಮಾಡಿಟ್ಟಿದ್ದರೆ, ಕೂಡಲೇ ಡಿಲೀಟ್ ಮಾಡಿ. ಇದರಿಂದ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗಿ ಬಿಡಬಹುದು. 
ಈ ತಪ್ಪುಗಳನ್ನು ಎಂದೆಂದಿಗೂ ಮಾಡಬಾರದು.


ಇದನ್ನೂ ಓದಿ : Oil Company ಗ್ರಾಹಕರಿಗೆ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ


1. ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಮೊಬೈಲಿನಲ್ಲಿ ಸೇವ್ ಮಾಡಿಟ್ಟಿದ್ದರೆ, ಅದು ಲೀಕ್ ಆಗಬಹುದು. ಹಾಗಾಗಿ ಆ ತಪ್ಪು ಮಾಡಕೂಡದು. 


2. ಎಟಿಎಂ ಕಾರ್ಡ್ ನ್ನು (ATM Card) ಬಹಳ  ಎಚ್ಚರಿಕೆಯಿಂದ ಬಳಸಿ.  ಎಟಿಎಂ ನಂಬರ್, ಪಾಸ್ ವರ್ಡ್, ಸಿವಿವಿ ಯಾವತ್ತಿಗೂ ಯಾರ ಜೊತೆಗೂ ಶೇರ್ ಮಾಡಬೇಡಿ.  ನಿಮ್ಮ ಎಟಿಎಂ ಕಾರ್ಡನ್ನು ಯಾರಿಗೂ ಬಳಸಲು ನೀಡಬೇಡಿ.


3. ಇನ್ನು ಬ್ಯಾಂಕಿಂಗ್ ವ್ಯವಹಾರಗಳಿಗಾಗಿ  ಎಂದಿಗೂ ಪಬ್ಲಿಕ್ ಇಂಟರ್ ನೆಟ್ ಬಳಸದಂತೆ ಬ್ಯಾಂಕ್ ಗ್ರಾಹಕರಿಗೆ ಸೂಚಿಸಿದೆ. ಪಬ್ಲಿಕ್ ಇಂಟರ್  ನೆಟ್ ಬಳಸಿದರೆ, ನಿಮ್ಮ ಮಾಹಿತಿ ಲೀಕ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.