ಉದ್ಯೋಗ ಬದಲಾಯಿಸುವಾಗ ಇಪಿಎಫ್ ಗೆ ಸಂಬಂಧಿಸಿದ ಈ ಕೆಲಸ ಮಾಡುವುದನ್ನು ಮರೆಯದಿರಿ ! ನಷ್ಟವಾಗುವುದು ಖಂಡಿತಾ !
EPFO Update : EPF ಖಾತೆಗಳಿಗೆ ಸಂಬಂಧಿಸಿದ ಅನೇಕ ಅಪ್ಡೇಟ್ ಗಳು ಕಾಲಕಾಲಕ್ಕೆ ಬಿಡುಗಡೆಯಾಗುತ್ತವೆ. ಇಪಿಎಫ್ ಸದಸ್ಯರು ಇವುಗಳನ್ನು ಗಮನಿಸುತ್ತಿರಬೇಕು.
ಬೆಂಗಳೂರು : ಎಲ್ಲಾ ಕಚೇರಿ ಕೆಲಸಗಾರರು EPF ಸದಸ್ಯರಾಗಿರುತ್ತಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳನ್ನು ನಿರ್ವಹಿಸುತ್ತದೆ. ಉದ್ಯೋಗಿಗಳು ತಮ್ಮ ಮಾಸಿಕ ವೇತನದ ಒಂದು ಭಾಗವನ್ನು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಕೂಡಾ ಅಷ್ಟೇ ಪ್ರಮಾಣದ ಮೊತ್ತವನ್ನು ಖಾತೆಗೆ ಠೇವಣಿ ಮಾಡುತ್ತದೆ. EPF ಖಾತೆಗಳಿಗೆ ಸಂಬಂಧಿಸಿದ ಅನೇಕ ಅಪ್ಡೇಟ್ ಗಳು ಕಾಲಕಾಲಕ್ಕೆ ಬಿಡುಗಡೆಯಾಗುತ್ತವೆ. ಇಪಿಎಫ್ ಸದಸ್ಯರು ಇವುಗಳನ್ನು ಗಮನಿಸುತ್ತಿರಬೇಕು.
ಖಾಸಗಿ ವಲಯದ ಉದ್ಯೋಗಿಗಳು ಕಾಲಕಾಲಕ್ಕೆ ತಮ್ಮ ಕೆಲಸವನ್ನು ಬದಲಾಯಿಸುತ್ತಾರೆ. ಉತ್ತಮ ಆದಾಯ, ಸ್ಥಳಾಂತರ ಹೀಗೆ ಕೆಲಸ ಬದಲಾಯಿಸುವುದಕ್ಕೆ ಬೇರೆ ಬೇರೆ ಕಾರಣಗಳಿರುತ್ತದೆ. ಉದ್ಯೋಗಿಗಳು ಉದ್ಯೋಗವನ್ನು ಬದಲಾಯಿಸಿದಾಗಲೆಲ್ಲಾ ಅವರು ಮಾಡಲೇಬೇಕಾದ ಮುಖ್ಯ ಕೆಲಸವೊಂದಿರುತ್ತದೆ. ಇದು ಇಪಿಎಫ್‌ಗೆ ಸಂಬಂಧಿಸಿದ ಕೆಲಸ.
ಇದನ್ನೂ ಓದಿ : ಕಡಿಮೆ ಭೂಮಿ ಹೊಂದಿರುವರಿಗೆ ಗುಡ್ ನ್ಯೂಸ್: ನೇರವಾಗಿ ಖಾತೆಗೆ ಬರುತ್ತೆ 10 ಸಾವಿರ ರೂ.
ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಬದಲಾಯಿಸಿದಾಗ, ಹೊಸ ಕಂಪನಿಯಲ್ಲಿ ಹೊಸ EPF ಖಾತೆಯನ್ನು ತೆರೆಯಲಾಗುತ್ತದೆ. ಅನೇಕ ಉದ್ಯೋಗಿಗಳು ಈಗಾಗಲೇ ಇಪಿಎಫ್ ಖಾತೆಯನ್ನು ಹೊಂದಿರುವಾಗ ಹೊಸ ಖಾತೆಯನ್ನು ತೆರೆಯುವ ಅವಶ್ಯಕತೆ ಇಲ್ಲ. ಒಂದು ವೇಳೆ ಹೊಸ ಖಾತೆಯನ್ನು ತೆರೆದರೆ,ಹಳೆಯ ಕಂಪನಿಯ ಖಾತೆಗೆ ಏನಾಗುತ್ತದೆ? ಆ ಖಾತೆಯಲ್ಲಿರುವ ಮೊತ್ತವನ್ನು ಹಿಂಪಡೆಯುವುದು ಹೇಗೆ? ಈ ಎರಡು ಖಾತೆಗಳನ್ನು ಒಟ್ಟಿಗೆ ಲಿಂಕ್ ಮಾಡಬಹುದೇ? ಇಂತಹ ಪ್ರಶ್ನೆಗಳು ಉದ್ಬವಿಸುತ್ತವೆ.
ಹೊಸ PF ಖಾತೆಯನ್ನು ತೆರೆಯುವ ಅವಶ್ಯಕತೆ ಇದೆಯೇ ?:
20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಕಂಪನಿಯು ನಿಮ್ಮ PF ಖಾತೆಯನ್ನು ತೆರೆಯಬೇಕು. ಈ ಮೂಲಕ ಉದ್ಯೋಗಿ ಮತ್ತು ಕಂಪನಿ ಇಬ್ಬರೂ ಉದ್ಯೋಗಿಯ ಭವಿಷ್ಯ ನಿಧಿಗೆ ಕೊಡುಗೆ ನೀಡಬೇಕಾಗುತ್ತದೆ.
ಯಾವುದೇ ಉದ್ಯೋಗಿ ಮೊದಲ ಬಾರಿಗೆ ಕೆಲಸಕ್ಕೆ ಸೇರಿದಾಗ ಮತ್ತು ಇಪಿಎಫ್ ಖಾತೆಯನ್ನು ತೆರೆದಾಗ,ಇಪಿಎಫ್‌ಒನಿಂದ ಯುಎಎನ್ ಸಂಖ್ಯೆಯನ್ನು ಪಡೆಯುತ್ತಾರೆ. ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಬದಲಾಯಿಸಿದಾಗ, ಹೊಸ ಕಂಪನಿಯು ಅವರಿಗೆ ಹೊಸ PF ಖಾತೆಯನ್ನು ತೆರೆಯುತ್ತದೆ. ಆದರೆ UAN ಬದಲಾಗುವುದಿಲ್ಲ.
ಇದನ್ನೂ ಓದಿ : ಶನಿವಾರ ಭಾನುವಾರವೂ ತೆರೆದಿರುತ್ತದೆ ಬ್ಯಾಂಕ್ ! ಇದು RBI ನೀಡಿದ ಆದೇಶ
ಒಂದೇ UAN ಅಡಿಯಲ್ಲಿ ಅನೇಕ PF ಖಾತೆಗಳನ್ನು ಹೊಂದಲು ಇದು ಕಾರಣವಾಗಿದೆ. ಉದ್ಯೋಗಿಗಳ ಪಿಎಫ್ ಲಭ್ಯತೆಯೂ ಬದಲಾಗುತ್ತದೆ. ನೌಕರರು ತಮ್ಮ ಎಲ್ಲಾ ಖಾತೆಗಳನ್ನು ಲಿಂಕ್ ಮಾಡುವವರೆಗೂ ಇವು ಪ್ರತ್ಯೇಕವಾಗಿಯೇ ಉಳಿಯುತ್ತವೆ.
ಇಪಿಎಫ್ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? :
- ಮೊದಲು PF ಖಾತೆಯನ್ನು ವಿಲೀನಗೊಳಿಸಲು https://www.epfindia.gov.in/ ಗೆ ಹೋಗಿ .
- ಅದರ ನಂತರ Services ವಿಭಾಗದಲ್ಲಿ For Employee ಕ್ಲಿಕ್ ಮಾಡಿ.
- One Employee ಮತ್ತು One EPF Account ಆಯ್ಕೆಯನ್ನು ಆರಿಸಿ.
- ತೆರೆಯುವ ಹೊಸ ಪುಟದಲ್ಲಿ, UAN, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಮತ್ತು ಲಾಗಿನ್ ಮಾಡಿ.
- ಮುಂದಿನ ಪುಟದಲ್ಲಿ ನೀವು ಹಳೆಯ PF ಖಾತೆ ವಿವರಗಳು ಕಾಣಿಸುತ್ತದೆ.
- ಈಗ PF ಖಾತೆ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಮಾಡಿ
- ನಂತರ ನಿಮ್ಮ ಹಳೆಯ ಖಾತೆಯನ್ನು ಹೊಸ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.
PF ಖಾತೆಗಳನ್ನು ಲಿಂಕ್ ಮಾಡಿದಾಗ ಏನಾಗುತ್ತದೆ? :
ಉದ್ಯೋಗಿಗಳು ಎಲ್ಲಾ PF ಖಾತೆಗಳನ್ನು ವಿಲೀನಗೊಳಿಸಿದರೆ, UAN ಅವರ ಎಲ್ಲಾ ಕೆಲಸದ ಅನುಭವವನ್ನು ಲಿಂಕ್ ಮಾಡುತ್ತದೆ.ಉದಾಹರಣೆಗೆ, ಒಬ್ಬ ವ್ಯಕ್ತಿಯು ಮೂರು ಕಂಪನಿಗಳಲ್ಲಿ ತಲಾ 2 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ಇಪಿಎಫ್ ಖಾತೆಗಳನ್ನು ಲಿಂಕ್ ಮಾಡಿದ ನಂತರ, ಅವರ ಒಟ್ಟು ಅನುಭವ 6 ವರ್ಷಗಳು ಎಂದು ತೋರಿಸುತ್ತದೆ. ಆದರೆ, ಖಾತೆಗಳನ್ನು ಲಿಂಕ್ ಮಾಡದಿದ್ದರೆ, ಖಾತೆಗಳು ವಿಭಿನ್ನವಾಗಿರುತ್ತವೆ.ಹಾಗಾದಾಗ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವಾಗ ಉದ್ಯೋಗಿ 10 ಪ್ರತಿಶತ ಟಿಡಿಎಸ್ ಪಾವತಿಸಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.