ಬೆಂಗಳೂರು : ಸುಮಾರು ಒಂದು ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿ ಭತ್ಯೆ ಹೆಚ್ಚಳದ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ. ಪ್ರತಿ ವರ್ಷ ಎರಡು ಬಾರಿ  ತುಟ್ಟಿಭತ್ಯೆ  ದರವನ್ನು ಹೆಚ್ಚಿಸಲಾಗುತ್ತದೆ. ಕೊನೆಯ ಡಿಎ ಹೆಚ್ಚಳವನ್ನು ಮಾರ್ಚ್ 24, 2023 ರಂದು ಘೋಷಿಸಲಾಯಿತು. ಇದು ಜನವರಿ 1, 2023 ರಿಂದ ಜಾರಿಗೆ ಬಂದಿದೆ. ಆಗ ಕೇಂದ್ರ ಸರ್ಕಾರ  ಶೇ.4ರಷ್ಟು ಹೆಚ್ಚಿಸಿ ತುಟ್ಟಿಭತ್ಯೆಯನ್ನು ಶೇ.42ರಷ್ಟು ಮಾಡಿತ್ತು. 


COMMERCIAL BREAK
SCROLL TO CONTINUE READING

ತುಟ್ಟಿಭತ್ಯೆ ಏರಿಕೆ ಅಧಿಸೂಚನೆ ಯಾವಾಗ ? :
ನೌಕರರಿಗೆ ಗುಡ್ ನ್ಯೂಸ್ ಯಾವಾಗ ಸಿಗುತ್ತದೆ ಎಂದು ಸರ್ಕಾರ ಇನ್ನೂ ಬಹಿರಂಗಪಡಿಸದಿದ್ದರೂ, ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ ವೇತನ ಹೆಚ್ಚಳ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರವು ಒಂದು ಕೋಟಿಗೂ ಅಧಿಕ ಪಿಂಚಣಿದಾರರು ಮತ್ತು ನೌಕರರಿಗೆ ಶೇ.3 ರಷ್ಟು  ಡಿಎ ಯನ್ನು ಹೆಚ್ಚಿಸುವ ಮೂಲಕ ಒಟ್ಟು  ತುಟ್ಟಿಭತ್ಯೆಯನ್ನು ಶೇ.45ಕ್ಕೆ ಏರಿಸಲಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಈ ಬಾರಿ ಕೂಡಾ ತುಟ್ಟಿಭತ್ಯೆ  ಶೇ.4ರಷ್ಟು ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆ ಕೂಡಾ ಇದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 2023 ರಲ್ಲಿ ಈ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. 


ಇದನ್ನೂ ಓದಿ : ತಿಂಗಳಿಗೆ 210 ರೂಪಾಯಿ ಠೇವಣಿ ಮಾಡಿದರೆ ಸಿಗುವುದು 5,000 ರೂ. ಮಾಸಿಕ ಪಿಂಚಣಿ!


ಡಿಎ ಹೆಚ್ಚಳದ ಬಗ್ಗೆ ಬಿಗ್ ಅಪ್ಡೇಟ್ : 
7ನೇ ವೇತನ ಆಯೋಗವು ಹಣದುಬ್ಬರದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಡಿಎ ಹೆಚ್ಚಳ ಮಾಡುತ್ತದೆ.  ಇದನ್ನು ವರ್ಷಕ್ಕೆ ಎರಡು ಬಾರಿ, ಅಂದರೆ ಆರು ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಮೊತ್ತವು ಪ್ರಸ್ತುತ ಹಣದುಬ್ಬರದ ದರವನ್ನು ಅವಲಂಬಿಸಿರುತ್ತದೆ. ಈ ಭತ್ಯೆಯನ್ನು ಆಯಾ ವೇತನ ಶ್ರೇಣಿಯ ಆಧಾರದ ಮೇಲೆ ನೌಕರರ ಮೂಲ ವೇತನದ ಪ್ರಕಾರ ಲೆಕ್ಕಹಾಕಲಾಗುತ್ತದೆ.


ನೌಕರರಿಗೆ ಸಿಗಲಿದೆ ಗುಡ್ ನ್ಯೂಸ್ : 
ಆದಷ್ಟು ಬೇಗ  ಡಿಎ ಹೆಚ್ಚಳದ ಬಗ್ಗೆ ಕೂಡಾ ನೌಕರರಿಗೆ ತಿಳಿಸಲಾಗುವುದು. ಇದರೊಂದಿಗೆ ಅವರಿಗೆ ಮತ್ತೊಂದು ಶುಭ ಸುದ್ದಿ ಕಾದಿದೆ. ನೌಕರರ ಫಿಟ್‌ಮೆಂಟ್ ಅಂಶವನ್ನೂ ಸರ್ಕಾರ ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದಲ್ಲೇ ಮೋದಿ ಸರ್ಕಾರ ಈ ಬಗ್ಗೆ ಒಳ್ಳೆಯ ಸುದ್ದಿ ನೀಡಲಿದೆ. 


ಇದನ್ನೂ ಓದಿ : Sugar Price Hike: ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಸಕ್ಕರೆ ದರ ಏರಿಕೆ! 


ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ : 
ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಬೇಕೆಂದು ನೌಕರರು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಫಿಟ್‌ಮೆಂಟ್ ಅಂಶ ಏರಿಕೆಯಾದರೆ ನೌಕರರ ಮೂಲ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ. ಫಿಟ್‌ಮೆಂಟ್ ಅಂಶ ಮತ್ತು ಡಿಎ ಹೆಚ್ಚಳದ ದಿನಾಂಕವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ. ಆದರೆ, ಶೀಘ್ರವೇ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. 


ಫಿಟ್‌ಮೆಂಟ್ ಅಂಶವನ್ನು 2016 ರಲ್ಲಿ ಹೆಚ್ಚಿಸಲಾಯಿತು : 
ಏಳನೇ ವೇತನ ಆಯೋಗವನ್ನು ಸರ್ಕಾರ 2016ರಲ್ಲಿ ಜಾರಿಗೆ ತಂದಿದೆ.  7ನೇ ವೇತನ ಆಯೋಗದ ಅಡಿಯಲ್ಲಿ ನೌಕರರ ವೇತನವನ್ನು ಹೆಚ್ಚಿಸಲಾಗಿದೆ. ಅದರ ನಂತರ ಅವರ ಕನಿಷ್ಠ ವೇತನದಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬಂದಿದೆ. ಫಿಟ್ ‌ಮೆಂಟ್ ಅಂಶವನ್ನು  3.68 ಪಟ್ಟು ಹೆಚ್ಚಿಸುವಂತೆ ನೌಕರರು ಒತ್ತಾಯಿಸುತ್ತಿದ್ದಾರೆ. ಹೀಗಾದಾಗ ಉದ್ಯೋಗಿಯು ಮೂರು ಪಟ್ಟು ವೇತನ ಹೆಚ್ಚಳವನ್ನು ಪಡೆಯುವ ನಿರೀಕ್ಷೆಯಿದೆ.


ಇದನ್ನೂ ಓದಿ : ಶ್ರಾವಣದಲ್ಲಿ ನಿರಂತರ ಇಳಿಕೆ ಕಾಣುತ್ತಿದೆ ಚಿನ್ನದ ಬೆಲೆ: ಇಂದು 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.