DigiLocker update : ಡ್ರೈವಿಂಗ್ ಲೈಸೆನ್ಸ್ (ಡಿಎಲ್), ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ವಿಮೆಯಂತಹ ದಾಖಲೆಗಳನ್ನು ನಿಮ್ಮ ವಾಹನ ಚಲಾಯಿಸುವಾಗ ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ. ಸರ್ಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡುವುದರೊಂದಿಗೆ, ದಾಖಲೆಗಳನ್ನು ಈಗ ಡಿಜಿಟಲ್ ರೂಪದಲ್ಲಿ ಮತ್ತು ಅಗತ್ಯವಿದ್ದಾಗ ಬಳಕೆಗೆ ಸುಲಭವಾಗಿ ಸಿಗುವಂತೆ ಮಾಡಿವೆ. ಇದೀಗ, ಈ ದಾಖಲೆಗಳನ್ನು ಜನರಿಗೆ ಅವರ ಮೊಬೈಲ್ ಫೋನ್‌ಗಳಲ್ಲಿ ಹೆಚ್ಚಾಗಿ ಬಳಸುವ ವಾಟ್ಸಾಪ್‌ ಮೂಲಕ ಸಿಗುವ ಹೊಸ ಸೌಲಭ್ಯವನ್ನು ಸರ್ಕಾರ ಆರಂಭಿಸಿದೆ.


COMMERCIAL BREAK
SCROLL TO CONTINUE READING

ಈ ವಾರದ ಆರಂಭದಲ್ಲಿ, ವಾಟ್ಸಾಪ್‌ನಲ್ಲಿನ MyGov ಹೆಲ್ಪ್‌ಡೆಸ್ಕ್‌ಗೆ ಡಿಜಿಲಾಕರ್ ಸೇವೆಗಳನ್ನು ಸೇರಿಸಲಾಗಿದೆ. ಈ ಸಹಾಯವಾಣಿ ಸಂಖ್ಯೆಯನ್ನು ಈ ಹಿಂದೆ WhatsApp ನಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರ ಡೌನ್‌ಲೋಡ್‌ನಂತಹ CoWin ಸಂಬಂಧಿತ ಸೇವೆಗಳನ್ನು ಸುಲಭಗೊಳಿಸಲು ಬಳಸಲಾಗುತ್ತಿತ್ತು. ಈಗ, ಡಿಎಲ್, ವಾಹನ ಆರ್‌ಸಿ ಮತ್ತು ದ್ವಿಚಕ್ರ ವಾಹನ ವಿಮಾ ಪಾಲಿಸಿಯನ್ನು ಡೌನ್‌ಲೋಡ್ ಮಾಡುವುದು ಸೇರಿದಂತೆ ಹಲವಾರು ಸೇವೆಗಳನ್ನು ಸೇರಿಸಲಾಗಿದೆ.


ಇದನ್ನೂ ಓದಿ : Arecanut Today: ಕರ್ನಾಟಕ ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ದರ


ಈ ಸೇವೆಯನ್ನು ಬಳಸಲು, ಡಿಜಿಲಾಕರ್ ಖಾತೆಯ ಅಗತ್ಯವಿದೆ. ತಮ್ಮ ಡಿಜಿಲಾಕರ್ ಖಾತೆಯನ್ನು ಇನ್ನೂ ಪ್ರಾರಂಭಿಸದವರಿಗೆ, ಸಹಾಯವಾಣಿಯು ಸರಳವಾದ ಆಧಾರ್ ಕಾರ್ಡ್ ಮತ್ತು ಮೊಬೈಲ್ OTP ಆಧಾರಿತ ಪರಿಶೀಲನೆಯೊಂದಿಗೆ ಸುಲಭವಾಗಿ ಲಾಗ್ ಇನ್ ಮಾಡಬಹುದು. ಒಮ್ಮೆ ನೋಂದಾಯಿಸಿದ ನಂತರ, ನಿಮ್ಮ ವಾಟ್ಸಾಪ್‌ನಲ್ಲಿ ಹಲವಾರು ಪ್ರಮುಖ ದಾಖಲೆಗಳನ್ನು ಶೇಖರಿಸಲು ಪಡೆಯಲು ನಿಮಗೆ ಸಾಧ್ಯವಾಗುತ್ತದೆ.


ಡಿಎಲ್ ಮತ್ತು ವೆಹಿಕಲ್ ಆರ್‌ಸಿಯ ಹೊರತಾಗಿ, ನಿಮ್ಮ ದ್ವಿಚಕ್ರ ವಾಹನ ವಿಮಾ ಪಾಲಿಸಿ, ಪ್ಯಾನ್ ಕಾರ್ಡ್, ಸಿಬಿಎಸ್‌ಇ ಹತ್ತನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು ಮಾರ್ಕ್‌ಶೀಟ್, ಹನ್ನೆರಡನೇ ತರಗತಿಯ ಮಾರ್ಕ್‌ಶೀಟ್ ಮತ್ತು ವಿಮಾ ಪಾಲಿಸಿ ದಾಖಲೆಯನ್ನು (ಜೀವನ ಮತ್ತು ಜೀವನೇತರ) ಡಿಜಿಲಾಕರ್ ಖಾತೆಯಲ್ಲಿ ವಾಟ್ಸಾಪ್‌ ಮೂಲಕ ಪಡೆಯಬಹುದು.


WhatsApp ನಲ್ಲಿ ಈ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?


ಡಾಕ್ಯುಮೆಂಟ್ ಡೌನ್‌ಲೋಡ್ ಸೇವೆಯನ್ನು ಪಡೆಯಲು, ನೀವು WhatsApp ನಲ್ಲಿ MyGov ಹೆಲ್ಪ್‌ಡೆಸ್ಕ್ ಅನ್ನು ಸೇರಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಸಹಾಯವಾಣಿ ಸಂಖ್ಯೆ +91 9013151515 ಅನ್ನು ಸೇವ್ ಮಾಡಿಕೊಳ್ಳಬೇಕು ಮತ್ತು ಅದನ್ನು ನಿಮ್ಮ ವಾಟ್ಸಾಪ್‌ನಲ್ಲಿ ತೆರೆಯಿರಿ.


- 'ನಮಸ್ತೆ' ಅಥವಾ 'ಹಾಯ್' ಅಥವಾ ಕೇವಲ 'ಡಿಜಿಲಾಕರ್' ಎಂದು ಟೈಪ್ ಮಾಡಿ ಮತ್ತು ನಮೂದಿಸಿ.
- ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ನಿಮ್ಮನ್ನು ಕೇಳಲಾಗುತ್ತದೆ, ಹೌದು ಅಥವಾ ಇಲ್ಲ ಎಂದು ಟೈಪ್ ಮಾಡಿ
- ಪರಿಶೀಲನೆ ಪ್ರಕ್ರಿಯೆಯನ್ನು ಬಳಸಿಕೊಂಡು ನಿಮ್ಮ ಡಿಜಿಲಾಕರ್ ಖಾತೆಯನ್ನು ತೆರೆಯಿರಿ
ನೀವು ಡೌನ್‌ಲೋಡ್ ಮಾಡಲು ಬಯಸುವ ಡಾಕ್ಯುಮೆಂಟ್‌ನ ನಿರ್ದಿಷ್ಟ ಸಂಖ್ಯೆಯನ್ನು ಟೈಪ್ ಮಾಡಿ.
- ಪ್ಯಾನ್ ಸಂಖ್ಯೆ, ಐಡಿಯಲ್ಲಿ ಪೂರ್ಣ ಹೆಸರು ಮುಂತಾದ ಡಾಕ್ಯುಮೆಂಟ್ ಸಂಬಂಧಿತ ವಿವರಗಳೊಂದಿಗೆ ನೀವು ಪರಿಶೀಲಿಸಬೇಕಾಗುತ್ತದೆ
- ಎಲ್ಲಾ ಹಂತಗಳು ಪೂರ್ಣಗೊಂಡ ನಂತರ, ನೀವು WhatsApp MyGov ಹೆಲ್ಪ್‌ಡೆಸ್ಕ್ ವಿಂಡೋದಲ್ಲಿ ಬಯಸಿದ ಡಾಕ್ಯುಮೆಂಟ್‌ನ PDF ನಕಲನ್ನು ಪಡೆಯಬಹುದು.


ಇದನ್ನೂ ಓದಿ : Stock market: ಸತತ 3 ದಿನಗಳ ಕುಸಿತದ ನಂತರ ಷೇರು ಮಾರುಕಟ್ಟೆ ಚೇತರಿಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.