Driving Licence: ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಸರ್ಕಾರ, ಸಾರಿಗೆ ಇಲಾಖೆ ಮತ್ತು ಸಮಾಜದ ಜವಾಬ್ದಾರಿಯುತ ಜನರು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಈ ಅಪಘಾತಗಳನ್ನು ತಡೆಗಟ್ಟಲು ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಕಾಲಕಾಲಕ್ಕೆ ಬದಲಾಯಿಸಲಾಗುತ್ತಿದೆ. ಇದರೊಂದಿಗೆ ಇಲಾಖೆಯಿಂದ  ರಸ್ತೆ ಸುರಕ್ಷತಾ ವಾರ ಸೇರಿದಂತೆ ಇತರ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.  


COMMERCIAL BREAK
SCROLL TO CONTINUE READING

ಜನರು ಸುರಕ್ಷಿತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಮ್ಮ ಗಮ್ಯಸ್ಥಾನವನ್ನು ತಲುಪುವಂತೆ ಮಾಡುವ ನಿಟ್ಟಿನಲ್ಲಿ ಸಾರಿಗೆ ಸಚಿವಾಲಯವು ಸುರಕ್ಷಿತ ಚಾಲನೆಯ ಬಗ್ಗೆ ಬಹಳ ಜಾಗೃತವಾಗಿದೆ. ಇದರ ಹೊರತಾಗಿಯೂ ಕೆಲವರು ಸಂಚಾರ ನಿಯಮಗಳನ್ನು ನಿರ್ಲಕ್ಷಿಸುತ್ತಾರೆ. ಅಂತಹ ಜನರಿಗೆ ಪಾಠ ಕಲಿಸಲು, ಸಾರಿಗೆ ಇಲಾಖೆಯು ಇದಕ್ಕಾಗಿ ಹೆಚ್ಚಿನ ದಂಡವನ್ನು ನಿಗದಿಪಡಿಸಿದೆ.


ಬನ್ನಿ ಇಂದಿನ ಲೇಖನದಲ್ಲಿ ಯಾವ ಟ್ರಾಫಿಕ್ ರೂಲ್ಸ್ (Traffic Rules) ಅನುಸರಿಸದಿದ್ದರೆ ಎಷ್ಟು ದಂಡ ವಿಧಿಸಲಾಗುತ್ತದೆ. ಯಾವ ನಿಯಮಗಳ ಉಲ್ಲಂಘನೆಗೆ ಚಾಲನಾ ಪರವಾನಗಿ ಅನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ತಿಳಿಯೋಣ.


ಇದನ್ನೂ ಓದಿ - ಆನ್ಲೈನ್'ನಲ್ಲಿ ಡ್ರೈವಿಂಗ್ ಲೈಸೆನ್ಸ್-Aadhaar ಲಿಂಕ್ ಮಾಡಲು ಹೀಗೆ ಮಾಡಿ!


1. ನೀವು ಕಾರನ್ನು ಚಾಲನೆ ಮಾಡುವಾಗ ನಿಮ್ಮ ಕಾರಿನಲ್ಲಿ ಆನ್ ಮಾಡುವ ಸಂಗೀತದ ಧ್ವನಿ  ಹೆಚ್ಚಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಕಾರಿನಲ್ಲಿ ಜೋರು ಧ್ವನಿಯಲ್ಲಿ ಮ್ಯೂಸಿಕ್ ಕೇಳುತ್ತಿದ್ದರೆ 100 ರೂಪಾಯಿಗಳ ಚಲನ್ ಕಡಿತಗೊಳಿಸಬಹುದು. ಅದೇ ಸಮಯದಲ್ಲಿ ನಿಮ್ಮ ಕಾರಿನಲ್ಲಿ ಆನ್ ಮಾಡಲಾಗಿರುವ ಕಿವಿ ಕಿತ್ತುಹೋಗುವ ಸಂಗೀತದಿಂದ ರಸ್ತೆಯಲ್ಲಿ ನಡೆಯುವ ಇತರ ಜನರಿಗೆ ಅಪಾಯವಾಗಿದೆ ಎಂದು ಕಂಡು ಬಂದರೆ ಟ್ರಾಫಿಕ್ ಪೊಲೀಸರು ಈ ದಂಡದ ಮೊತ್ತವನ್ನು  ಮೊತ್ತವನ್ನು ಸಹ ಹೆಚ್ಚಿಸಬಹುದು. ಇದಲ್ಲದೆ ಚಾಲಕರ ಪರವಾನಗಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬಹುದು.


2. ಹೆಚ್ಚಿನ ಜನರು ದ್ವಿಚಕ್ರ ವಾಹನವಾಗಿರಲಿ ಅಥವಾ ನಾಲ್ಕು ಚಕ್ರದ ವಾಹನವಾಗಿರಲಿ ಅದರಲ್ಲಿ ಅತಿ ವೇಗದ ಚಾಲನೆಯನ್ನು ಇಷ್ಟಪಡುತ್ತಾರೆ. ಈ ಸಂದರ್ಭದಲ್ಲಿ ಹಲವರು ಹಲವು ಬಗೆಯ ಸಾಹಸಗಳನ್ನು ನಡೆಸಲು ಕೂಡ ಮುಂದಾಗುತ್ತಾರೆ. ನೀವೂ ಕೂಡ ಅಂತಹ ಸಾಹಸಕ್ಕೆ ಕೈಹಾಕುತ್ತಿದ್ದಾರೆ ಎಚ್ಚರ! ಏಕೆಂದರೆ ಹಾಗೆ ಮಾಡುವುದರಿಂದ ದಂಡ ಅಥವಾ ಪರವಾನಗಿ (Driving Licence) ಮುಟ್ಟುಗೋಲು ಹಾಕಿಕೊಳ್ಳಬಹುದು. ವೇಗದ ಮಿತಿಯನ್ನು ಸರ್ಕಾರವು ನಿಗದಿಪಡಿಸಿದೆ, ವಿಶೇಷವಾಗಿ ಶಾಲೆ ಅಥವಾ ಆಸ್ಪತ್ರೆಯ ಬಳಿ ಗಂಟೆಗೆ 25 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಈ ರಸ್ತೆಗಳಲ್ಲಿ ವಾಹನ ಚಲಾಯಿಸದಿರಲು ಪ್ರಯತ್ನಿಸಿ.


3. ವಾಹನ ಚಲಾಯಿಸುವಾಗ ಫೋನ್‌ನಲ್ಲಿ (Phone) ಮಾತನಾಡುವುದನ್ನು ನಿಷೇಧಿಸಲಾಗಿದೆ. ಆದರೆ ಇದನ್ನು ತೊಡೆದುಹಾಕಲು ಹಲವರು ಚಾಲನೆ ಮಾಡುವಾಗ ಬ್ಲೂಟೂತ್ ಮೂಲಕ  ಫೋನ್‌ನಲ್ಲಿ ಮಾತನಾಡುತ್ತಾರೆ. ಆದರೆ ಇದು ಕಾನೂನುಬಾಹಿರ ಮತ್ತು ಹಾಗೆ ಮಾಡುವುದರಿಂದ ದಂಡ ಅಥವಾ ಪರವಾನಗಿ ಮುಟ್ಟುಗೋಲು ಹಾಕಿಕೊಳ್ಳಬಹುದು.


ಇದನ್ನೂ ಓದಿ - ಅಂಚೆ ಕಚೇರಿಯಲ್ಲಿ ಡಿಎಲ್‌ನಿಂದ ಪ್ಯಾನ್ ಕಾರ್ಡ್‌ವರೆಗೆ ಅರ್ಜಿ ಸಲ್ಲಿಸಲು ಇದು ಸುಲಭ ವಿಧಾನ


4. ಜೀಬ್ರಾ ಕ್ರಾಸಿಂಗ್ (Zebra Crossing) ಅನ್ನು ರಸ್ತೆಯಲ್ಲಿ ಏಕೆ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ, ಪಾದಚಾರಿಗಳು ಆರಾಮವಾಗಿ ರಸ್ತೆ ದಾಟಲು ಇದನ್ನು ಮಾಡಲಾಗುತ್ತದೆ. ಆದರೆ ಅನೇಕ ಜನರು ಸಿಗ್ನಲ್ ನಲ್ಲಿ ರೆಡ್ ಲೈಟ್ ಇದ್ದಾಗಲೂ ಸಹ ಚಾಲನೆ ಮಾಡುತ್ತಾರೆ. ಹಾಗೆ ಮಾಡಿದರೆ ನಿಮಗೆ ದಂಡ ವಿಧಿಸಬಹುದು. ಇದು ಮಾತ್ರವಲ್ಲ, ನಿಮ್ಮ ಚಾಲನಾ ಪರವಾನಗಿಯನ್ನು ಕೆಲವು ತಿಂಗಳುಗಳವರೆಗೆ ಅಮಾನತುಗೊಳಿಸಬಹುದು.


5. ಪ್ರೆಶರ್ ಹಾರ್ನ್ ಬಳಕೆಯನ್ನು ದೇಶಾದ್ಯಂತ ನಿಷೇಧಿಸಲಾಗಿದೆ. ಇದು ಮಾತ್ರವಲ್ಲದೆ, ನಿಮ್ಮ ವಾಹನದಲ್ಲಿ ಪ್ರೆಶರ್ ಹಾರ್ನ್ ಸ್ಥಾಪಿಸುವುದು ಕೂಡ ಕಾನೂನುಬಾಹಿರವಾಗುತ್ತದೆ, ಏಕೆಂದರೆ ಇದು ಒಂದು ರೀತಿಯ ಮಾರ್ಪಾಡು ಮತ್ತು ಯಾವುದೇ ವಾಹನವನ್ನು ತನ್ನದೇ ಆದ ರೀತಿಯಲ್ಲಿ ಮಾರ್ಪಡಿಸಲು ಅನುಮತಿಸುವುದಿಲ್ಲ. ನೀವು ಹೀಗೆ ಮಾಡಿದ್ದರೆ ಪರವಾನಗಿ ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ, ಭಾರಿ ದಂಡವನ್ನೂ ವಿಧಿಸಬಹುದು.


6. ಆಂಬ್ಯುಲೆನ್ಸ್ ಅಥವಾ ತುರ್ತು ಸೇವೆಯೊಂದಿಗೆ ವಾಹನವನ್ನು ಚಲಿಸಲು ಸರ್ಕಾರ ಆದ್ಯತೆ ನೀಡಿದೆ. ಇದರಿಂದ ಅಗತ್ಯವಿರುವವರನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಬಹುದು. ಆದರೆ ಕೆಲವರು ಗುಂಪಿನಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವುದಿಲ್ಲ. ಇದು ನಿಮ್ಮ ಚಲನ್ ಕತ್ತರಿಸಲು ಕಾರಣವಾಗಬಹುದು ಅಥವಾ ಪರವಾನಗಿ ಮುಟ್ಟುಗೋಲು ಹಾಕಿಕೊಳ್ಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.