Driving License New Rule - ಡ್ರೈವಿಂಗ್ ಲೈಸೆನ್ಸ್ ಮಾಡುವ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ, ಇನ್ಮುಂದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ನಿಮ್ಮ ಆಧಾರ್ ಕಾರ್ಡ್ ಹೊಂದಿರುವ ಜಿಲ್ಲೆಯಲ್ಲಿ ಮಾಡಲಾಗುವುದು. ಪರವಾನಗಿಗಾಗಿ, ಅರ್ಜಿದಾರರು ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ನೀಡಬೇಕು ಮತ್ತು ಮತ್ತು ಅದನ್ನು ನೀವು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬೇಕು. ಈ ಹೊಸ ನಿಯಮ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸಲಿದೆ. ಲರ್ನಿಂಗ್ ಲೈಸನ್ಸ್ ಯಾವ ಜಿಲ್ಲೆಯಲ್ಲಿ ತಯಾರಾಗಲಿದೆಯೋ, ಅದೇ ಜಿಲ್ಲೆಯಲ್ಲಿ ಪರ್ಮನೆಂಟ್ ಲೈಸನ್ಸ್ ಅನ್ನು ಕೂಡ ತಯಾರಿಸಬೇಕಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-SBI ಗ್ರಾಹಕರಿಗಾಗಿ ಜಾರಿ ಮಾಡಿದೆ ನೂತನ ಸೇವೆ, ಶನಿವಾರ ಮತ್ತು ಭಾನುವಾರವೂ ಲಭ್ಯವಿರಲಿದೆ ಸೌಲಭ್ಯ


ಈಗ ಲರ್ನಿಂಗ್ ಲೈಸನ್ಸ್ ಎಲ್ಲಿಂದಲಾದರೂ ಮಾಡಬಹುದು, ಆದರೆ ಶಾಶ್ವತ ಡಿಎಲ್‌ಗಾಗಿ, ಅರ್ಜಿದಾರರು ತಮ್ಮ ಆಧಾರ್‌ನಲ್ಲಿ ನೋಂದಾಯಿಸಲಾದ ಜಿಲ್ಲೆಗೆ ಹೋಗಬೇಕಾಗುತ್ತದೆ. ಆದರೆ, ಜೂನ್ 1 ರ ಮೊದಲು ಮಾಡಿದ ಲರ್ನಿಂಗ್ ಡಿಎಲ್ ಪಡೆದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಹೊಸ ವ್ಯವಸ್ಥೆಯಲ್ಲಿ ಕಲಿಕಾ ಪರವಾನಿಗೆಯನ್ನು ಎಲ್ಲಿಂದ ಬೇಕಾದರೂ ನೀಡಬಹುದು, ಆದರೆ ಶಾಶ್ವತ ಪರವಾನಗಿಗಾಗಿ ಆಧಾರ್ ವಿಳಾಸದ  ಜಿಲ್ಲೆಯ ಆರ್‌ಟಿಒ ಕಚೇರಿಗೆ ಭೇಟಿ ನೀಡಬೇಕು.


ಇದನ್ನೂ ಓದಿ-Best Saving Tips: ಈ ಖಾತೆಯಲ್ಲಿ ಹಣ ಹೂಡಿದರೆ ಪ್ರತಿ ತಿಂಗಳು ಸಿಗಲಿದೆ 50 ಸಾವಿರ ರೂಪಾಯಿ


ಜೂನ್ 1 ರಿಂದ ಈ ವ್ಯವಸ್ಥೆ ಜಾರಿಗೆ ಬಂದಿದೆ. ಜೂನ್ 1 ರಂದು ಕಲಿಕಾ ಪರವಾನಗಿ ಪಡೆದ ಜನರು ತಮ್ಮ ಆಧಾರ್ ವಿಳಾಸದ ಜಿಲ್ಲೆಯಲ್ಲಿ ಒಂದು ತಿಂಗಳ ನಂತರ ಖಾಯಂ ಲೈಸನ್ಸ್ ಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ, ನೀವು ಸರ್ಕಾರಿ ಉದ್ಯೋಗದಲ್ಲಿದ್ದರೂ ಸಹ, ಗೋರಖ್‌ಪುರದಿಂದ ಮಾಡಿದ ಆಧಾರ್ ಮೂಲಕ ಲಕ್ನೋದಲ್ಲಿ ಮಾಡಿದ ಡಿಎಲ್ ಅನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.