Gold Silver Price Today : ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. MCX ನಲ್ಲಿ ಬಿಡುಗಡೆಯಾದ ದರಗಳ ಪ್ರಕಾರ ಇದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.  ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 61000 ಗಡಿಯನ್ನು ದಾಟಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿತ್ತು.  ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅಗ್ಗವಾಗುತ್ತಿವೆ. 


COMMERCIAL BREAK
SCROLL TO CONTINUE READING

ಅಗ್ಗವಾದ ಚಿನ್ನದ ಬೆಲೆ :  
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 60,100 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. ಅಂದರೆ ಶೇಕಡಾ 0.68 ರಷ್ಟು ಬೆಲೆ ಇಳಿಕೆಯಾಗಿದೆ. ಈ ಪ್ರಕಾರ ಲೆಕ್ಕ ಹಾಕುವುದಾದರೆ ಚಿನ್ನದ ಬೆಲೆಯಲ್ಲಿ ಸುಮಾರು 460 ರೂಪಾಯಿಗಳಷ್ಟು ಇಳಿಮುಖ ದಾಖಲಾಗಿದೆ.  


ಇದನ್ನೂ ಓದಿ : Arecanut today price: ರಾಜ್ಯದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
 
ಬೆಳ್ಳಿ ಅಗ್ಗ : 
ಇನ್ನು ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದೆ.  ಬೆಳ್ಳಿಯ ಬೆಲೆಯು ಶೇಕಡಾ 0.35 ರಷ್ಟು ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 74310 ರೂ. ಯಷ್ಟಾಗಿದೆ. 


ಚಿನ್ನದ ಬೆಲೆಯನ್ನು ಪರಿಶೀಲಿಸುವುದು ಹೇಗೆ?
ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಮಿಸ್ ಕಾಲ್ ಕೊಟ್ಟ ತಕ್ಷಣ ನೀವು ಯಾವ ಸಂಖ್ಯೆಯಿಂದ ಮಿಸ್ ಕಾಲ್ ಕೊಟ್ತಿರುತ್ತಿರೋ ಅದೇ ಸಂಖ್ಯೆಗೆ ಸಂದೇಶ  ಬರುತ್ತದೆ.


ಇದನ್ನೂ ಓದಿ : LPG Subsidy: ಗೃಹಿಣಿಯರಿಗಾಗಿ ಈ ಯೋಜನೆ ! ಕೇವಲ 500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ !


ಚಿನ್ನ ಖರೀದಿಸುವ ಮುನ್ನ ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ :
ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ನೀವು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.