ಹಬ್ಬದ ನಂತರವೂ ಇಳಿಯುತ್ತಲೇ ಇದೆ ಚಿನ್ನದ ಬೆಲೆ ! ಇಂದಿನ ಬೆಲೆಯನ್ನು ಇಲ್ಲಿ ಚೆಕ್ ಮಾಡಿ
Gold-Silver Price:ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರುತ್ತಿದೆ. ದೀಪಾವಳಿ ನಂತರವೂ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ.
Gold-Silver Price : ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರುತ್ತಿದೆ. ದೀಪಾವಳಿ ನಂತರವೂ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. 22 ಗ್ರಾಂ ಚಿನ್ನದ ಬೆಲೆ ಸುಮಾರು 55,450 ರೂ. ಆಗಿದ್ದರೆ, ಇದಲ್ಲದೇ ಬೆಳ್ಳಿಯ ಬೆಲೆ ಕೂಡ ಪ್ರತಿ ಕೆಜಿಗೆ 69500 ರೂ. ಆಗಿದೆ.
ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರುತ್ತಿದೆ. ಧನತ್ರಯೋದಶಿಯಂದು ಜನರು ವ್ಯಾಪಕವಾಗಿ ಚಿನ್ನವನ್ನು ಖರೀದಿಸಿದ್ದಾರೆ. ಧನತ್ರಯೋದಶಿ ಸಂದರ್ಭದಲ್ಲಿ ದೇಶಾದ್ಯಂತ ಸುಮಾರು 30 ಸಾವಿರ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತಿತರ ವಸ್ತುಗಳ ವಹಿವಾಟು ನಡೆದಿದೆ ಎನ್ನಲಾಗಿದೆ. ಇದಲ್ಲದೇ ಸುಮಾರು 27 ಸಾವಿರ ಕೋಟಿ ಮೌಲ್ಯದ ಚಿನ್ನದ ವಸ್ತುಗಳು ಮಾರಾಟವಾಗಿವೆ. ಇದೇ ವೇಳೆ 3 ಸಾವಿರ ಕೋಟಿ ರೂ. ಬೆಳ್ಳಿ ವಹಿವಾಟು ನಡೆದಿದೆ.
ಇದನ್ನೂ ಓದಿ : Aadhaar Card: ಆಧಾರ್ ಕಾರ್ಡ್ ಕಳೆದುಹೋಗಿದ್ಯಾ? ಚಿಂತೆಬಿಡಿ, ಈ ರೀತಿ ಮತ್ತೆ ಪಡೆಯಿರಿ
ಅಗ್ಗವಾದ ಚಿನ್ನ ಮತ್ತು ಬೆಳ್ಳಿ :
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಶೇಕಡಾ 0.09ರಷ್ಟು ಕುಸಿದು ಪ್ರತಿ 10 ಗ್ರಾಂಗೆ 59698 ರೂ.ಗೆ ತಲುಪಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.67ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 69561 ರೂ. ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ :
ದೆಹಲಿ - 55,900 ರೂ.
ಬೆಂಗಳೂರು - 55,450 ರೂ.
ಮುಂಬೈ - 55,450 ರೂ.
ಕೋಲ್ಕತ್ತಾ - 55,450 ರೂ.
ಕೇರಳ - 55,450 ರೂ.
ಹೈದರಾಬಾದ್ - 55,450 ರೂ.
ಚೆನ್ನೈ - 55,900 ರೂ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ದರ ಇಳಿಕೆ :
ಅಂತರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ ಇಲ್ಲಿಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಕಾಮೆಕ್ಸ್‌ನಲ್ಲಿ ಚಿನ್ನದ ಬೆಲೆ 0.80 ಡಾಲರ್ ಅಥವಾ ಶೇಕಡಾ 0.04 ರಷ್ಟು ಕಡಿಮೆಯಾಗಿದ್ದು, ಪ್ರತಿ ಔನ್ಸ್ 1951.30 ಡಾಲರ್ ಆಗಿದೆ. ಇನ್ನು ಬೆಳ್ಳಿಯ ಬೆಲೆಯು 0.231 ಡಾಲರ್ ಅಥವಾ 1.04 ಶೇಕಡಾ ಇಳಿಕೆಯಾಗಿದ್ದು 22.05 ಡಾಲರ್ ಗೆ ತಲುಪಿದೆ.
ಇದನ್ನೂ ಓದಿ : ಸಾರ್ವಜನಿಕ ಭವಿಷ್ಯ ನಿಧಿಯ 5 ಸಂಗತಿಗಳ ಬಗ್ಗೆ ಗೊತ್ತಿದೆಯೇ? ಹಾಗಾದ್ರೇ ನೀವು ನಂಬಿಕೆದ PPF ನಲ್ಲಿ ಹೂಡಿಕೆ ಮಾಡಬಹುದು!
ಚಿನ್ನದ ಶುದ್ಧತೆಯನ್ನು ಗುರುತಿಸಿ :
ಜಾಗತಿಕ ಚಿನ್ನದ ಬೆಲೆ ಮತ್ತು ಡಾಲರ್ ಮೌಲ್ಯದಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ನೀವು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಮೂಲಕ ಚಿನ್ನದ ಶುದ್ಧತೆಯನ್ನು ಗುರುತಿಸಬಹುದು. ಚಿನ್ನದ ಶುದ್ಧತೆಯನ್ನು ಗುರುತಿಸಲು ಹಾಲ್‌ಮಾರ್ಕ್‌ಗಳನ್ನು ನೀಡಲಾಗುತ್ತದೆ.
ಚಿನ್ನದ ಕ್ಯಾರೆಟ್ ಗುರುತಿಸುವುದು ಹೇಗೆ? :
24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾರುತ್ತದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ.
10 ಗ್ರಾಂ ಬೆಲೆಯನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ಈ ನಂಬರ್ ಗೆ ಮಿಸ್ಕಾಲ್ ಕೊಡುತ್ತಿದ್ದಂತೆಯೇ ಇಂದಿನ ಬೆಲೆ ಎಷ್ಟಿದೆ ಎನ್ನುವ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ.
ಇದನ್ನೂ ಓದಿ : ದೇಶಾದ್ಯಂತದ ಅನ್ನದಾತರಿಗೆ ಕೃಷಿ ಸಚಿವರ ಉಡುಗೊರೆ, ಈ ದಿನ ಖಾತೆಗೆ ಬರಲಿದೆ ಪಿಎಂ ಕಿಸಾನ್ 15ನೇ ಕಂತು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ