Big News: ಇನ್ಮುಂದೆ ಬೇರೆ ರಾಜ್ಯಗಳಲ್ಲಿಯೂ ಸುಲಭವಾಗಿ ಬೆಳೆ ಮಾರಾಟ ಮಾಡಿ, ರೈತರಿಗೆ ದೊಡ್ಡ ಸೌಕರ್ಯ ಕಲ್ಪಿಸಿದ ಕೇಂದ್ರ ಸರ್ಕಾರ
e-NAM POP: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಇ-ನಾಮ್ ಅಡಿಯಲ್ಲಿ ಪ್ಲಾಟ್ಫಾರ್ಮ್ ಆಫ್ ಪ್ಲಾಟ್ ಫಾರ್ಮ್ಸ್ ಆರಂಭಿಸಿದ್ದಾರೆ.ಈ ಪಿಒಪಿನಿಂದ ರೈತರಿಗೆ ರಾಜ್ಯದ ಗಡಿಯ ಹೊರಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ.
e-NAM POP: ದೇಶಾದ್ಯಂತ ಇರುವ ಅನ್ನದಾತರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ರೈತರು ತಮ್ಮ ರಾಜ್ಯದ ಹೊರಗೆ ಅಂದರೆ ಬೇರೆ ರಾಜ್ಯಗಳಲ್ಲಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರವು ಉತ್ತಮ ಸೌಕರ್ಯವೊಂದನ್ನು ಕಲ್ಪಿಸಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಇ-ನಾಮ್ ಅಡಿಯಲ್ಲಿ ಪ್ಲಾಟ್ ಫಾರ್ಮ್ ಆಫ್ ಪ್ಲಾಟ್ಫಾರ್ಮ್ಸ್ ಆರಂಭಿಸಿದ್ದಾರೆ. ಈ ಪಿಓಪಿ ಪ್ರಾರಂಭದಿಂದ ರೈತರು ರಾಜ್ಯದ ಗಡಿಯ ಹೊರಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ. ಇದರಿಂದ ಅನೇಕ ಮಾರುಕಟ್ಟೆಗಳಿಗೆ, ಖರೀದಿದಾರರಿಗೆ, ಸೇವಾ ಪೂರೈಕೆದಾರರಿಗೆ ಡಿಜಿಟಲ್ ಪ್ರವೇಶವನ್ನು ಹೆಚ್ಚಿಸಿ ಅವರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಲಿದೆ. ಇದರಿಂದ ವ್ಯಾಪಾರ ವಹಿವಾಟುಗಳಲ್ಲಿ ಪಾರದರ್ಶಕತೆ ಕೂಡ ಬರಲಿದೆ.
ಇ-ನಾಮ್ ಪಿಓಪಿಯಲ್ಲಿ ಒಟ್ಟು 41 ಸೇವಾ ಪೂರೈಕೆದಾರರು ಶಾಮೀಲಾಗಿದ್ದಾರೆ
ವ್ಯಾಪಾರ, ಗುಣಮಟ್ಟ ಪರಿಶೀಲನೆ, ಉಗ್ರಾಣ, ಫಿನ್‌ಟೆಕ್, ಮಾರುಕಟ್ಟೆ ಮಾಹಿತಿ, ಸಾರಿಗೆ ಮುಂತಾದ ವಿವಿಧ ಮೌಲ್ಯ ಸರಪಳಿ ಸೇವೆಗಳನ್ನು ಒದಗಿಸುವ ವಿವಿಧ ವೇದಿಕೆಗಳಿಂದ ಸುಮಾರು 41 ಸೇವಾ ಪೂರೈಕೆದಾರರನ್ನು POP ನಲ್ಲಿ ಶಾಮೀಲುಗೊಳಿಸಲಾಗಿದೆ. POP ನಿಂದ ಒಂದು ಡಿಜಿಟಲ್ ಎಕೋಸಿಸ್ಟಂ ನಿರ್ಮಾಣಗೊಳ್ಳಲಿದ್ದು, ಅಗ್ರಿಕಲ್ಚರ್ ವ್ಯಾಲ್ಯೂ ಚೈನ್ ನ ವಿವಿಧ ವಿಭಾಗಗಳಲ್ಲಿ ವಿವಿಧ ವೇದಿಕೆಗಳ ಪರಿಣಿತಿಯ ಲಾಭ ಅದರಿಂದ ಸಿಗಲಿದೆ.
ಇ-ನಾಮ್ ಮೊಬೈಲ್ ಆಪ್
ನೀವು ಇ-ನಾಮ್ ಮೊಬೈಲ್ ಆಪ್ ಮೂಲಕವೂ ಕೂಡ ಪಿಓಪಿವರೆಗೆ ತಲುಪಬಹುದಾಗಿದೆ. ಈ ಆಪ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದಾಗಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳ ಒಂದೇ ವೇದಿಕೆಯ ರೂಪದಲ್ಲಿ e-NAM POP ಸಂಯೋಜಿತ ಸೇವಾ ಪೂರೈಕೆದಾರರು, ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರು, ಗುಣಮಟ್ಟದ ಭರವಸೆ ಸೇವಾ ಪೂರೈಕೆದಾರರು, ಶುಚಿಗೊಳಿಸುವಿಕೆ, ಶ್ರೇಣೀಕರಣ, ವಿಂಗಡಣೆ ಮತ್ತು ಪ್ಯಾಕೇಜಿಂಗ್ ಸೇವಾ ಪೂರೈಕೆದಾರರು, ಉಗ್ರಾಣ ಸೌಲಭ್ಯಗಳ ಸೇವಾ ಪೂರೈಕೆದಾರರು, ಕೃಷಿ ಇನ್‌ಪುಟ್ ಸೇವೆ ಸೇರಿದಂತೆ ಸೇವಾ ಪೂರೈಕೆದಾರರ ವೇದಿಕೆಗಳನ್ನು ಅದು ಸಂಯೋಜಿಸಲಿದೆ. ಇದರಲ್ಲಿ ಪೂರೈಕೆದಾರರು, ತಂತ್ರಜ್ಞಾನ ಸಕ್ರಿಯಗೊಳಿಸಿದ ಹಣಕಾಸು ಮತ್ತು ವಿಮಾ ಸೇವೆ ಒದಗಿಸುವವರು, ಮಾಹಿತಿ ಪ್ರಸರಣ ಪೋರ್ಟಲ್‌ಗಳು (ಸಲಹೆ ಸೇವೆಗಳು, ಬೆಳೆ ಅಂದಾಜುಗಳು, ಹವಾಮಾನ ನವೀಕರಣಗಳು, ರೈತರಿಗೆ ಸಾಮರ್ಥ್ಯ ವೃದ್ಧಿ ಇತ್ಯಾದಿ), ಇತರ ವೇದಿಕೆಗಳು (ಇ-ಕಾಮರ್ಸ್, ಅಂತರರಾಷ್ಟ್ರೀಯ ಕೃಷಿ-ವ್ಯಾಪಾರ ವೇದಿಕೆಗಳು, ವಿನಿಮಯ, ಖಾಸಗಿ ಮಾರುಕಟ್ಟೆ ವೇದಿಕೆ ಇತ್ಯಾದಿ) ಕೂಡ ಶಾಮೀಲಾಗಿವೆ.
ಇದನ್ನೂ ಓದಿ-Gold Price Today : ಇಂದು ಕೂಡಾ ಇಳಿಕೆಯಾಗಿದೆ ಚಿನ್ನದ ಬೆಲೆ, ಆರು ಸಾವಿರದಷ್ಟು ಅಗ್ಗವಾಯಿತು ಬೆಳ್ಳಿ
3.5 ಲಕ್ಷ ರೈತರಿಗೆ ಇದರಿಂದ ಲಾಭ ಸಿಗಲಿದೆ
ಈ ಸಂದರ್ಭದಲ್ಲಿ ತೋಮರ್ ಅವರು 10,000 ಎಫ್‌ಪಿಒಗಳ ರಚನೆಗಾಗಿ ಸಿಎಸ್‌ಎಸ್ ಅಡಿಯಲ್ಲಿ 1018 ಎಫ್‌ಪಿಒಗಳಿಗೆ ರೂ 37 ಕೋಟಿಗಿಂತ ಹೆಚ್ಚಿನ ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಿದ್ದರೆ, ಇದು ದೇಶದ ಸುಮಾರು 3.5 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡಲಿದೆ. ಕೇಂದ್ರ ಸರ್ಕಾರದಿಂದ ಸಿಗುವ ಈ ರೀತಿಯ ಸಮಾನ ಇಕ್ವಿಟಿ ಅನುದಾನದಿಂದ ಪೂರಕವಾಗಿರುವ ನಿರ್ಮಾಪಕ ಸದಸ್ಯರ ಇಕ್ವಿಟಿಯು FPO ಗಳ ಹಣಕಾಸಿನ ಮೂಲವನ್ನು ಬಳಪ್ದಿಸಲಿದೆ ಮತ್ತು ಅವರ ಯೋಜನೆಗಳಿಗೆ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಪಡೆಯಲು ಮತ್ತು ವ್ಯಾಪಾರ ಅಭಿವೃದ್ಧಿಗಾಗಿ ಕಾರ್ಯನಿರತ ಬಂಡವಾಳದ ಅಗತ್ಯತೆಗಳಿಗೆ ಸಹಾಯ ಮಾಡಲಿದೆ.
ಇದನ್ನೂ ಓದಿ-DGCA Latest Rule: ಇನ್ನು ವೈದ್ಯರ ಸರ್ಟಿಫಿಕೆಟ್ ಇದ್ದರೆ ಇವರು ವಿಮಾನ ಹತ್ತಬಹುದು
ಯೋಜನೆಯಡಿಯಲ್ಲಿ, ಎಫ್‌ಪಿಒಗಳಿಗೆ 3 ವರ್ಷಗಳ ಅವಧಿಗೆ ಪ್ರತಿ ಎಫ್‌ಪಿಒಗೆ ರೂ 18 ಲಕ್ಷದವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಅರ್ಹ ಸಾಲ ನೀಡುವ ಸಂಸ್ಥೆಯಿಂದ ಪ್ರತಿ ಎಫ್‌ಪಿಒಗೆ ರೂ.15 ಲಕ್ಷ ಮತ್ತು ಪ್ರತಿ ಎಫ್‌ಪಿಒಗೆ ರೂ.2 ಕೋಟಿಗಳ ಮಿತಿಯೊಂದಿಗೆ ಎಫ್‌ಪಿಒದ ಪ್ರತಿ ರೈತ ಸದಸ್ಯರಿಗೆ ರೂ.2,000 ವರೆಗಿನ ಸಮಾನ ಅನುದಾನವನ್ನು ಒದಗಿಸಲಾಗುವುದು. ಯೋಜನೆಯ ಸಾಲದವರೆಗೆ ಕ್ರೆಡಿಟ್ ಗ್ಯಾರಂಟಿ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ