E- Vehicle: ಈಗ ಇ-ಕಾರ್ಗೆ ಕಚೇರಿ, ಮಾಲ್ನಲ್ಲೂ ಚಾರ್ಜಿಂಗ್ ಕೇಂದ್ರ
ಪೆಟ್ರೋಲ್ ಮತ್ತು ಡೀಸೆಲ್ನ ದಾಖಲೆಯ ಬೆಲೆ ಏರಿಕೆ (Petrol Diesel Price Hike) ಪ್ರತಿಯೊಬ್ಬರೂ ಪರ್ಯಾಯಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಇ-ವೆಹಿಕಲ್ (e- Vehicle) ಪಡೆಯಲು ಸರ್ಕಾರ ಬಹಳ ಹಿಂದಿನಿಂದಲೂ ಜನರಿಗೆ ಮನವಿ ಮಾಡುತ್ತಿದೆ. ಈ ಮಧ್ಯೆ ಇ-ವೆಹಿಕಲ್ ಚಾರ್ಜ್ ಮಾಡುವುದರಲ್ಲಿ ಯಾವುದೇ ತೊಂದರೆಯಾಗದಂತೆ ದೆಹಲಿಯಲ್ಲಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಎಂದು ಕೇಜ್ರಿವಾಲ್ ಸರ್ಕಾರ ನಿರ್ಧರಿಸಿದೆ.
ನವದೆಹಲಿ: ಚಾರ್ಜಿಂಗ್ ಸ್ಟೇಷನ್ ಗಿಂತ ಪೆಟ್ರೋಲ್ ಪಂಪ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಜನರು ಇ-ವೆಹಿಕಲ್ ಖರೀದಿಸಲು ಹಿಂಜರಿಯುತ್ತಾರೆ. ಇದೇ ಸಮಸ್ಯೆಯನ್ನು ಅರ್ಥಮಾಡಿಕೊಂಡಿರುವ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ಈಗ ಜನರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 400 ಕ್ಕೂ ಹೆಚ್ಚು ಹೊಸ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ದೆಹಲಿ ಸಾರಿಗೆ ಸಚಿವರ ಮನವಿ :
ಕೇಜ್ರಿವಾಲ್ ಸರ್ಕಾರದಲ್ಲಿ ಸಾರಿಗೆ ಸಚಿವಾಲಯವನ್ನು ನಿರ್ವಹಿಸುತ್ತಿರುವ ಕೈಲಾಶ್ ಗೆಹ್ಲೋಟ್ (Kailash Gahlot), ಇ-ವಾಹನಗಳಿಗೆ (e- Vehicle) ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಈಗ ಚಾರ್ಜಿಂಗ್ ಸ್ಟೇಷನ್ ಹೆಚ್ಚಿಸುವತ್ತ ಸರ್ಕಾರದ ಗಮನ ಹರಿಸಲಾಗಿದೆ ಎಂದು ಹೇಳಿದ್ದಾರೆ. ಮಾಲ್ (Mall), ಹೋಟೆಲ್ (Hotel), ಮಾರುಕಟ್ಟೆ ಸಂಕೀರ್ಣ (Market Complex), ಕಾರ್ಪೊರೇಟ್ ಸಂಸ್ಥೆಗಳು ಮತ್ತು ಚಿತ್ರಮಂದಿರಗಳು ಸಹ ಈ ವಿಷಯದಲ್ಲಿ ಸಹಕರಿಸಬೇಕು ಪ್ರತಿಯೊಬ್ಬರೂ ತಮ್ಮ ಕೆಲಸದ ಆವರಣದಲ್ಲಿ (Work Premises) ಚಾರ್ಜಿಂಗ್ ಕೇಂದ್ರಗಳನ್ನು ಪ್ರಾರಂಭಿಸಬೇಕು. ಇದರಿಂದ ದೆಹಲಿಯಲ್ಲಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಮನವಿ ಮಾಡಿದ್ದಾರೆ.
500 ಚಾರ್ಜಿಂಗ್ ಕೇಂದ್ರಗಳ ಗುರಿ:
ದೆಹಲಿ ಸರ್ಕಾರದ (Delhi Government) ಪ್ರಕಾರ, ದೆಹಲಿಯಲ್ಲಿ ಪ್ರಸ್ತುತ 72 ಚಾರ್ಜಿಂಗ್ ಕೇಂದ್ರಗಳಿವೆ. ಸಂಖ್ಯೆಗಳ ಅನ್ವಯ ಇತರ ರಾಜ್ಯಗಳಿಗಿಂತ ಇದು ಇಡೀ ದೇಶದಲ್ಲೇ ಅತಿ ಹೆಚ್ಚು. ಆದರೆ ಇನ್ನೂ ಸಹ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ 6 ತಿಂಗಳಲ್ಲಿ ಈ ಅಂಕಿ 500 ತಲುಪಲಿದೆ ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಭರವಸೆ ನೀಡಿದ್ದಾರೆ. ದೆಹಲಿಯಲ್ಲಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಸುಮಾರು 500 ಕ್ಕೆ ತಲುಪಿದಾಗ, ಇ-ವಾಹನಗಳನ್ನು ಚಾರ್ಜ್ ಮಾಡುವ ದೊಡ್ಡ ಸಮಸ್ಯೆ ಕೊನೆಗೊಳ್ಳುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ - ದೇಶದ ಹೆದ್ದಾರಿಗಳಲ್ಲಿ ಚಲಿಸಲಿವೆ Electric ವಾಹನಗಳು
ಇ-ವಾಹನ ಪ್ರಯಾಣ ಬಹಳ ಅಗ್ಗವಾಗಿದೆ :
ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ಇತ್ತೀಚೆಗೆ ಇ-ಬೈಕ್ (e-Bike) ಅನ್ನು ಬಿಡುಗಡೆ ಮಾಡಿದೆ. ಆಟಮ್ 1.0 ದಿಂದ 100 ಕಿ.ಮೀ ಪ್ರಯಾಣವನ್ನು ಕೇವಲ 7-8 ರೂಪಾಯಿಗಳಿಗೆ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರರ್ಥ ಬ್ಯಾಟರಿಯನ್ನು ಚಾರ್ಜ್ ಮಾಡಲು 1-2 ಯುನಿಟ್ ಅಥವಾ ಹೆಚ್ಚಿನ ವಿದ್ಯುತ್ ಮಾತ್ರ ಬಳಸಲಾಗುತ್ತದೆ. ಈ ಬೈಕ್‌ನ ಪೂರ್ಣ ಬ್ಯಾಟರಿಯನ್ನು 4 ಗಂಟೆಗಳಲ್ಲಿ ಚಾರ್ಜ್ ಮಾಡಲಾಗುತ್ತದೆ. ಆಟಮ್ 1.0 ಬೆಲೆಯನ್ನು 50 ಸಾವಿರ ರೂಪಾಯಿಯಲ್ಲಿ ಇರಿಸಲಾಗಿದೆ ಮತ್ತು ಇದನ್ನು ಕಂಪನಿಯ ಅಧಿಕೃತ ಪೋರ್ಟಲ್ atumobile.co ನಲ್ಲಿ ಕಾಯ್ದಿರಿಸಬಹುದಾಗಿದೆ.
ಇದನ್ನೂ ಓದಿ - Lithium ಗಾಗಿ ಇನ್ಮುಂದೆ ಭಾರತ ಚೀನಾ ಮೇಲೆ ಅವಲಂಭಿಸಬೇಕಾಗಿಲ್ಲ... ಕಾರಣ ಇಲ್ಲಿದೆ
ಇ ಕಾರು MG ZS 2021 :
ಇ-ವಾಹನಗಳ ಹೆಚ್ಚುತ್ತಿರುವ ವ್ಯಾಮೋಹವನ್ನು ಗಮನದಲ್ಲಿಟ್ಟುಕೊಂಡು ಎಂಜಿ ಮೋಟಾರ್ಸ್ ಇತ್ತೀಚೆಗೆ MG ZS 2021 ಅನ್ನು ಬಿಡುಗಡೆ ಮಾಡಿದೆ. ಬೆಲೆಯ ಬಗ್ಗೆ ಮಾತನಾಡುವುದಾದರೆ ಕಂಪನಿಯು ಹೊಸ ZS ಇವಿ 2021 ಅನ್ನು ಆರಂಭಿಕ ಬೆಲೆಗೆ 20.99 ಲಕ್ಷ ರೂಪಾಯಿಗಳಿಗೆ (ಎಕ್ಸ್ ಶೋರೂಮ್, ದೆಹಲಿ) ಬಿಡುಗಡೆ ಮಾಡಿದೆ. ಇದು ಒಮ್ಮೆ ಪೂರ್ಣ ಚಾರ್ಜ್ ಆದ ಬಳಿಕ 419 ಕಿ.ಮೀ.ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ವಾಹನವನ್ನು ಲಾಂಚ್ ಮಾಡುವ ಮೊದಲು, ಎಂಜಿ ಮೋಟಾರ್ಸ್ ಪಾಲುದಾರರೊಂದಿಗೆ ದೇಶಾದ್ಯಂತ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಸುಧಾರಿಸಿದೆ. ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಯುಗದಲ್ಲಿ ಕಾರಿನಲ್ಲಿ ಪ್ರಯಾಣಿಸುವವರಿಗೆ ಎಂಜಿ ಜಡ್ಎಸ್ 2021 (MG ZS 2021) ಉತ್ತಮ ಮತ್ತು ಅಗ್ಗದ ಆಯ್ಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.