SIP Calculation: ಸುರಕ್ಷಿತ ಹೂಡಿಕೆಯ ಮೂಲಕ ನೀವೂ ಕೂಡ ಕೋಟ್ಯಾಧಿಪತಿಯಾಗುವ ಕನಸನ್ನು ಕಾಣುತ್ತಿದ್ದರೆ, ತಕ್ಷಣವೆ ಈ ಸುದ್ದಿಯನ್ನು ಓದಿ. ಮ್ಯೂಚುವಲ್ ಫಂಡ್‌ಗಳಲ್ಲಿ ಒಂದು ವಿಶೇಷ ನಿಯಮವನ್ನು ಅನುಸರಿಸುವ ಮೂಲಕ ಹೂಡಿಕೆ ಮಾಡಿದರೆ, ನೀವು ಸುಲಭವಾಗಿ 1 ಕೋಟಿ ರೂಪಾಯಿಗಳ ಮೊತ್ತವನ್ನು ಪಡೆಯಬಹುದು. ಹೌದು, ಇದಕ್ಕಾಗಿ ನಿಮಗೆ '15-15-15 ರೂಲ್', ಉಳಿತಾಯ ಮತ್ತು ಹೂಡಿಕೆ ನಿಯಮ ನಿಮಗೆ ಸಹಾಯ ಮಾಡಲಿದೆ. ಈ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ  ಬನ್ನಿ.

COMMERCIAL BREAK
SCROLL TO CONTINUE READING

ಏನಿದು 15-15-15 ನಿಯಮ?
ಈ ನಿಯಮದಲ್ಲಿ ಮೂರು ಬಾರಿ ಬರೆಯಲಾದ 15 15 15,  ಬೆಳವಣಿಗೆ ದರ, ಹೂಡಿಕೆಯ ಅವಧಿ ಮತ್ತು ಮಾಸಿಕ ಉಳಿತಾಯದ ಮೊತ್ತವನ್ನು ಸೂಚಿಸುತ್ತವೆ. ಇದರ ಪ್ರಕಾರ, ನೀವು ವಾರ್ಷಿಕವಾಗಿ 15% ಆದಾಯವನ್ನು ಬಯಸಿದರೆ, ನೀವು 15 ವರ್ಷಗಳವರೆಗೆ ಪ್ರತಿ ತಿಂಗಳು 15000 ರೂ.ಗಳ ಉಳಿತಾಯ ಮಾಡಬೇಕು. ಇದರಿಂದ ನೀವು ಸುಲಭವಾಗಿ ಕೋಟ್ಯಾಧಿಪತಿಯಾಗಬಹುದು.

15-15-15 ರ ಸೂತ್ರ
>> 15- ಬೆಳವಣಿಗೆ ದರ
>> 15- ಹೂಡಿಕೆಯ ಅವಧಿ
>> 15- ಮಾಸಿಕ ಉಳಿತಾಯದ ಮೊತ್ತ

ಈ ನಿಯಮದ ಪ್ರಕಾರ ನೀವು ಲೆಕ್ಕ ಹಾಕಿದರೆ, ಪ್ರತಿ ತಿಂಗಳು 15000 ರೂಪಾಯಿಗಳೊಂದಿಗೆ, ನೀವು 15 ವರ್ಷಗಳಲ್ಲಿ 27 ಲಕ್ಷ ರೂ.ಠೇವಣಿ ಮಾಡಲು ಸಾಧ್ಯವಾಗಲಿದೆ. ಈ ನಿಯಮಿತ ಠೇವಣಿ ಮೂಲಕ ನೀವು ರೂ 73 ಲಕ್ಷ ರೂ.ಗಳ ಲಾಭವನ್ನು ಪಡೆಯಬಹುದು. ಈ ರೀತಿಯಾಗಿ ಕೇವಲ 15 ವರ್ಷಗಳ ಹೂಡಿಕೆಯಿಂದ ಸಂಪೂರ್ಣ 1 ಕೋಟಿ ರೂ.ಮೊತ್ತ ನಿಮ್ಮ ಕೈಸೇರಲಿದೆ.


ಇದನ್ನೂ ಓದಿ-Petrol Diesel Price may 12th: ಇಂದು ನಿಮ್ಮ ನಗರದಲ್ಲಿ ಎಷ್ಟು ದುಬಾರಿಯಾಗಿದೆ ಪೆಟ್ರೋಲ್ ಡಿಸೇಲ್ ಬೆಲೆ ?

ಈ ರೀತಿ 1 ಕೋಟಿ ರೂ. ನಿಮ್ಮ ಕೈಸೇರುತ್ತದೆ
>> ಶೇ.15ರ ವಾರ್ಷಿಕ ಆದಾಯ ನಿಮಗೆ ಪ್ರಸ್ತುತ ಸ್ವಲ್ಪ ಕಠಿಣ ಎಂಬಂತೆ ತೋರುತ್ತಿದ್ದರೂ ಕೂಡ ನಿಮ್ಮ ದೀರ್ಘಾವಧಿ ಹೂಡಿಕೆ ಲಾಂಗ್ ಟರ್ಮ್ ನಲ್ಲಿ ನಿಮಗೆ ಸುಲಭವಾಗಿ ಶೇ.12ರಷ್ಟು ವೃದ್ಧಿಯನ್ನು ನೀಡುತ್ತದೆ.
>> ಶೇ.15 ರಷ್ಟು ಆದಾಯ ಪಡೆಯಲು SIP ಗಳಲ್ಲಿ ಹೂಡಿಕೆ ಮಾಡಿ.
>> ಹಂತ ಹಂತವಾಗಿ SIP ಮೂಲಕ ನಿಮ್ಮ ಹೂಡಿಕೆಯನ್ನು ಹೆಚ್ಚಿಸಿ
>> ಯಾವುದೇ ರೀತಿಯ ಹೆಚ್ಚುವರಿ ಹೊರೆಯಿಲ್ಲದೆ ನಿಮಗೆ 1 ಕೋಟಿ ಸಿಗಲಿದೆ.
>> SIP ಗಾಗಿ, ನಾವು ಹಣದುಬ್ಬರ ದರವನ್ನು ನೋಡುವುದು ಎಂದಿಗೂ ಕೂಡ ಉತ್ತಮ. ಏಕೆಂದರೆ, ಹಣದುಬ್ಬರವನ್ನು ಹೊಡೆದುಹಾಕಲು ನೀವು ನಿಮ್ಮ ಗುರಿಯನ್ನು ನಿರ್ಧರಿಸಿ. 
>> ನಂತರ ಅದಕ್ಕೆ ತಕ್ಕಂತೆ SIP ಯಲ್ಲಿನ ನಿಮ್ಮ ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗಿ..


ಇದನ್ನೂ ಓದಿ-Gold Price Today: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ , ಬಂಗಾರ ಖರೀದಿಗೆ ಇದುವೇ ಸರಿಯಾದ ಸಮಯ


SIP ಮೂಲಕ ದೊಡ್ಡ ಮೊತ್ತ ಪಡೆಯಬಹುದು
ಎಸ್ಐಪಿಯಲ್ಲಿನ ನಿಮ್ಮ ಹೂಡಿಕೆಯನ್ನು ಹೆಚ್ಚಿಸುವುದರ ಜೊತೆಗೆ ನೀವು ಅಧಿಕ ಚಕ್ರಬಡ್ಡಿಯನ್ನು ನೀಡುವ ಸಾಧನಗಳಲ್ಲಿನ ಹೂಡಿಕೆಗೆ ಹೆಚ್ಚಿನ ಒತ್ತು ನೀಡಿ. ಈ ಸಾಧಾರಣ ಸೂತ್ರವನ್ನು ಗಮನದಲ್ಲಿಟ್ಟುಕೊಂಡು ನೀವು ನಿಮ್ಮ ಹೂಡಿಕೆಯನ್ನು ಮಾಡಿದರೆ, ಹೆಚ್ಚಿನ ಮೊತ್ತ ನಿಮ್ಮ ಬಳಿ ಸಂಗ್ರಹವಾಗಲಿದೆ. ಇಲ್ಲಿ ಎಸ್ಐಪಿಯ ಅರ್ಥ ದೀರ್ಘಾವಧಿ ಹೂಡಿಕೆ ಯೋಜನೆಯಾಗಿದೆ. ಸಾಮಾನ್ಯವಾಗಿ 10, 20 ಹಾಗೂ 30 ವರ್ಷಗಳವರೆಗೆ ಇದರಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.