EPFO Passbook In Umang: ಕಳೆದ ಕೆಲವು ದಿನಗಳಿಂದ ಇಪಿಎಫ್ಒ ಪೋರ್ಟಲ್‌ನಲ್ಲಿ  ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಪಾಸ್‌ಬುಕ್‌ಗಳನ್ನು ಪರಿಶೀಲಿಸುವಲ್ಲಿ ಬಳಕೆದಾರದು ಅಡಚಣೆಯನ್ನು ಎದುರಿಸುತ್ತಿದ್ದಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು "ಸದಸ್ಯ ಪಾಸ್‌ಬುಕ್ ಸೇವೆಯನ್ನು ಉಮಾಂಗ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು". 


COMMERCIAL BREAK
SCROLL TO CONTINUE READING

ಏನಿದು ಇಪಿಎಫ್?
ಇಪಿಎಫ್ ಎಂದರೆ ಉದ್ಯೋಗಿಗಳ ಭವಿಷ್ಯ ನಿಧಿ. ಇದು  ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಿರ್ವಹಿಸುವ ಉದ್ಯೋಗಸ್ಥರಿಗೆ ನಿವೃತ್ತಿ ಪ್ರಯೋಜನಗಳನ್ನು ನೀಡುವ ಒಂದು ಯೋಜನೆಯಾಗಿದೆ. ಇದಕ್ಕಾಗಿ ಪ್ರತಿ ತಿಂಗಳು ಉದ್ಯೋಗಿಯ ಸಂಬಳದ ಒಂದು ನಿರ್ದಿಷ್ಟ ಭಾಗವನ್ನು ಕಡಿತಗೊಳಿಸಲಾಗುತ್ತದೆ. ಉದ್ಯೋಗಸ್ಥರು ಸಮಯಕ್ಕೆ ಸರಿಯಾಗಿ ಉದ್ಯೋಗದಾತರು ಈ ಖಾತೆಯಲ್ಲಿ ಕೊಡುಗೆ ನೀಡುತ್ತಿದ್ದಾರೆಯೇ ಎಂಬುದನ್ನು ಇಪಿಎಫ್ಒ ವೆಬ್‌ಸೈಟ್ ನಲ್ಲಿ ಇ-ಪಾಸ್‌ಬುಕ್ ನಲ್ಲಿ ವೀಕ್ಷಿಸಬಹುದಾಗಿದೆ. 


ಹಿಂದೆಲ್ಲಾ ಇಪಿಎಫ್ಒ ಖಾತೆಯನ್ನು ಪರಿಶೀಲಿಸಲು ಚಂದಾದಾರರು ಇಪಿಎಫ್‌ಒ ವೆಬ್‌ಸೈಟ್ ಅಥವಾ ಯುಎಎನ್ ಪೋರ್ಟಲ್‌ಗೆ ಭೇಟಿ ನೀಡಬೇಕಾಗಿತ್ತು. ಆದರೆ, ಈ ಡಿಜಿಟಲ್ ಯುಗದಲ್ಲಿ ಉಮಾಂಗ್ ಅಪ್ಲಿಕೇಷನ್ ಅನ್ನು ಬಳಸಿ ಇಪಿಎಫ್ ಪಾಸ್‌ಬುಕ್ ಅನ್ನು ಸುಲಭವಾಗಿ ವೀಕ್ಷಿಸಬಹುದು. 


ಇದನ್ನೂ ಓದಿ-  ಇನ್ನು ಎರಡೇ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಿಗುವುದು ಸಿಹಿ ಸುದ್ದಿ ! ವೇತನದಲ್ಲಿ ಆಗುವುದು ಏರಿಕೆ


ಏನಿದು ಉಮಾಂಗ್ ಅಪ್ಲಿಕೇಶನ್? 
UMANG- ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನೆನ್ಸ್  ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಆಗಿದೆ.  


UMANG ಒಂದೇ ಅಪ್ಲಿಕೇಶನ್‌ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ವಿವಿಧ ಸೇವೆಗಳನ್ನು ಒದಗಿಸುವ ಏಕೈಕ ಅಧಿಕೃತ ಅಪ್ಲಿಕೇಶನ್ ಆಗಿದೆ. ಉಮಾಂಗ್ ಅಪ್ಲಿಕೇಷನ್ ಮೂಲಕ ಇಪಿಎಫ್ಒ ಚಂದಾದಾರರು ಪಿ‌ಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅಗತ್ಯವಿದ್ದರೆ ಪಿ‌ಎಫ್ ಹಣವನ್ನು ವಿತ್ ಡ್ರಾ ಮಾಡಲು ಅರ್ಜಿಯನ್ನು ಸಹ ಸಲ್ಲಿಸಬಹುದು. ಇವುಗಳ ಜೊತೆಗೆ ಯುಎಎನ್ ಗೆ ಅರ್ಜಿ ಸಲ್ಲಿಸಲು, ನಿಮ್ಮ ಕ್ಲೈಮ್ ಸ್ಥಿತಿಯನ್ನು ಪರಿಶೀಲಿಸಲು, ಜೀವನ್ ಪ್ರಮಾಣ್ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಲು ಈ ಆಪ್ ತುಂಬಾ ಪ್ರಯೋಜನಕಾರಿ ಆಗಿದೆ. 


ಇದನ್ನೂ ಓದಿ- Gold Price Today: ಸತತ ಇಳಿಕೆಯ ಬಳಿಕ ಏರಿಕೆ ಕಂಡ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಹೇಗಿದೆ ತಿಳಿಯಿರಿ


UMANG ಅಪ್ಲಿಕೇಶನ್ ಬಳಸಿ ಇಪಿಎಫ್ಒ ಇ-ಪಾಸ್‌ಬುಕ್ ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
* ಮೊದಲಿಗೆ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ UMANG ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
*  UMANG ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
* ಸರ್ಚ್ ಬಾಕ್ಸ್ ನಲ್ಲಿ 'EPFO' ಎಂದು ಟೈಪ್ ಮಾಡಿ ಸರ್ಚ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಸರ್ವಿಸ್ ಬಾಕ್ಸ್ ನಲ್ಲಿ 'ಪಾಸ್‌ಬುಕ್ ವೀಕ್ಷಿಸಿ' ಎಂಬ ಆಯ್ಕೆಯನ್ನು ಆರಿಸಿ. 
* ನಿಗದಿತ ಜಾಗದಲ್ಲಿ ನಿಮ್ಮ UAN ಸಂಖ್ಯೆ, OTP ನಮೂದಿಸಿ ಮತ್ತು ವಿನಂತಿಯನ್ನು ಸಲ್ಲಿಸಿ.
* 'ಸದಸ್ಯರ ಐಡಿ' ಆಯ್ಕೆಮಾಡಿ ಮತ್ತು ಇ-ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಿ.
ಇ-ಪಾಸ್‌ಬುಕ್ ಅನ್ನು ತೆರೆದಾಗ ನಿಮ್ಮ ಇಪಿಎಫ್ ಖಾತೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.