Edible oil Price: ಖಾದ್ಯ ತೈಲದ ಬೆಲೆಯಲ್ಲಿ ಭಾರಿ ಇಳಿಕೆ..!
Edible oil Price: ಖಾದ್ಯ ತೈಲದ ತೈಲ ಬೆಲೆ ಪ್ರತಿ ಟಿನ್‌ಗೆ (15 ಕೆಜಿ) 40 ರೂಪಾಯಿ ಇಳಿಕೆಯಾಗಿದೆ.
Edible oil Price: ಅಬಕಾರಿ ಸುಂಕ ಇಳಿಕೆಯಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ 9.5 ರೂ. ಇಳಿಕೆಯಾಗಿದ್ದು, ಖಾದ್ಯ ತೈಲ ಬೆಲೆಯೂ ಕುಸಿದಿದೆ. ಇಂಡೋನೇಷ್ಯಾದ ರಫ್ತು ಪ್ರಾರಂಭವಾದಾಗಿನಿಂದ, ಬೆಲೆ ಇಳಿಕೆ ಕಂಡಿದೆ.
ಇದನ್ನೂ ಓದಿ: E Cycles Subsidy: ನಿಮ್ಮ ಬಳಿಯೂ ಆಧಾರ್ ಕಾರ್ಡ್ ಇದೆಯೇ? ಸರ್ಕಾರದಿಂದ ಸಿಗುತ್ತೆ 5500 ರೂ.ಗಳ ಪ್ರಯೋಜನ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಏರಿಕೆಯ ಹೊರತಾಗಿಯೂ ಇಂಡೋನೇಷ್ಯಾದಿಂದ ರಫ್ತುಗಳ ಉದಾರೀಕರಣವು ದೇಶದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಹೆಚ್ಚಿನ ತೈಲದ ಬೆಲೆಗಳು ಕಳೆದ ವಾರಕ್ಕಿಂತ ಕುಸಿತ ಕಂಡಿವೆ. ಇದರಿಂದ ಸಾಸಿವೆ ಎಣ್ಣೆ ಬೆಲೆ 40 ರೂಪಾಯಿ ಇಳಿಕೆಯಾಗಿದ್ದು, ಖಾದ್ಯ ತೈಲ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ಸಾಸಿವೆ ಎಣ್ಣೆ ಬೆಲೆ ಕ್ವಿಂಟಲ್‌ಗೆ 100 ರೂ. ಇಳಿಕೆಯಾಗಿದ್ದು, ಕ್ವಿಂಟಲ್‌ಗೆ 7,515-7,565 ರೂ. ಆಗಿದೆ. ಇದರಿಂದ ದಾದ್ರಿ ಸಾಸಿವೆ ಎಣ್ಣೆ ಬೆಲೆ ಕ್ವಿಂಟಲ್‌ಗೆ 250 ರೂಪಾಯಿ ಇಳಿಕೆಯಾಗಿ 15,050 ರೂಪಾಯಿಗೆ ತಲುಪಿದೆ.
ಇದನ್ನೂ ಓದಿ: Vegetable Price: ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಎಷ್ಟಿದೆ ಗೊತ್ತಾ?
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಏರಿಕೆಯ ಹೊರತಾಗಿಯೂ, ಸೋಯಾಬೀನ್ ಏಣ್ಣೆಯ ಬೆಲೆಗಳು ಕುಸಿದವು. ಇದು ಕ್ವಿಂಟಾಲ್‌ಗೆ ರೂ 7,025-7,125 ಆಗಿದೆ. ಕಡಲೆಕಾಯಿ ಎಣ್ಣೆ ಕೂಡ ಪ್ರತಿ ಟಿನ್‌ಗೆ 25 ರೂ. ಇಳಿಕೆಯಾಗಿದ್ದು, ಪ್ರತಿ ಟಿನ್‌ಗೆ 2,625-2,815 ರೂ. ಆಗಿದೆ. ಕಳೆದ ವಾರ, ಸಾಗರೋತ್ತರ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆಯಿಂದಾಗಿ ಕಚ್ಚಾ ತಾಳೆ ಎಣ್ಣೆಯ ಬೆಲೆ ಕ್ವಿಂಟಲ್‌ಗೆ 500 ರೂ. ಇಳಿಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.