Edible Oil Price:  ಸೋಮವಾರದಂದು ದೆಹಲಿಯ ತೈಲಬೀಜ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಖಾದ್ಯ ತೈಲ-ಎಣ್ಣೆಕಾಳು ಬೆಲೆಗಳು ಭಾರಿ ಕುಸಿತವನ್ನು ಕಂಡಿವೆ. ಪ್ರಮುಖ ಖಾದ್ಯ ತೈಲಗಳಾದ ಸಾಸಿವೆ, ಶೇಂಗಾ, ಸೋಯಾಬೀನ್ ಎಣ್ಣೆ-ಎಣ್ಣೆಕಾಳು, ಕಚ್ಚಾ ಪಾಮ್ ಎಣ್ಣೆ (CPO) ಮತ್ತು ಪಾಮೋಲಿನ್ ಮತ್ತು ಹತ್ತಿಬೀಜದ ಎಣ್ಣೆಯ ಬೆಲೆಗಳು ಭಾರಿ ನಷ್ಟವನ್ನು ಅನುಭವಿಸಿವೆ. ಆದರೆ ಇತರ ಎಣ್ಣೆಕಾಳುಗಳ ಬೆಲೆ ಮೊದಲಿನಂತೆಯೇ ಮುಂದುವರೆದಿವೆ. ಮಲೇಷ್ಯಾ ಎಕ್ಸ್‌ಚೇಂಜ್‌ನಲ್ಲಿ ಈ ಎಣ್ಣೆ ಬೆಳೆಯಲ್ಲಿ ಶೇಕಡ ಅರ್ಧದಷ್ಟು ಕುಸಿತ ಕಂಡುಬಂದಿದ್ದು, ಚಿಕಾಗೋ ಎಕ್ಸ್‌ಚೇಂಜ್‌ನಲ್ಲಿ ಹೆಚ್ಚಿನ ಚಲನವಲನ ಕಂಡುಬಂದಿಲ್ಲ ಎಂದು ಮಾರುಕಟ್ಟೆಯ ಬಲ್ಲ ಮೂಲಗಳು ಮಾಹಿತಿ ನೀಡಿವೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಬಂಗರುಗಳಲ್ಲಿ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ (ಸೂರ್ಯಕಾಂತಿ, ಸೋಯಾಬೀನ್ ಮತ್ತು ಪಾಮೋಲಿನ್ ಎಣ್ಣೆ) ಸಗಟು ಬೆಲೆ ಬಹುತೇಕ ಒಂದೇ ರೀತಿಯದಾಗಿರುತ್ತದೆ.  ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ಅವುಗಳ ಬೆಲೆ ಬದಲಾಗುತ್ತದೆ. ಉದಾಹರಣೆಗೆ ಸೂರ್ಯಕಾಂತಿ ಎಣ್ಣೆಯ ಸಗಟು ಬೆಲೆ ಲೀಟರ್‌ಗೆ 80 ರೂ. ಆಗಿದೆ ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅದನ್ನು  ಲೀಟರ್‌ಗೆ 150 ರೂ. ನಂತೆ  ಮಾರಾಟ ಮಾಡಲಾಗುತ್ತದೆ, ಅದೇ ರೀತಿ ಸೋಯಾಬೀನ್ ಎಣ್ಣೆಯ ಸಗಟು ಬೆಲೆ ಬಂದರಿನಲ್ಲಿ ಲೀಟರ್‌ಗೆ ರೂ.85 ಆದರೆ ಅದನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಲೀಟರ್ ಗೆ ರೂ.140 ರಂತೆ ಮಾರಾಟ ಮಾಡಲಾಗುತ್ತದೆ. ಕಡಿಮೆ ಆದಾಯದ ಗ್ರಾಹಕರು ಸೇವಿಸುವ ಪಾಮೊಲಿನ್ ತೈಲದ ಸಗಟು ಬೆಲೆ ಬಂದರಿನಲ್ಲಿ ಲೀಟರ್‌ಗೆ ಸುಮಾರು 85 ರೂ. ಆಗಿದೆ. ಆದರೆ ಈ ತೈಲವನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಲೀಟರ್ ಗೆ ರೂ. 105 ರಂತೆ ಮಾರಾಟ ಮಾಡಲಾಗುತ್ತಿದೆ. ಪ್ರೀಮಿಯಂ ಗುಣಮಟ್ಟದ ಅಕ್ಕಿ ಹೊಟ್ಟು ಎಣ್ಣೆಯ ಸಗಟು ಬೆಲೆ ಲೀಟರ್‌ಗೆ ರೂ 85 ಮತ್ತು ಅದು  ಪ್ರಸ್ತುತ ಚಿಲ್ಲರೆ ವ್ಯಾಪಾರದಲ್ಲಿ ಲೀಟರ್‌ಗೆ ರೂ 170 ಕ್ಕೆ ಮಾರಾಟವಾಗುತ್ತಿದೆ, ಇದು ಹಿಂದಿನ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಲೀಟರ್‌ಗೆ ರೂ 20 ಕಡಿಮೆಯಾದ ಬಲಿಕದ  ಬೆಲೆಯಾಗಿದೆ.


ಸೋಮವಾರದಂದು ತೈಲ ಮತ್ತು ಎಣ್ಣೆಕಾಳುಗಳ ಬೆಲೆಗಳು ಈ ಕೆಳಗಿನಂತಿವೆ.


ಸಾಸಿವೆ ಎಣ್ಣೆ ಕಾಳುಗಳು - ಕ್ವಿಂಟಾಲ್‌ಗೆ ರೂ 4,905-5,005 (ಶೇ 42 ಸ್ಥಿತಿ ದರ).


ನೆಲಗಡಲೆ ಅಥವಾ ಶೇಂಗಾ - ಕ್ವಿಂಟಲ್‌ಗೆ 6,630-6,690 ರೂ..


ಶೇಂಗಾ  ಎಣ್ಣೆ ಗಿರಣಿ ವಿತರಣೆ (ಗುಜರಾತ್) - ಕ್ವಿಂಟಲ್‌ಗೆ 16,450 ರೂ..


ಶೇಂಗಾ ಸಂಸ್ಕರಿಸಿದ ಎಣ್ಣೆ ಪ್ರತಿ ಟಿನ್‌ಗೆ 2,470-2,735 ರೂ.


ಸಾಸಿವೆ ಎಣ್ಣೆ ದಾದ್ರಿ - ಕ್ವಿಂಟಲ್‌ಗೆ 9,240 ರೂ.


ಸಾಸಿವೆ ಪಕ್ಕಿ ಘನಿ - ಪ್ರತಿ ಟಿನ್ ಗೆ 1,580-1,660 ರೂ.


ಇದನ್ನೂ ಓದಿ-Adani-Hindenburg Case: ಸುಪ್ರೀಂ ಕೋರ್ಟ್ ನಲ್ಲಿ ತನ್ನ ಉತ್ತರ ದಾಖಲಿಸಿದ ಸೆಬಿ, 2016 ರಿಂದ ಅಡಾಣಿ ಕಂಪನಿ ತನಿಖೆಗೆ ನಕಾರ


ಸಾಸಿವೆ ಕಚ್ಚಿ  ಘನಿ - ಪ್ರತಿ ಟಿನ್‌ಗೆ 1,580-1,690 ರೂ.


ಎಳ್ಳು ಎಣ್ಣೆ ಗಿರಣಿ ವಿತರಣೆ - ಕ್ವಿಂಟಲ್‌ಗೆ 18,900-21,000 ರೂ..


ಸೋಯಾಬೀನ್ ಎಣ್ಣೆ ಗಿರಣಿ ವಿತರಣೆ ದೆಹಲಿ - ಕ್ವಿಂಟಲ್‌ಗೆ 10,150 ರೂ.


ಸೋಯಾಬೀನ್ ಮಿಲ್ ಡೆಲಿವರಿ ಇಂದೋರ್ - ಪ್ರತಿ ಕ್ವಿಂಟಲ್‌ಗೆ 10,000 ರೂ..


ಸೋಯಾಬೀನ್ ಎಣ್ಣೆ ಡಿಗುಮ್, ಕಾಂಡ್ಲಾ - ಕ್ವಿಂಟಲ್‌ಗೆ 8,540 ರೂ..


ಸಿಪಿಒ ಎಕ್ಸ್-ಕಾಂಡ್ಲಾ - ಕ್ವಿಂಟಲ್‌ಗೆ 8,700 ರೂ.


ಇದನ್ನೂ ಓದಿ-Inflation: ಕಳೆದ ಮೂರು ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟಕ್ಕೆ ಜಾರಿಗೆ ಹಣದುಬ್ಬರ


ಹತ್ತಿಬೀಜ ಗಿರಣಿ ವಿತರಣೆ (ಹರಿಯಾಣ) - ಪ್ರತಿ ಕ್ವಿಂಟಲ್‌ಗೆ 8,750 ರೂ.


ಪಾಮೊಲಿನ್ ಆರ್‌ಬಿಡಿ, ದೆಹಲಿ - ಕ್ವಿಂಟಲ್‌ಗೆ 10,050 ರೂ.


ಪಾಮೊಲಿನ್ ಎಕ್ಸ್- ಕಾಂಡ್ಲಾ - ಕ್ವಿಂಟಲ್‌ಗೆ ರೂ 9,100 (ಜಿಎಸ್‌ಟಿ ಇಲ್ಲದೆ).


ಸೋಯಾಬೀನ್ ಧಾನ್ಯ - ಕ್ವಿಂಟಲ್‌ಗೆ 5,300-5,350 ರೂ..


ಸೋಯಾಬೀನ್ ಲೂಸ್ - ಕ್ವಿಂಟಲ್ ಗೆ 5,050-5,130 ರೂ.


ಮೆಕ್ಕೆ ಜೋಳದ ಖಲ್ (ಸಾರಿಸ್ಕಾ) - ಕ್ವಿಂಟಲ್‌ಗೆ 4,010 ರೂ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ