Electric Scooter offer: ನೀವು ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಾದ್ರೆ ಕಡಿಮೆ ಬಜೆಟ್‌ ಬೆಲೆಯ ಈ ಸ್ಕೂಟರ್‌ ನಿಮಗೆ ಉತ್ತಮ ಆಯ್ಕೆಯಾಗಿದೆ. ಕೇವಲ 50 ಸಾವಿರ ರೂ.ಗೆ ನೀವು ಈ ಸ್ಕೂಟರ್‌ ಖರೀದಿಸಿ ಮನೆಗೆ ಕೊಂಡೊಯ್ಯಬಹುದು. ನೀವು ಕೇವಲ 10 ರೂ. ಖರ್ಚು ಮಾಡಿದ್ರೆ ಈ ಸ್ಕೂಟರ್ 50KM ಮೈಲೇಜ್‌ ನೀಡುತ್ತದೆ. ಈ ಸ್ಕೂಟರ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 


COMMERCIAL BREAK
SCROLL TO CONTINUE READING

ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಇ-ಸ್ಕೂಟರ್‌ ಸಹ ಖರೀದಿಸಹುದು. ಇಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ಆಂಪಿಯರ್ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದರೆ ನಿಮಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಆಫರ್‌ ಮುಗಿಯುಷ್ಟರಲ್ಲಿ ಖರೀದಿಸುವುದು ಉತ್ತಮ.


ಇದನ್ನೂ ಓದಿ: Rapido Free Ride : ಜೂನ್ 1 ರಂದು Rapido ಮೂಲಕ ಉಚಿತ ರೈಡ್ ಪಡೆಯಬೇಕೇ ? ಈ ಕೋಡ್ ಬಳಸಿ!


ಆಂಪಿಯರ್ ರಿಯೊ LI ಪ್ಲಸ್(Ampere Reo Li Plus) ಎಲೆಕ್ಟ್ರಿಕ್‌ ಸ್ಕೂಟರ್‌ ಇದೀಗ ಕೇವಲ 59,900 ರೂ.ಗೆ ಲಭ್ಯವಿದೆ. ಆದರೆ ನೀವು ಇದನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ನಿಮಗೆ 6,320 ರೂ. ರಿಯಾಯಿತಿ ದೊರೆಯುತ್ತದೆ. ಹೀಗಾಗಿ ನಿಮಗೆ ಕೇವಲ 53,580 ರೂ.ಗೆ ಈ ಸ್ಕೂಟರ್‌ ಸಿಗುತ್ತದೆ.   


ಈ ಸ್ಕೂಟರ್‌ ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು, ನಿಮಗೆ ಖಂಡಿತ ಇಷ್ಟವಾಗುತ್ತದೆ. ಈ ಸ್ಕೂಟರ್ ವ್ಯಾಪ್ತಿಯು 70KM ಆಗಿದ್ದು, ಗರಿಷ್ಠ ವೇಗ ಗಂಟೆಗೆ 25KM ಇದೆ. ಸಂಪೂರ್ಣವಾಗಿ ಚಾರ್ಜಿಂಗ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಇದಕ್ಕೆ ಟ್ಯೂಬ್ಲೆಸ್ ಟೈರ್ ಅಳವಡಿಸಲಾಗಿದೆ. ಈ ಸ್ಕೂಟರ್‌ನ ನಿರ್ವಹಣಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ 19 ಪೈಸೆ ಮಾತ್ರ. ಅಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಯಾವುದೇ ನೋಂದಣಿ ಅಗತ್ಯವಿಲ್ಲ, ಅಲ್ಲದೇ ಇದನ್ನು ಓಡಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ. ಹೀಗಾಗಿ ಈ ಸ್ಕೂಟರ್‌ ಮಹಿಳೆಯರು, ಯುವತಿಯರು, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಗುಟ್ಕಾ ತಯಾರಿಕೆ ಮತ್ತು ಮಾರಾಟ ನಿಷೇಧ..! ಸರ್ಕಾರದಿಂದ ಮಹತ್ವದ ನಿರ್ಧಾರ


ನೀವು ಈಸ್ಕೂಟರ್ ಅನ್ನು ಕಡಿಮೆ EMI ಆಯ್ಕೆಯಲ್ಲೂ ಸಹ ಖರೀದಿಸಬಹುದು. 24 ತಿಂಗಳ ಅವಧಿಗೆ ಮಾಸಿಕ EMI 2,900 ರೂ.ನಿಂದ ಪ್ರಾರಂಭವಾಗುತ್ತದೆ. ನೀವು 18 ತಿಂಗಳ ಅವಧಿಯನ್ನು ಆರಿಸಿದರೆ ತಿಂಗಳಿಗೆ 3,737, 9 ತಿಂಗಳ ಅವಧಿಗೆ 7 ಸಾವಿರ, 6 ತಿಂಗಳಾಗಿದ್ದರೆ 10,400, 3 ತಿಂಗಳಿಗೆ 20,400 ರೂ. ಪಾವತಿಸಬೇಕು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.