Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು 50 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿವೆ
ಕಡಿಮೆ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕುತ್ತಿರುವವರಿಗೆ ಆಂಪಿಯರ್ ರಿಯೊ ಪ್ಲಸ್ ನ್ಯೂ ಮೊದಲ ಆಯ್ಕೆಯಾಗಿದೆ. ಈ ಸ್ಕೂಟರಿನ ಲೀಡ್ ಆಸಿಡ್ ಬ್ಯಾಟರಿ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 45,520 ರೂ. ಇದೆ.
ನವದೆಹಲಿ: ನೀವು ಕೂಡ ಈ ದೀಪಾವಳಿ ಹಬ್ಬದಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಖರೀದಿಸಲು ಯೋಜಿಸುತ್ತಿದ್ದರೆ ಇಲ್ಲಿದೆ ನೋಡಿ ನಿಮಗೆ ಖುಷಿಸುದ್ದಿ. ಕೇವಲ 50 ಸಾವಿರ ರೂ.ಗಳ ಬಜೆಟ್‌ನಲ್ಲಿ ಬರುವ 5 ಸ್ಕೂಟರ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ. ನೀವು ಸುದೀರ್ಘ ಪ್ರವಾಸದ ಬದಲು ಸ್ಥಳೀಯವಾಗಿ ಮಾತ್ರ ದ್ವಿಚಕ್ರ ವಾಹನಗಳ ಬಳಸಿ. ಆಗ ಈ ಸ್ಕೂಟರ್‌ಗಳು ನಿಮಗೆ ಹೆಚ್ಚಿನ ಉಪಯೋಗ ನೀಡುತ್ತವೆ. ಇವುಗಳ ಬಗ್ಗೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ
ಆಂಪಿಯರ್ V48 (Ampere V48)
50 ಸಾವಿರ ರೂ. ವ್ಯಾಪ್ತಿಯಲ್ಲಿ ಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿಯಲ್ಲಿ ಆಂಪಿಯರ್ V48(Cheapest Electric Scooter) ಹೆಸರು ಅಗ್ರಸ್ಥಾನದಲ್ಲಿದೆ. ಈ ಸ್ಕೂಟರಿನ ಎಕ್ಸ್ ಶೋರೂಂ ಬೆಲೆ 39,990 ರೂ.ನಿಂದ ಆರಂಭವಾಗುತ್ತದೆ. ಈ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 60 ಕಿ.ಮೀ. ನೀಡುತ್ತದೆ. ಕಂಪನಿಯ ಪ್ರಕಾರ ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಗ್ರಾಹಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು, ಈ EV ಸ್ಕೂಟರ್ ಅನ್ನು ಕೆಂಪು, ನೀಲಿ ಮತ್ತು ನೇರಳೆ ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಸ್ಕೂಟರ್ ಗರಿಷ್ಠ 25Kmph ವೇಗದಲ್ಲಿ ಚಲಿಸಬಲ್ಲದು. ಇದು 48V ಬ್ಯಾಟರಿ ಮತ್ತು 250W ಮೋಟಾರ್ ಹೊಂದಿದೆ.
ಇದನ್ನೂ ಓದಿ: Petrol Price Today : ವಾಹನ ಸವಾರರಿಗೆ ಬಿಗ್ ಶಾಕ್ : ಭಾರೀ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ!
ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ LX (VRLA)
ದೆಹಲಿ- NCR ನಲ್ಲಿ ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ LX (VRLA) ನ ಎಕ್ಸ್ ಶೋರೂಂ ಬೆಲೆ 46,640 ರೂ. ಇದೆ. ಕಂಪನಿಯು ಈ ಸ್ಕೂಟರ್(Electric Scooters) ಅನ್ನು ಕೆಂಪು ಮತ್ತು ಬಿಳಿ ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ 25Kmph ಗರಿಷ್ಠ ವೇಗವನ್ನು ಹೊಂದಿದೆ, ಇದನ್ನು ಒಂದೇ ಚಾರ್ಜ್‌ನಲ್ಲಿ 50Km ವರೆಗೆ ಚಲಾಯಿಸಬಹುದು. ಕಂಪನಿಯ ಪ್ರಕಾರ ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 8 ರಿಂದ 10 ಗಂಟೆಗಳು ತೆಗೆದುಕೊಳ್ಳುತ್ತದೆ. ಇದು 250W ಗಿಂತ ಕಡಿಮೆ ಶಕ್ತಿಯ ಮೋಟಾರ್ ಮತ್ತು 48V ಬ್ಯಾಟರಿಯನ್ನು ಹೊಂದಿದೆ.
ಹೀರೋ ಎಲೆಕ್ಟ್ರಿಕ್ ಆಪ್ಟಿಮಾ LX (VRLA)
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಎಲೆಕ್ಟ್ರಿಕ್ ಆಪ್ಟಿಮಾ LX (VRLA) ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 51,440 ರೂ. ಇದೆ. ನೀವು ಇದನ್ನು ಬಿಳಿ, ನೀಲಿ ಮತ್ತು ಗ್ರೇ ಮೂರು ಬಣ್ಣಗಳಲ್ಲಿ ಖರೀದಿಸಬಹುದು. ನೀವು ಈ ಸ್ಕೂಟರ್ ಅನ್ನು 25Kmph ಗರಿಷ್ಠ ವೇಗದಲ್ಲಿ ಮಾತ್ರ ಓಡಿಸಬಹುದು. ಕಂಪನಿಯ ಪ್ರಕಾರ ಸ್ಕೂಟರ್(EV Scooters) ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 8 ರಿಂದ 10 ಗಂಟೆಗಳು ತೆಗೆದುಕೊಳ್ಳುತ್ತದೆ. ಇದು 250W ಗಿಂತ ಕಡಿಮೆ ಶಕ್ತಿಯ ಮೋಟಾರ್ ಮತ್ತು 48V ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ: Mobile Phone Fells in Train: ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಬಿದ್ದರೆ, ಅದನ್ನು ಈ ರೀತಿ ಹಿಂಪಡೆಯಬಹುದು
ಆಂಪಿಯರ್ ರಿಯೊ ಪ್ಲಸ್ ನ್ಯೂ(Ampere Reo Plus New)
ಕಡಿಮೆ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕುತ್ತಿರುವವರಿಗೆ ಆಂಪಿಯರ್ ರಿಯೊ ಪ್ಲಸ್ ನ್ಯೂ ಮೊದಲ ಆಯ್ಕೆಯಾಗಿದೆ. ಈ ಸ್ಕೂಟರಿನ ಲೀಡ್ ಆಸಿಡ್ ಬ್ಯಾಟರಿ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 45,520 ರೂ. ಇದೆ. ಒಂದೇ ಚಾರ್ಜ್‌ನಲ್ಲಿ ಸ್ಕೂಟರ್(EV Scooters) ಅನ್ನು 65 ಕಿಮೀ ವರೆಗೆ ಓಡಿಸಬಹುದು. ಸಂಪೂರ್ಣವಾಗಿ ಚಾರ್ಜ್ ಮಾಡಲು ಇದು 6 ಗಂಟೆ ತೆಗೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 25 ಕಿಮೀ. ಸ್ಕೂಟರ್ 48V ಬ್ಯಾಟರಿ ಮತ್ತು 250W ಮೋಟಾರ್ ಹೊಂದಿದೆ.
ಲೋಹಿಯಾ ಓಮಾ ಸ್ಟಾರ್
ಲೋಹಿಯಾ ಓಮಾ ಸ್ಟಾರ್ ವೆಬ್‌ಸೈಟ್‌ನಲ್ಲಿ ಇದರ ಬೆಲೆಯನ್ನು ನೀಡಿಲ್ಲ, ಆದರೆ ವರದಿಗಳ ಪ್ರಕಾರ ಈ ಸ್ಕೂಟರ್ ಆರಂಭಿಕ ಬೆಲೆ 45,368 ರೂ. ಇದೆ ಎನ್ನಲಾಗಿದೆ. ಇದು 25Kmph ನ ಗರಿಷ್ಠ ವೇಗವನ್ನು ಹೊಂದಿದೆ ಮತ್ತು ಒಂದು ಬಾರಿ ಚಾರ್ಜ್ ಮಾಡಿದರೆ 60Km ವರೆಗೆ ಚಲಿಸಬಹುದು. ಇದು 250W ಗಿಂತ ಕಡಿಮೆ BLDC ಮೋಟಾರ್ ಹೊಂದಿದೆ. ಶಕ್ತಿಯನ್ನು ನೀಡಲು ಸ್ಕೂಟರ್‌ನಲ್ಲಿ 48V ಬ್ಯಾಟರಿ ಲಭ್ಯವಿದೆ. ಡಿಜಿಟಲ್ ಡಿಸ್ ಪ್ಲೇ ಮತ್ತು ಟೆಲಿಸ್ಕೋಪ್ ಫೋರ್ಕ್ ನಂತಹ ವೈಶಿಷ್ಟ್ಯಗಳು ಸ್ಕೂಟರ್ ನಲ್ಲಿ ಲಭ್ಯವಿದೆ. ಇದನ್ನು ನಿರ್ವಹಿಸಲು ಯಾವುದೇ ಪರವಾನಗಿಯ ಅಗತ್ಯವಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ