ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆ(5 State Election Results) ಮುಗಿದು ಫಲಿತಾಂಶ ಬರುವವರೆಗೂ ಸ್ಥಿರವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಇದೀಗ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದೆಡೆ ತೈಲದರ ಏರಿಕೆ ಬಿಸಿ, ಮತ್ತೊಂದೆಡೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಜನಸಾಮಾನ್ಯರಿಗೆ ದಿಕ್ಕು ತೋಚದಂತಾಗಿದೆ. ಕಳೆದ 14 ದಿನಗಳಲ್ಲಿ 12 ಬಾರಿ ತೈಲದರ ಏರಿಕೆಯಾಗಿದ್ದು, 8.40 ರೂ.ನಷ್ಟು ಹೆಚ್ಚಳವಾಗಿದೆ.


COMMERCIAL BREAK
SCROLL TO CONTINUE READING

ಜನಸಾಮಾನ್ಯರಿಗೆ ವಿದ್ಯುತ್ ದರ ಹೆಚ್ಚಳದ ಬಿಸಿ


ತೈಲದರ, ಅಗತ್ಯವಸ್ತುಗಳ ಬೆಲೆ ಏರಿಕೆ ಮಧ್ಯೆ ಜನಸಾಮಾನ್ಯರಿಗೆ ವಿದ್ಯುತ್ ದರ(Electricity bill) ಹೆಚ್ಚಳದ ಬಿಸಿ ತಟ್ಟಿದೆ. ಪ್ರತಿ ಯೂನಿಟ್‍ ವಿದ್ಯುತ್‍ಗೆ ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) ಸೋಮವಾರ ಆದೇಶ ಹೊರಡಿಸಿದೆ. ಏಪ್ರಿಲ್ 1ರಿಂದಲೇ ಹೊಸ ದರ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: PM Kisan ರೈತರಿಗೆ ಸಿಹಿ ಸುದ್ದಿ : eKYC ಕೊನೆಯ ದಿನಾಂಕ ವಿಸ್ತರಣೆ


ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ(ESCOM) ಸರಾಸರಿ 35 ಪೈಸೆಯಷ್ಟು ಹೆಚ್ಚಳ ಮಾಡಿ ಹಂಗಾಮಿ ಅಧ್ಯಕ್ಷ ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಪ್ರತಿ ಯೂನಿಟ್‍ ವಿದ್ಯುತ್‍ಗೆ 5 ಪೈಸೆಗಳಷ್ಟು ಇಂಧನ ಶುಲ್ಕ ಹಾಗೂ ಪ್ರತಿ ಹೆಚ್‍.ಪಿ/ಕಿ.ವಾ/ಕೆ.ವಿ.ಎಗೆ 10 ರೂ.ನಿಂದ 30 ರೂ.ವರೆಗೆ ನಿಗದಿತ ಶುಲ್ಕಗಳ ಹೆಚ್ಚಳ(Energy Charges)ವನ್ನು ಅನುಮೋದಿಸಲಾಗಿದೆ. ಇದರೊಂದಿಗೆ ಪ್ರತಿ ಯೂನಿಟ್ ವಿದ್ಯುತ್ ದರ 35 ಪೈಸೆ(ಶೇ.4.33)ಯಷ್ಟಾಗಿರುತ್ತದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು 1 ವರ್ಷದರೆಗೆ ಮಾಸಿಕ ಇಂಧನ ಬಳಕೆಯಲ್ಲಿ ಪ್ರತಿ ಯೂನಿಟ್ ಗೆ 50 ಪೈಸೆ ರಿಯಾಯಿತಿ ನೀಡಲಾಗಿದೆ. 2022-23ನೇ ಆರ್ಥಿಕ ವರ್ಷದಲ್ಲಿ ಉಂಟಾಗುವ ಆದಾಯ ಕೊರತೆಯ ಮೊತ್ತ 2159.48 ಕೋಟಿ ರೂ.ಗಳನ್ನು ಮರು ಪಡೆಯಲು ದರ ಹೆಚ್ಚಳ ಅನಿವಾರ್ಯವಾಗಿದೆ. ಸದರಿ ಮೊತ್ತವು ಆರ್ಥಿಕ ವರ್ಷ 2020-21ರ ಕೊರತೆಯ ಮೊತ್ತ ರೂ. 1700.49 ಕೋಟಿ ರೂ.ಗಳನ್ನು ಒಳಗೊಂಡಿರುತ್ತದೆ ಎಂದು ಕೆಇಆರ್‌ಸಿ ಹೇಳಿದೆ. ರಾಜ್ಯದ ಎಲ್ಲಾ ಎಸ್ಕಾಂಗಳು ಸೇರಿ ಸರಾಸರಿ 1.85 ರೂ. ವಿದ್ಯುತ್ ದರ ಹೆಚ್ಚಳ(Power Tariff)ಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. 


ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು..? 


- 2009 ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ ಹೆಚ್ಚಳ
- 2010 ರಲ್ಲಿ ಪ್ರತಿ ಯೂನಿಟ್ ಗೆ  30 ಪೈಸೆ ಹೆಚ್ಚಳ
- 2011 ರಲ್ಲಿ ಪ್ರತಿ ಯೂನಿಟ್ ಗೆ 28 ಪೈಸೆ ಹೈಚ್ಚಳ
- 2012 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ ಹೆಚ್ಚಳ
- 2013 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ ಹೈಕ್
- 2017 ರಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ ಹೆಚ್ಚಳ
- 2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ
- 2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ


ಇದನ್ನೂ ಓದಿ: Arecanut Price: ಶಿವಮೊಗ್ಗ ಅಡಿಕೆ ಮಾರುಕಟ್ಟೆ ಇಂದಿನ ಧಾರಣೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.