ನವದೆಹಲಿ: Employee Pension Scheme - ಉದ್ಯೋಗಿ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಹೂಡಿಕೆಯ ಮೇಲಿನ ಮಿತಿಯನ್ನು ಶೀಘ್ರದಲ್ಲೇ ತೆರವುಗೊಳ್ಳುವ ನಿರೀಕ್ಷೆ ಇದೆ. ಇದೀಗ ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಈ ವಿಚಾರಣೆ ಮತ್ತು ಈ ವಿಷಯ ನಮ್ಮೊಂದಿಗೆ ಹೇಗೆ ಲಿಂಕ್ ಹೊಂದಿದೆ ಮತ್ತು ಅದು ನಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಇಪಿಎಸ್ ಮಿತಿ ತೆರವುಗೊಳಿಸುವ ಪ್ರಕರಣ
ಈ ಪ್ರಕರಣದಲ್ಲಿ ಮುಂದುವರೆಯುವುದಕ್ಕು ಮುನ್ನ  ಸಂಪೂರ್ಣ ವಿಷಯ ಏನೆಂದು ಅರ್ಥಮಾಡಿಕೊಳ್ಳೋಣ. ಪ್ರಸ್ತುತ, ಗರಿಷ್ಠ ಪಿಂಚಣಿ (Pension) ವೇತನವು ತಿಂಗಳಿಗೆ 15,000 ರೂ. ಇದೆ. ಅಂದರೆ, ನಿಮ್ಮ ಸಂಬಳ ಏನೇ ಇರಲಿ, ಆದರೆ ಪಿಂಚಣಿಯ ಲೆಕ್ಕಾಚಾರ ಕೇವಲ 15,000 ರೂ. ಮಾತ್ರ ಇದೆ. ಈ ಮಿತಿಯನ್ನು ತೆಗೆದುಹಾಕುವ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.


ಕಳೆದ ವರ್ಷ ಆಗಸ್ಟ್ 12 ರಂದು, ಯೂನಿಯನ್ ಆಫ್ ಇಂಡಿಯಾ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸಲ್ಲಿಸಿದ ಅರ್ಜಿಗಳ ಬ್ಯಾಚ್ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿತ್ತು, ಇದು ನೌಕರರ ಪಿಂಚಣಿಯನ್ನು ರೂ 15,000ಕ್ಕೆ  ಸೀಮಿತಗೊಳಿಸಬಾರದು ಎಂದು ಹೇಳಿದೆ. ಈ ಪ್ರಕರಣಗಳ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ.


ಈಗ EPS ಗೆ ಸಂಬಂಧಿಸಿದ ನಿಯಮಗಳೇನು?
ನಾವು ಕೆಲಸವನ್ನು ಪ್ರಾರಂಭಿಸಿದಾಗ ಮತ್ತು ಇಪಿಎಫ್‌ನ ಸದಸ್ಯರಾದಾಗ,  ನಾವು ಇಪಿಎಸ್‌ನ ಸದಸ್ಯರೂ ಕೂಡ ಆಗುತ್ತೇವೆ. ಉದ್ಯೋಗಿ ತನ್ನ ಸಂಬಳದ 12% ಅನ್ನು ಇಪಿಎಫ್‌ನಲ್ಲಿ ನೀಡುತ್ತಾನೆ (EPF Consribution), ಅದೇ ಮೊತ್ತವನ್ನು ಅವನ ಕಂಪನಿಯೂ ನೀಡುತ್ತದೆ. ಆದರೆ ಅದರ ಒಂದು ಭಾಗ ಅಂದರೆ, ಶೇ.8.33 EPS ಗೆ ಹೋಗುತ್ತದೆ. ನಾವು ಮೇಲೆ ತಿಳಿಸಿದಂತೆ ಪ್ರಸ್ತುತ ಗರಿಷ್ಠ ಪಿಂಚಣಿ ವೇತನ ಕೇವಲ 15 ಸಾವಿರ ರೂಪಾಯಿಗಳು, ಅಂದರೆ ಪ್ರತಿ ತಿಂಗಳು ಪಿಂಚಣಿ ಪಾಲು ಗರಿಷ್ಠ (15,000ರ 8.33%) 1250 ರೂ.


ಉದ್ಯೋಗಿ ನಿವೃತ್ತರಾದಾಗಲೂ, ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನವನ್ನು 15 ಸಾವಿರ ರೂ ಎಂದು ಪರಿಗಣಿಸಲಾಗುತ್ತದೆ, ಇದರ ಪ್ರಕಾರ, ಇಪಿಎಸ್ ಅಡಿಯಲ್ಲಿ ಉದ್ಯೋಗಿಗೆ ಗರಿಷ್ಠ ಪಿಂಚಣಿ 7,500 ರೂ. ಪಡೆಯಬಹುದು.


ಪಿಂಚಣಿಯನ್ನು ಈ ರೀತಿ ಲೆಕ್ಕ ಹಾಕಲಾಗುತ್ತದೆ
ನೀವು ಸೆಪ್ಟೆಂಬರ್ 1, 2014 ರ ಮೊದಲು ಇಪಿಎಸ್‌ಗೆ ಕೊಡುಗೆ ನೀಡಲು ಪ್ರಾರಂಭಿಸಿದ್ದರೆ, ನಿಮಗೆ ಪಿಂಚಣಿ ಕೊಡುಗೆಗಾಗಿ ಮಾಸಿಕ ವೇತನದ ಗರಿಷ್ಠ ಮಿತಿ ರೂ.6500 ಆಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ನೀವು ಸೆಪ್ಟೆಂಬರ್ 1, 2014 ರ ನಂತರ ಇಪಿಎಸ್‌ಗೆ ಸೇರ್ಪಡೆಗೊಂಡಿದ್ದರೆ, ಗರಿಷ್ಠ ವೇತನ ಮಿತಿ 15,000 ಆಗಿರುತ್ತದೆ. ಪಿಂಚಣಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ


ಇದನ್ನೂ ಓದಿ-ಈ ರಾಶಿಗಳ ಮೇಲೆ ಆರಂಭವಾಗಿದೆ ಶನಿ - ಸಾಡೇಸಾತಿ : ಯಾವ ರಾಶಿಯವರಿಗೆ ಲಾಭ?


ಇಪಿಎಸ್ ಲೆಕ್ಕಾಚಾರದ ಸೂತ್ರ
>> ಮಾಸಿಕ ಪಿಂಚಣಿ = (ಪಿಂಚಣಿ ಪಡೆಯಬಹುದಾದ ಸಂಬಳ x ಇಪಿಎಸ್ ಕೊಡುಗೆಯ ವರ್ಷಗಳು)/70
>> ಇಲ್ಲಿ, ಉದ್ಯೋಗಿ ಸೆಪ್ಟೆಂಬರ್ 1, 2014 ರ ನಂತರ ಇಪಿಎಸ್‌ಗೆ ಕೊಡುಗೆ ನೀಡಲು ಪ್ರಾರಂಭಿಸುತ್ತಾನೆ ಎಂದು ಭಾವಿಸೋಣ, ನಂತರ ಪಿಂಚಣಿ ಕೊಡುಗೆ 15,000 ರೂ. ಅವರು 30 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಭಾವಿಸೋಣ.
ಮಾಸಿಕ ಪಿಂಚಣಿ = 15,000X30/70 = 6428 ರೂ.


ಇದನ್ನೂ ಓದಿ-ಸಂಕ್ರಾಂತಿಗೆ ಬುಧದ ಹಿಮ್ಮುಖ ಚಲನೆ ಆರಂಭ : ಮುಂದಿನ 22 ದಿನ ಈ ರಾಶಿಯ ಮೇಲೆ ಭಾರೀ ಪರಿಣಾಮ


ಗರಿಷ್ಠ ಮತ್ತು ಕನಿಷ್ಠ ಪಿಂಚಣಿ
6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಯ ಸೇವೆಯನ್ನು 1 ವರ್ಷ ಎಂದು ಪರಿಗಣಿಸಲಾಗುತ್ತದೆ ಮತ್ತು ಅದು ಕಡಿಮೆಯಿದ್ದರೆ ಅದನ್ನು ಲೆಕ್ಕಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕಾದ ಇನ್ನೊಂದು ವಿಷಯ. ಉದ್ಯೋಗಿ 14 ವರ್ಷ 7 ತಿಂಗಳು ಕೆಲಸ ಮಾಡಿದ್ದರೆ, ಅದನ್ನು 15 ವರ್ಷ ಎಂದು ಪರಿಗಣಿಸಲಾಗುತ್ತದೆ. ಆದರೆ ನೀವು 14 ವರ್ಷ ಮತ್ತು 5 ತಿಂಗಳು ಕೆಲಸ ಮಾಡಿದ್ದರೆ, ನಂತರ ಕೇವಲ 14 ವರ್ಷಗಳ ಸೇವೆಯ ಆಧಾರದ ಮೇಲೆ  ಲೆಕ್ಕಹಾಕಲಾಗುತ್ತದೆ. ಇಪಿಎಸ್ ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತವು ತಿಂಗಳಿಗೆ ರೂ 1000 ಆಗಿದ್ದರೆ, ಗರಿಷ್ಠ ಪಿಂಚಣಿ ರೂ 7500 ಆಗಿದೆ.


ಇದನ್ನೂ ಓದಿ -7th Pay: ನೌಕರರಿಗೆ ಹೊಸ ವರ್ಷದ ಉಡುಗೊರೆ! ಶೇ.3ರಷ್ಟು ಡಿಎ ಹೆಚ್ಚಳ, ಬಾಕಿ ಹಣದ ಬಗ್ಗೆಯೂ ನಿರ್ಧಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.