EPFO ಚಂದದಾರರಿಗೊಂದು ಸಂತಸದ ಸುದ್ದಿ, 7 ಕೋಟಿಗೂ ಅಧಿಕ PF ಖಾತೆಗಳಿಗೆ ಒಟ್ಟು 72 ಸಾವಿರ ಕೋಟಿ ವರ್ಗಾವಣೆ!
EPFO Update: ಭವಿಷ್ಯ ನಿಧಿ ವ್ಯಾಪ್ತಿಯಲ್ಲಿ ಬರುವ ಸುಮಾರು 7 ಕೋಟಿಗೂ ಅಧಿಕ ಚಂದಾದಾರರ ಖಾತೆಗಳಿಗೆ ಒಟ್ಟು 72 ಸಾವಿರ ಕೋಟಿ ರೂ.ಹಣ ವರ್ಗಾವಣೆಯಾಗುತ್ತಿದೆ.
EPFO ಚಂದಾದಾರರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ. ನೌಕರರ ಭವಿಷ್ಯ ನಿಧಿ ಸಂಘಟನೆಯು ಮುಂಬರುವ ಕೆಲವು ದಿನಗಳಲ್ಲಿ 2022 ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಖಾತೆಗೆ ಶೇಕಡಾ 8.1 ಬಡ್ಡಿಯನ್ನು ಪಾವೈತಿಸಲಿದೆ. ಇದರಿಂದ ಪಿಎಫ್ ವ್ಯಾಪ್ತಿಗೆ ಬರುವ ದೇಶದ ಸುಮಾರು 7 ಕೋಟಿ ನೌಕರರ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದೆ.
ನೌಕರರ ಭವಿಷ್ಯ ನಿಧಿ ಸಂಘಟನೆ 22ನೇ ಹಣಕಾಸು ವರ್ಷಕ್ಕೆ ನೌಕರರ ಖಾತೆಯಲ್ಲಿನ ಬಡ್ಡಿಯನ್ನು ಶೇಕಡಾ 8.1 ರಷ್ಟಕ್ಕೆ ಲೆಕ್ಕಾಚಾರ ಮಾಡುವ ತನ್ನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಮತ್ತು ಜೂನ್ 16 ರಿಂದ ಚಂದಾದಾರರ ಖಾತೆಗಳಿಗೆ ಹಣ ಜಮಾ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಈ ಪ್ರಕ್ರಿಯೆಯ ಅಡಿ ನಿತ್ಯ 2.5 ರಿಂದ 5 ಲಕ್ಷ ಚಂದಾದಾರರ ಖಾತೆಗೆ ಬಡ್ಡಿ ಪಾವತಿಯಾಗಲಿದೆ, ಒಟ್ಟು 7 ಕೋಟಿಗೂ ಅಧಿಕ ಚಂದಾದಾರರ ಖಾತೆಗೆ 72,000 ಸಾವಿರ ಕೋಟಿ ರೂ. ಬಡ್ಡಿ ಜಮಾ ಆಗಲಿದ್ದು, ಕಳೆದ ವರ್ಷ ಈ ಮೊತ್ತ 70,000 ಕೋಟಿ ರೂ.ಆಗಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ.
ಇದನ್ನೂ ಓದಿ-Ration Card: ಗುಡ್ ನ್ಯೂಸ್! ಬದಲಾಗಲಿದೆ ಪಡಿತರ ವಿತರಣೆ ನಿಯಮ!
ಜೂನ್ 16 ರಿಂದ ಚಂದಾದಾರರ ಖಾತೆಗೆ ಹಣ ಪಾವತಿ
ಕಳೆದ ಬಾರಿ ಅನೇಕ ಚಂದಾದಾರರು 2021 ರ ಹಣಕಾಸು ವರ್ಷಕ್ಕೆ ಬಡ್ಡಿಯನ್ನು ಪಡೆಯಲು 6 ರಿಂದ 8 ತಿಂಗಳುಗಳವರೆಗೆ ಕಾಯಬೇಕಾಗಿತ್ತು, ಇಪಿಎಫ್‌ಒ 22 ರ ಹಣಕಾಸು ವರ್ಷದ ಬಡ್ಡಿದರಗಳನ್ನು ಶೇಕಡಾ 8.1 ಕ್ಕೆ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಕಳೆದ 40 ವರ್ಷಗಳಲ್ಲಿನ ಅತ್ಯಂತ ಕಡಿಮೆ ಬಡ್ಡಿದರ ಇದಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ, 2019-20 ರಲ್ಲಿ, KYC ಯಲ್ಲಿನ ಅಡಚಣೆಯಿಂದಾಗಿ, ಹಲವು ಚಂದಾದಾರರು ಬಡ್ಡಿ ಹಣಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇದನ್ನೂ ಓದಿ-Home Loan Repo Rate: ಗೃಹ ಸಾಲದ ಮೇಲಿನ ಬಡ್ಡಿ ಹೆಚ್ಚಿಸಿದ ಈ ಎರಡು ಬ್ಯಾಂಕ್ ಗಳು.. !
ನಿಮ್ಮ ಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಈ ರೀತಿ ಪರಿಶೀಲಿಸಿ
ಆನ್‌ಲೈನ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಲು, ನೀವು EPFO ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು, epfindia.gov.in ನಲ್ಲಿ ಇ-ಪಾಸ್‌ಬುಕ್ ಕ್ಲಿಕ್ ಮಾಡಿ. ನಿಮ್ಮ ಇ-ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿದಾಗ, passbook.epfindia.gov.in ಎಂಬ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಬಳಕೆದಾರ ಹೆಸರು (UAN ಸಂಖ್ಯೆ), ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು ಹೊಸ ಪುಟಕ್ಕೆ ಬರುತ್ತೀರಿ ಮತ್ತು ಅಲ್ಲಿ ಸದಸ್ಯತ್ವ ID ಆಯ್ಕೆಯನ್ನು ಆಯ್ದುಕೊಳ್ಳಿ. ಈ ರೀತಿ ನೀವು ಇ-ಪಾಸ್‌ಬುಕ್‌ನಲ್ಲಿ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಬಹುದು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ