ಮಧ್ಯಪ್ರದೇಶದಲ್ಲೊಬ್ಬ ಕೋಟ್ಯಾಧಿಪತಿ ಕ್ಲರ್ಕ್ : ದಾಳಿ ವೇಳೆ ಪತ್ತೆಯಾಯಿತು ಕಂತೆ ಕಂತೆ ನೋಟು
MP Crorepati Clerk: ಕ್ಲರ್ಕ್ ಹೀರೋ ಕೇಶ್ವಾನಿ ಮನೆಯಿಂದ 4 ಕೋಟಿ ಮೌಲ್ಯದ ಆಸ್ತಿಯ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಐಷಾರಾಮಿ ಮನೆಗಳು, ಪ್ಲಾಟ್‌ಗಳು ಮತ್ತು ಜಮೀನಿನ ದಾಖಲೆಗಳು ಸೇರಿವೆ.
MP Crorepati Clerk : ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬುಧವಾರ, ರಾಜ್ಯದ ಆರ್ಥಿಕ ಅಪರಾಧ ವಿಭಾಗದ ತಂಡವು ವೈದ್ಯಕೀಯ ಶಿಕ್ಷಣ ಇಲಾಖೆಯ ಗುಮಾಸ್ತರೊಬ್ಬರ ಮನೆ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆ ಮನೆಯಿಂದ 85 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳನ್ನು ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಗುಮಾಸ್ತನ ಮನೆಯಲ್ಲಿ ವಾಹನಗಳು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ.
EOW ತಂಡದಿಂದ ದಾಳಿ :
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿರುವ ಹೀರೋ ಕೇಸ್ವಾನಿ ನಿವಾಸಕ್ಕೆ ಇಒಡಬ್ಲ್ಯು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತನಿಖೆಯ ವೇಳೆ ಮನೆಯಿಂದ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ಮನೆಯಲ್ಲಿ ಪತ್ತೆಯಾದ ಮೂಟೆಗಟ್ಟಲೆ ನೋಟಿನ ಮೌಲ್ಯ 85 ಲಕ್ಷ ರೂ. ಎನ್ನುವುದು ತಿಳಿದುಬಂದಿದೆ.
ಇದನ್ನೂ ಓದಿ : BREAKING : ಸಿಜೆಐ ರಮಣ ಉತ್ತರಾಧಿಕಾರಿಯಾಗಿ ನ್ಯಾ. ಯುಯು ಲಲಿತ್ ಹೆಸರು ಶಿಫಾರಸು!ಕೋಟಿಗಟ್ಟಲೆ ಮೌಲ್ಯದ
ಆಸ್ತಿ ಪತ್ರಗಳು ಪತ್ತೆ :
ಅಷ್ಟೇ ಅಲ್ಲ, ಕ್ಲರ್ಕ್ ಹೀರೋ ಕೇಶ್ವಾನಿ ಮನೆಯಿಂದ 4 ಕೋಟಿ ಮೌಲ್ಯದ ಆಸ್ತಿಯ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಐಷಾರಾಮಿ ಮನೆಗಳು, ಪ್ಲಾಟ್‌ಗಳು ಮತ್ತು ಜಮೀನಿನ ದಾಖಲೆಗಳು ಸೇರಿವೆ. ಇದರೊಂದಿಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ಕೂಡಾ ಪತ್ತೆಯಾಗಿವೆ. ಬೈರಾಗರ್ ನ ಮನೆಯೇ 1.5 ಕೋಟಿ ಮೌಲ್ಯದ್ದು ಎನ್ನಲಾಗಿದೆ. ಹೀರೋ ಕೇಶ್ವಾನಿ ಹೆಚ್ಚಿನ ಆಸ್ತಿಯನ್ನು ತಮ್ಮ ಪತ್ನಿ ಹೆಸರಿನಲ್ಲಿ ಖರೀದಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆಸ್ತಿ ಪತ್ತೆಯಾಗುತ್ತಿದ್ದಂತೆಯೇ ಭ್ರಷ್ಟ ಗುಮಾಸ್ತನಿಗೆ ನಡುಕ ಆರಂಭವಾಗಿತ್ತು. ಭಯ ಕಾರಣದಿಂದಾಗಿ ಹೀರೋ ಕೇಶ್ವಾನಿ ಬಾತ್ರೂಮ್ ಕ್ಲೀನರ್ ಅನ್ನು ಕುಡಿದಿದ್ದಾರೆ. ಹೀರೋ ಕೇಸ್ವಾನಿ ಅವರನ್ನು ಕೂಡಲೇ ಹಮೀದಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಇದನ್ನೂ ಓದಿ : ಆಗಸ್ಟ್ 15 ರಂದು ಭಾರತದ ವಿವಿಧೆಡೆ ದಾಳಿಗೆ ಉಗ್ರರ ಸಂಚು : ಪಾಕ್ ಮೂಲಕ ಮಿಶನ್ 15 ಆಗಸ್ಟ್ ಹುನ್ನಾರ
4 ಸಾವಿರ ರೂಪಾಯಿ ಸಂಬಳದಲ್ಲಿ ಆರಂಭವಾದ ಕೆಲಸ :
ಕೇವಲ ನಾಲ್ಕು ಸಾವಿರ ರೂಪಾಯಿ ವೇತನಕ್ಕೆ ಕೆಲಸ ಆರಂಭಿಸಿದ ಹೀರೋ ಕೇಶ್ವಾನಿ ಈಗ ಕೊತುಗಳ ಒಡೆಯ. ಈಗ ಅವರು ಪಡೆಯುವ ವೇತನ 50 ಸಾವಿರ ರೂಪಾಯಿ. ಆದರೂ ಈ ವೇತನದಲ್ಲಿ ಇಷ್ಟೋ ದೊಡ್ಡ ಮೊತ್ತದ ಆಸ್ತಿ ಹೊಂದುವುದು ಅಸಾಧ್ಯವಾದ ಮಾತು.
ಗುಮಾಸ್ತ ಅಮಾನತು :
ಕೋಟ್ಯಂತರ ಹಗರಣದ ಬಳಿಕ ವೈದ್ಯಕೀಯ ಶಿಕ್ಷಣ ಇಲಾಖೆ ಗುಮಾಸ್ತ ಹೀರೋ ಕೇಶ್ವಾನಿ ಅವರನ್ನು ಅಮಾನತು ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಕೂಡ ಈ ಬಗ್ಗೆ ತನಿಖೆ ಆರಂಭಿಸಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಕ್ಲರ್ಕ್ ಹೀರೋ ಕೇಶ್ವಾನಿ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.