EPF Alert! ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಇಪಿಎಫ್ ಯೋಜನೆಯಡಿ ನೀವೂ ಕೂಡ ಪ್ರಯೋಜನಗಳನ್ನು ಪಡೆಯುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು,  EPFO ನೀಡಿರುವ ಮಾಹಿತಿ ಪ್ರಕಾರ UAN ನೊಂದಿಗೆ Aadhaar Card ಅನ್ನು ಲಿಂಕ್ ಮಾಡುವುದು ಬಹಳ ಮುಖ್ಯವಾಗಿದೆ. ಇಪಿಎಫ್‌ಒ ನೀಡಿರುವ ಯೂನಿವರ್ಸಲ್ ಅಕೌಂಟ್ ಸಂಖ್ಯೆ ಪ್ರತಿಯೊಬ್ಬ ಉದ್ಯೋಗಿಗೆ ನಿಯೋಜಿಸಲಾದ ಸಂಖ್ಯೆಗಳಲ್ಲಿ ಒಂದಾಗಿದೆ ಮತ್ತು ಯಾವಾಗಲೂ ಅವರೊಂದಿಗೆಯೇ ಇರಲಿದೆ. 


COMMERCIAL BREAK
SCROLL TO CONTINUE READING

ನವೆಂಬರ್ 30 ರವರೆಗೆ ಲಿಂಕ್ ಮಾಡಿ
EPFO ಯುನಿವರ್ಸಲ್ ಅಕೌಂಟ್ ನಂಬರ್ (UAN) ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ (UAN-Aadhaar Link) ಮಾಡುವ ಗಡುವನ್ನು ನವೆಂಬರ್ 30, 2021 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಅವುಗಳನ್ನು ಲಿಂಕ್ ಮಾಡಲು ಗಡುವು ಆಗಸ್ಟ್ 31, 2021 ಆಗಿತ್ತು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ನವೆಂಬರ್ 15 ರಂದು ಈ ಕುರಿತು ಹೊಸ ದಿನಾಂಕವನ್ನು ಪ್ರಕಟಿಸಿತ್ತು. ನಿವೃತ್ತಿ ಏಜೆನ್ಸಿಗಳು ತಮ್ಮ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ECR) ಸಲ್ಲಿಕೆ ಮಾನದಂಡಗಳನ್ನು ಸಹ ನವೀಕರಿಸಿವೆ. ಇಪಿಎಫ್‌ಒ ಪ್ರಕಾರ, ಪಿಎಫ್‌ಯುಎಎನ್‌ನೊಂದಿಗೆ (PFUAN)ಆಧಾರ್ ಲಿಂಕ್ ಮಾಡಿದ ಉದ್ಯೋಗಿಗಳಿಗೆ ಮಾತ್ರ ಉದ್ಯೋಗದಾತರು ಅರ್ಜಿ ಸಲ್ಲಿಸಬಹುದು.


ಕೊಡುಗೆ ನಿಂತುಹೊಗಲಿದೆ
ನೀವು UAN ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ, ಉದ್ಯೋಗದಾತರ ಕೊಡುಗೆ ನಿಮ್ಮ ಖಾತೆಗೆ ಬರುವುದು ನಿಂತುಹೊಗಲಿದೆ. ಇದೇ ವೇಳೆ, ಉದ್ಯೋಗಿಗಳು ಹಣ ರವಾನೆಯಲ್ಲಿ ವಿಳಂಬ ಎದುರಿಸಬೇಕಾಗಲಿದೆ. ಇದರೊಂದಿಗೆ ಉದ್ಯೋಗದಾತ ಮತ್ತು ಅಧಿಕಾರಿಗಳಿಂದ ಈ ಡೇಟಾವನ್ನು ಅನುಮೋದಿಸುವುದು ಸಹ ಅಗತ್ಯವಾಗಿದೆ. ಇದಲ್ಲದೆ, ಅವರು ತಮ್ಮ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಕೋವಿಡ್-19 ಅಡ್ವಾನ್ಸ್ ಮತ್ತು ಅವರ ಪಿಎಫ್ ಖಾತೆಗೆ ಲಿಂಕ್ ಮಾಡಲಾದ ವಿಮೆಯ ಪ್ರಯೋಜನವನ್ನು ಸಹ ನೌಕರರು ಪಡೆಯಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ-LIC ಯ ಈ ಪಾಲಿಸಿಯಲ್ಲಿ ಪ್ರೀಮಿಯಂ-ಬೋನಸ್ ಇಲ್ಲದೆ 10 ಲಕ್ಷ ಗಳಿಸಬಹುದು!


ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿ
- EPFO ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://unifiedportal-mem.epfindia.gov.in/memberinterface.
- ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ಖಾತೆಗೆ ಲಾಗಿನ್ ಮಾಡಿ.
- 'ಮ್ಯಾನೇಜ್' ವಿಭಾಗದಲ್ಲಿ KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಪಿಎಫ್ ಖಾತೆಯನ್ನು ಲಿಂಕ್ ಮಾಡಲು ನೀವು 'ಆಧಾರ್' ಅನ್ನು ಆಯ್ಕೆ ಮಾಡುವ ಹೊಸ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
- ಈಗ 'ಆಧಾರ್' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ - ಆಧಾರ್ ಕಾರ್ಡ್‌ನ ಪ್ರಕಾರ ನಿಮ್ಮ ಹೆಸರನ್ನು ನಮೂದಿಸಿ. ಅದರ ನಂತರ ಸೇವ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಒಮ್ಮೆ ನೀವು ನಿಮ್ಮ ಆಧಾರ್ ವಿವರಗಳನ್ನು ಸೇವ್ ಮಾಡಿದ ನಂತರ ನಿಮ್ಮ ಆಧಾರ್ ಅನ್ನು UIDAI ಡೇಟಾದೊಂದಿಗೆ ಪರಿಶೀಲಿಸಲಾಗುತ್ತದೆ.


ಇದನ್ನೂ ಓದಿ-Tension ಹೆಚ್ಚಿಸಿದ Omicron! Mutual Fund ಹೂಡಿಕೆದಾರರು ಖರೀದಿಸಬೇಕೆ? ಅಥವಾ ಮಾರಾಟ ಮಾಡಬೇಕೆ? ಇಲ್ಲಿದೆ ತಜ್ಞರ ಸಲಹೆ


ನಿಮ್ಮ KYC ದಾಖಲೆಯ ಅನುಮೋದನೆಯ ನಂತರ, ನೀವು ಯಶಸ್ವಿಯಾಗಿ EPF ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಸಾಧ್ಯವಾಗುತ್ತದೆ. ನಂತರ ನಿಮ್ಮ ಆಧಾರ್ ವಿವರಗಳ ಮುಂದೆ 'ಪರಿಶೀಲಿಸಲಾಗಿದೆ' ಎಂದು ಬರೆಯಲಾಗುತ್ತದೆ.


ಇದನ್ನೂ ಓದಿ-ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ? UIDAI ನೀಡಿದೆ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.