EPFO 3.0 launch date announced : ಜೂನ್ 2025ರೊಳಗೆ ಬಹು ನಿರೀಕ್ಷಿತ ಇಪಿಎಫ್‌ಒ 3.0 ಅನ್ನು ಪ್ರಾರಂಭಿಸಲು ಸರ್ಕಾರ ತಯಾರಿ ನಡೆಸುತ್ತಿದೆ. ದಕ್ಷತೆ, ಪ್ರವೇಶ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. 


COMMERCIAL BREAK
SCROLL TO CONTINUE READING

ಇಪಿಎಫ್ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಇಪಿಎಫ್‌ಒ 3.0 ಹಲವಾರು ವೈಶಿಷ್ಟ್ಯಗಳನ್ನು ತರಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಬಹಿರಂಗಪಡಿಸಿದ್ದಾರೆ. ಹೊಸ ಸಿಸ್ಟಂನ ಅಸಾಧಾರಣ ವೈಶಿಷ್ಟ್ಯವೆಂದರೆ ಹೆಚ್ಚು ಬಳಕೆದಾರ ಸ್ನೇಹಿ ವೆಬ್‌ಸೈಟ್ ಇಂಟರ್ಫೇಸ್ ಆಗಿದ್ದು, ಸದಸ್ಯರಿಗೆ ತಮ್ಮ ಖಾತೆಗಳನ್ನು ನ್ಯಾವಿಗೇಟ್ ಮಾಡಲು ಮತ್ತು ನಿರ್ವಹಿಸಲು ಸುಲಭವಾಗುತ್ತದೆ.


ಇದನ್ನೂ ಓದಿ : ಇಸ್ರೋಗೆ ಹೊಸ ಸಾರಥಿ: ಡಾ ವಿ ನಾರಾಯಣನ್ ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು


ಈ ವ್ಯವಸ್ಥೆಯು ಭಾರತದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಗಳಂತೆಯೇ ದಕ್ಷತೆಯ ಮಟ್ಟವನ್ನು ನೀಡುತ್ತದೆ. ಉದ್ಯೋಗಿಗಳು ತಮ್ಮ ನಿವೃತ್ತಿ ಹಣವನ್ನು ನಮಗೆ ಬೇಕಾದಂತೆ ಚೆಕ್ ಮಾಡಬಹುದು, ನಮಗೆ ಬೇಕಾದ ಸಮಯದಲ್ಲಿ ವಿಡ್ರಾ ಮಾಡಿಕೊಳ್ಳಬಹುದು. 


EPF ಸದಸ್ಯರಿಗೆ ATM ಕಾರ್ಡ್ : 
EPFO 3.0ನ ಬಹು ನಿರೀಕ್ಷಿತ ವೈಶಿಷ್ಟ್ಯವೆಂದರೆ EPF ಸದಸ್ಯರಿಗೆ ATM ಕಾರ್ಡ್‌ಗಳ ಪರಿಚಯ. ಒಮ್ಮೆ ಈ ವ್ಯವಸ್ಥೆಯನ್ನು ಪ್ರಾರಂಭಿಸಿದ ನಂತರ, ಉದ್ಯೋಗಿಗಳು ತಮ್ಮ ಇಪಿಎಫ್ ಉಳಿತಾಯವನ್ನು ನೇರವಾಗಿ ಎಟಿಎಂ ಮೂಲಕ ಹಿಂಪಡೆಯಲು ಸಾಧ್ಯವಾಗುತ್ತದೆ. ಸಿಸ್ಟಮ್ ಅಪ್‌ಗ್ರೇಡ್‌ ಪೂರ್ಣವಾದ ನಂತರ ಈ ವೈಶಿಷ್ಟ್ಯ ಜಾರಿಗೆ ಬರಲಿದೆ. ಮೊದಲ ಹಂತದ ವೆಬ್‌ಸೈಟ್ ಮತ್ತು ಸಿಸ್ಟಮ್ ಅಪ್‌ಗ್ರೇಡ್‌ಗಳು ಜನವರಿ 2025ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.


ಇದನ್ನೂ ಓದಿ : Budget 2025 : ಇಪಿಎಸ್ ಪಿಂಚಣಿಯಲ್ಲಿ 5 ಪಟ್ಟು ಹೆಚ್ಚಳ, ಬಜೆಟ್‌ನಲ್ಲಿ ಸಿಗಲಿದೆ ಸಿಹಿ ಸುದ್ದಿ !


ಪ್ರಸ್ತುತ ವ್ಯವಸ್ಥೆಯು ಉದ್ಯೋಗಿ ಮತ್ತು ಉದ್ಯೋಗದಾತರಿಂದ 12% ಕೊಡುಗೆ  ಕಡ್ಡಾಯ. ಆದರೆ ಪ್ರಸ್ತಾವಿತ ಬದಲಾವಣೆಯೊಂದಿಗೆ, ಉದ್ಯೋಗಿಗಳು ತಮ್ಮ ಆದ್ಯತೆಗಳ ಆಧಾರದ ಮೇಲೆ ಹೆಚ್ಚು ಅಥವಾ ಕಡಿಮೆ ಕೊಡುಗೆ ನೀಡುವ ಆಯ್ಕೆಯನ್ನು ಹೊಂದಿರಬಹುದು. ನಿವೃತ್ತಿ ಉಳಿತಾಯವನ್ನು ಹಿಂದೆಂದಿಗಿಂತಲೂ ಹೆಚ್ಚು ಅನುಕೂಲಕರ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು EPFO ​​3.0 ಸಿದ್ಧವಾಗಿದೆ.


ನಿರೀಕ್ಷಿತ ಸುಧಾರಣೆಗಳು ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುವುದು ಮಾತ್ರವಲ್ಲದೆ ಅನಿರೀಕ್ಷಿತ ಹಣಕಾಸಿನ ಅಗತ್ಯಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ