EPFO: PF ಖಾತೆದಾರರಿಗೆ EPFO ವತಿಯಿಂದ ಒಂದು ಮಹತ್ವದ ಮಾಹಿತಿ
EPFO Alert: PF ಖಾತೆದಾರರಿಗೆ EPFO ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ. ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ EPFO, ತನ್ನ ಸದಸ್ಯರಿಗೆ ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ವೈಯಕ್ತಿಕ ವಿವರಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳದೆ ಇರಲು ಮನವಿ ಮಾಡಿದೆ.
EPFO: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಎಲ್ಲಾ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ. ಯಾವುದೇ ಖಾತೆದಾರರು ಮರೆತೂ ಕೂಡ ತಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು EPFO ತನ್ನ ಎಲ್ಲಾ ಸದಸ್ಯರಿಗೆ ಮನವಿ ಮಾಡಿದೆ. ಈ ಕಾರಣದಿಂದಾಗಿ, ಖಾತೆದಾರರು ದೊಡ್ಡ ವಂಚನೆಗಳಿಗೆ ಬಲಿಯಾಗುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಕೆ ನೀಡಿದೆ. ನಿಮ್ಮ ಇಪಿಎಫ್ ಖಾತೆಯ ಮಾಹಿತಿಯು ವಂಚಕರ ಕೈಸೇರಿದರೆ, ಅವರು ನಿಮ್ಮ ಖಾತೆಯಿಂದ ಹಣವನ್ನು ಖಾಲಿಮಾಡುವ ಸಾಧ್ಯತೆ ಇದೆ.
EPFO ತನ್ನ ಸದಸ್ಯರಿಂದ ಆಧಾರ್, PAN, UAN, ಬ್ಯಾಂಕ್ ವಿವರಗಳ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂದು EPFO ಹೇಳಿದೆ. ಯಾರಾದರೂ ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಮಾಹಿತಿಯನ್ನು ಕೇಳಿದರೆ, ತಕ್ಷಣ ಎಚ್ಚೆತ್ತುಕೊಳ್ಳಿ ಮತ್ತು ಅದನ್ನು ಅವರಿಗೆ ನೀಡಬೇಡಿ . ಅಂತಹ ಮೋಸದ ಫೋನ್ ಕರೆಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅಂತಹ ಯಾವುದೇ ಸಂದೇಶಗಳಿಗೆ ಉತ್ತರಿಸಬೇಡಿ ಎಂದು ಅದು ಮನವಿ ಮಾಡಿದೆ.
ಇಪಿಎಫ್‌ಒ ಈ ಮಾಹಿತಿ ನೀಡಿದೆ
ತನ್ನ ಎಲ್ಲಾ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿ ಟ್ವೀಟ್ ನಲ್ಲಿ ಬರೆದುಕೊಂಡಿರುವ ಇಪಿಎಫ್‌ಒ, 'ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ವೈಯಕ್ತಿಕ ವಿವರಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ತನ್ನ ಸದಸ್ಯರನ್ನು ಎಂದಿಗೂ ಕೇಳುವುದಿಲ್ಲ. ಇಪಿಎಫ್‌ಒ ವಾಟ್ಸಾಪ್, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಯಾವುದೇ ಮೊತ್ತವನ್ನು ಠೇವಣಿ ಮಾಡಲು ಎಂದಿಗೂ ಕೇಳುವುದಿಲ್ಲ ಎಂದು ಅದು ಹೇಳಿದೆ.
ಇದನ್ನೂ ಓದಿ-Top 5 Sedan Cars: ಇವೆ ನೋಡಿ ಭಾರತದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಅಗ್ಗದ ಕಾರುಗಳು
ಫಿಶಿಂಗ್ ಆನ್‌ಲೈನ್ ವಂಚನೆ
PF ಖಾತೆಯಲ್ಲಿ, ಜನರ ದೊಡ್ಡ ಮೊತ್ತ ಠೇವಣಿಯಾಗಿರುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ, ಜನರು ನಿವೃತ್ತಿ ವೆಚ್ಚಗಳಿಗಾಗಿ ಈ ಠೇವಣಿ ಇಡುತ್ತಾರೆ. ವಂಚಕರು ಇಲ್ಲಿ ಒಂದೇ ಸ್ಟ್ರೋಕ್‌ನಲ್ಲಿ ದೊಡ್ಡ ಮೊತ್ತವನ್ನು ಹೊಡೆಯಬಹುದು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ, ಇದರಿಂದ ಅವರು ಫಿಶಿಂಗ್ ದಾಳಿಯ ಮೂಲಕ ಇಪಿಎಫ್ಒ ಖಾತೆಯ ಮೇಲೆ ದಾಳಿ ಮಾಡುತ್ತಾರೆ. ವಾಸ್ತವದಲ್ಲಿ, ಫಿಶಿಂಗ್ ಎನ್ನುವುದು ಒಂದು ರೀತಿಯ ಆನ್‌ಲೈನ್ ವಂಚನೆಯಾಗಿದ್ದು, ತನ್ಮೂಲಕ ಠೇವಣಿದಾರರನ್ನು ವಂಚಿಸಲಾಗುತ್ತದೆ, ಖಾತೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಸದಸ್ಯರಿಂದ ಪಡೆಯಲಾಗುತ್ತದೆ ಮತ್ತು ನಂತರ ಖಾತೆಯನ್ನು ಖಾಲಿಗೊಳಿಸಲಾಗುತ್ತದೆ.
ಇದನ್ನೂ ಓದಿ-Good News: ದೇಶಾದ್ಯಂತದ ಬ್ಯಾಂಕ್ ನೌಕರರಿಗೊಂದು ಭಾರಿ ಸಂತಸದ ಸುದ್ದಿ!
ಈ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ
PF ಖಾತೆದಾರರು ಆಕಸ್ಮಿಕವಾಗಿ PAN ಸಂಖ್ಯೆ, ಆಧಾರ್ ಸಂಖ್ಯೆ, UAN ಮತ್ತು ನಿಮ್ಮ PF ಖಾತೆ ಸಂಖ್ಯೆಯನ್ನು ಅಥವಾ ಇನಾವುದೇ ರೀತಿಯ ಖಾತೆಗೆ ಸಂಬಂಧಿಸಿದ ಅಗತ್ಯ ಮಾಹಿತಿ ಹಂಚಿಕೊಳ್ಳಬಾರದು. ಏಕೆಂದರೆ, ಈ ರೀತಿಯ ಮಾಹಿತಿ ನಿಮ್ಮ ಖಾತೆಗೆ ಸಂಬಂಧಿಸಿರುತ್ತದೆ. ಈ ರೀತಿಯ ವಂಚನೆಗಳು ಒಂದು ನೌಕರಿಯನ್ನು ಬಿಟ್ಟು ಮತ್ತೊಂದು ನೌಕರಿಗೆ ಸೇರುವವರಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.ಹೀಗಿರುವಾಗ ಈ ಜನರು ವೈಯಕ್ತಿಕ ವಿವರಗಳನ್ನು ಹುಡುಕುತ್ತಿರುವ ಯಾವುದೇ ಫಿಶಿಂಗ್ ಕರೆ ಅಥವಾ ಸಂದೇಶದ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಬೇಕು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ