ನವದೆಹಲಿ : ಇಪಿಎಫ್‌ಒ ಅಡಿಯಲ್ಲಿ ಉದ್ಯೋಗಿಗಳಿಗೆ 7 ಲಕ್ಷ ರೂಪಾಯಿ ಪಡೆಯುವ ಬಂಪರ್ ಆಫರ್ ಇದೆ. ಇದಕ್ಕಾಗಿ, ನೌಕರರು ಇ-ನಾಮನಿರ್ದೇಶನವನ್ನು ಸಲ್ಲಿಸಬೇಕು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಉದ್ಯೋಗಿಯ ಕುಟುಂಬ ಸದಸ್ಯರಿಗೆ ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್ (EDLI) ಅಡಿಯಲ್ಲಿ 7 ಲಕ್ಷ ರೂಪಾಯಿಗಳನ್ನು ಖಾತ್ರಿಪಡಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.


COMMERCIAL BREAK
SCROLL TO CONTINUE READING

ಲಾಭ ಪಡೆಯಲು ಈ ಕೆಲಸ ಮಾಡಬೇಕು


ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ ಅಡಿಯಲ್ಲಿ ಒಳಗೊಳ್ಳುವ ಉದ್ಯೋಗಿಗಳು ತಮ್ಮ ಕುಟುಂಬ ಸದಸ್ಯರಿಗೆ 7 ಲಕ್ಷ ರೂ.ವರೆಗೆ ವಿಮೆಯ ಪ್ರಯೋಜನವನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ 
ನೀವು ಇ-ನಾಮನಿ ಸಲ್ಲಿಸಬೇಕು. ಇಪಿಎಫ್, ಇಪಿಎಸ್ ಮತ್ತು ಪಿಂಚಣಿಯ ಆನ್‌ಲೈನ್ ಪಾವತಿಗೆ ಇ-ನಾಮನಿರ್ದೇಶನ ಅತ್ಯಗತ್ಯ. EPFO ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) ಅಡಿಯಲ್ಲಿ ಉದ್ಯೋಗಿಗಳ ಕುಟುಂಬಕ್ಕೆ 7 ಲಕ್ಷ ರೂ. ವಿಮೆಯ ಖಾತ್ರಿ ನೀಡುತ್ತಿದೆ. ಉದ್ಯೋಗಿ ಮದುವೆಯಾದರೆ, ಅದು ಅವನಿಗೆ ಕಡ್ಡಾಯವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನಿಮಗೆ ಯಾವುದೇ ದಾಖಲೆಯ ಅಗತ್ಯವಿರುವುದಿಲ್ಲ. ಉದ್ಯೋಗಿ ಮಾಡಿದ ಸೆಲ್ಫ್ ಡಿಕ್ಲೆರೇಷನ್ ಆಧಾರದ ಮೇಲೆ ಮಾತ್ರ, ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು.


ಇದನ್ನೂ ಓದಿ : ರೈತರಿಗೆ ಸಂತಸದ ಸುದ್ದಿ : ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ ಈ ಸೌಲಭ್ಯ


ಈ ರೀತಿಯಾಗಿ ನೀವು ಮನೆಯಲ್ಲಿ ಕುಳಿತು ಇ-ನಾಮನಿ ಮಾಡಬಹುದು :


ಮೊದಲಿಗೆ ನೀವು EPFO ​​ವೆಬ್‌ಸೈಟ್ https://www.epfindia.gov.in/site_en/index.php ಗೆ ಭೇಟಿ ನೀಡಬೇಕು.


ಇದರ ನಂತರ ನೀವು 'service' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಇದಾದ ನಂತರ ನೀವು 'For Employees' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


Taboola ಪ್ರಾಯೋಜಿತ ಲಿಂಕ್‌ಗಳಿಂದ ನೀವು ಇಷ್ಟಪಡಬಹುದು


ಅದರ ನಂತರ ನೀವು ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಮೂಲಕ ಲಾಗ್ ಇನ್ ಆಗಬೇಕು.


ಇದರ ನಂತರ ನೀವು 'Manage Tab' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಇದರ ನಂತರ ನೀವು 'EPF Nomination' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಇದರ ನಂತರ ನೀವು ನಿಮ್ಮ ಕುಟುಂಬದ ವಿವರಗಳನ್ನು ಇಲ್ಲಿ ಭರ್ತಿ ಮಾಡಬೇಕು


ನೀವು ಇಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಬಹುದು.


ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು 'Save EPF Nomination' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಇದರ ನಂತರ, OTP ಅನ್ನು ರಚಿಸಲು ನೀವು 'E-Sign' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಇದರ ನಂತರ, ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.


'Submit' ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ, ಇ-ನಾಮನಿರ್ದೇಶನ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.


ಇದನ್ನೂ ಓದಿ : 11-03-2022 Today Gold Price: ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.