EPF Interest Amount : ಪ್ರತಿ ತಿಂಗಳು ನೌಕರರು ತಮ್ಮ ಸಂಬಳದಿಂದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಕೂಡಾ ಅಷ್ಟೇ ಪ್ರಮಾಣದ ಮೊತ್ತವನ್ನು ಠೇವಣಿ ಮಾಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಕೂಡಾ ಈ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತದೆ. ಇತ್ತೀಚೆಗೆ ಇಪಿಎಫ್‌ಒ ಪಿಎಫ್ ಮೊತ್ತದ ಮೇಲಿನ ಬಡ್ಡಿ ದರವನ್ನು ಶೇಕಡಾ 8.25ಕ್ಕೆ ಹೆಚ್ಚಿಸಿದೆ.ಇದೀಗ ಕೋಟಿಗಟ್ಟಲೆ ಇಪಿಎಫ್ ಸದಸ್ಯರು ಈ ಮೊತ್ತ ಯಾವಾಗ ಖಾತೆಗೆ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.  


COMMERCIAL BREAK
SCROLL TO CONTINUE READING

ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ  ವಿಚಾರಿಸುತ್ತಿದ್ದಾರೆ. 


ಇದನ್ನೂ ಓದಿ :  New Rules From 1st May: ಕ್ರೆಡಿಟ್ ಕಾರ್ಡ್ ಸೇರಿದಂತೆ ನಾಳೆಯಿಂದ ಬದಲಾಗಲಿವೆ ಈ ಪ್ರಮುಖ ನಿಯಮಗಳು!


ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಇಪಿಎಫ್‌ಒ, ಇಪಿಎಫ್ ಸದಸ್ಯರ ಖಾತೆಗಳಿಗೆ ಇಪಿಎಫ್ ಬಡ್ಡಿ ಮೊತ್ತವನ್ನು ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.ಇದರ ಹೊರತಾಗಿ,ಬಡ್ಡಿಯ ವಿಷಯದಲ್ಲಿ ಯಾವುದೇ ಸದಸ್ಯರಿಗೆ ಯಾವುದೇ ನಷ್ಟವಾಗದಂತೆ ಇಪಿಎಫ್‌ಒ ನೋಡಿಕೊಳ್ಳಲಿದೆ ಎಂದು ಹೇಳಿದೆ. 


ಪಿಎಫ್ ಸದಸ್ಯರು ತಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಪರಿಶೀಲಿಸಬಹುದು.ಈ ವಿವರಗಳನ್ನು ಆನ್‌ಲೈನ್‌ನಲ್ಲಿ ಇಪಿಎಫ್‌ಒ ವೆಬ್‌ಸೈಟ್ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಮತ್ತು ಆಫ್‌ಲೈನ್‌ನಲ್ಲಿ ಎಸ್‌ಎಂಎಸ್ ಅಥವಾ ಮಿಸ್ಟ್ ಕಾಲ್ ಮೂಲಕ ಪರಿಶೀಲಿಸಬಹುದು.


ಇಪಿಎಫ್‌ಒ ವೆಬ್‌ಸೈಟ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ ವಿಧಾನ :
- ಮೊದಲು ಇಪಿಎಫ್ ವೆಬ್‌ಸೈಟ್  https://www.epfindia.gov.in/site_en/index.php ಗೆ ಹೋಗಿ
- ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
- ಅದರಲ್ಲಿ Our Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ನಂತರ ಅದರಲ್ಲಿ For Employees ಆಯ್ಕೆಯನ್ನು ಆರಿಸಿ.
- ಅದರ ನಂತರ PF Passbook View ಆಯ್ಕೆಯನ್ನು ಆರಿಸಿ.
- ಇದರಲ್ಲಿ ಉದ್ಯೋಗಿಗಳು ಇಪಿಎಫ್ ಖಾತೆಯಲ್ಲಿನ ಮಾಸಿಕ ಕೊಡುಗೆ ಮತ್ತು ಒಟ್ಟು ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುತ್ತದೆ. 


ಇದನ್ನೂ ಓದಿ :  ಮಸಾಲೆಗಳಲ್ಲಿ ಟೈಫಾಯಿಡ್ ಬ್ಯಾಕ್ಟೀರಿಯಾ! 31% MDH ಶಿಪ್ಪಿಂಗ್ ತಿರಸ್ಕರಿಸಿದ ಅಮೆರಿಕಾ


UMANG ಅಪ್ಲಿಕೇಶನ್‌ ಮೂಲಕ PF ಬ್ಯಾಲೆನ್ಸ್ ಪರಿಶೀಲನೆ : 
ಉಮಾಂಗ್ ಅಪ್ಲಿಕೇಶನ್ ಮೂಲಕ  ಬ್ಯಾಲೆನ್ಸ್ ಪರಿಶೀಲಿಸಲು ಮೊಬೈಲ್‌ನಲ್ಲಿ ಉಮಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.ಈ ಆ್ಯಪ್‌ನಲ್ಲಿ ಉದ್ಯೋಗಿಗಳು 127 ರೀತಿಯ ಸೇವೆಗಳ ಲಾಭವನ್ನು ಪಡೆಯಬಹುದು. ಉಮಾಂಗ್ ಅಪ್ಲಿಕೇಶನ್ ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಬ್ಯಾಲೆನ್ಸ್ ಪರಿಶೀಲಿಸಲು Umang ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ನಂತರ View Passbook ಆಯ್ಕೆಯನ್ನು ಆರಿಸಿ.ಇದಾದ  ನಂತರ UAN ಸಂಖ್ಯೆಯನ್ನು ನಮೂದಿಸಿ. ಈಗ ನಿಮ್ಮ ಮೊಬೈಲ್‌ ಗೆ OTP ಬರುತ್ತದೆ. ಅದನ್ನು ಹಾಕಿ. ನಂತರ, ಇ-ಪಾಸ್‌ಬುಕ್ ವೀಕ್ಷಿಸಲು ಸದಸ್ಯರ ಐಡಿ ಮೇಲೆ ಕ್ಲಿಕ್ ಮಾಡಬೇಕು. 


ಎಸ್‌ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? : 
-ನಿಮ್ಮ KYC ವಿವರಗಳೊಂದಿಗೆ UAN ಅನ್ನು ಸಂಯೋಜಿಸಿದ್ದರೆ,ಈ ಪ್ರಕ್ರಿಯೆಯನ್ನು ಅನುಸರಿಸಿ.
- ಮೊಬೈಲ್ ಸಂಖ್ಯೆ 7738299899 ಗೆ SMS ಕಳುಹಿಸಿ
- 'EPFOHO UAN ENG' ಸ್ವರೂಪದಲ್ಲಿ SMS ಕಳುಹಿಸಿ. 
- ಅಲ್ಲಿ ಕೊನೆಯ ಮೂರು ಅಕ್ಷರಗಳು ಭಾಷೆಯನ್ನು ಸೂಚಿಸುತ್ತವೆ. 
- ನಿಮ್ಮ UAN ಸಕ್ರಿಯವಾಗಿದ್ದರೆ ಮತ್ತು ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಮತ್ತು PAN ಗೆ ಲಿಂಕ್ ಮಾಡಿದ್ದರೆ ನಂತರ ನೀವು SMS ಕಳುಹಿಸುವ ಮೂಲಕ ಈ ವಿವರವನ್ನು ತಿಳಿದುಕೊಳ್ಳಬಹುದು.ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪ್ಯಾನ್‌ನೊಂದಿಗೆ ನಿಮ್ಮ UAN ಅನ್ನು ಲಿಂಕ್ ಮಾಡದಿದ್ದರೆ, SMS ಮೂಲಕ ನಿಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು UAN ನೊಂದಿಗೆ eKYC ಅನ್ನು ಪೂರ್ಣಗೊಳಿಸಬೇಕು.


ಇದನ್ನೂ ಓದಿ : Gold And Silver Price: ಭಾರತದಲ್ಲಿ ಚಿನ್ನದ ದರ ಹೆಚ್ಚಳ: ಬೆಳ್ಳಿಯ ಬೆಲೆ ಕುಸಿತ! 


ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? : 
ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.