EPFO: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್‌ಒ  ತನ್ನೆಲ್ಲಾ ಸದಸ್ಯರಿಗೆ ಯುನಿವರ್ಸಲ್ ಅಕೌಂಟ್ ನಂಬರ್- ಯುಎಎನ್ ಸಕ್ರಿಯಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಹೊಸ ಉದ್ಯೋಗಿಗಳು 30 ನವೆಂಬರ್ 2024 ರೊಳಗೆ ಆಧಾರ್ ಆಧಾರಿತ OTP ಮೂಲಕ UAN ಅನ್ನು ಸಕ್ರಿಯಗೊಳಿಸುವುದು ಕಡ್ಡಾಯವಾಗಿದೆ. 
ಇಪಿ‌ಎಫ್‌ಒ ಬಳಕೆದಾರರು ತಮ್ಮUAN ಸಕ್ರಿಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಪಿ‌ಎಫ್‌ಒ ನಿರ್ದೇಶನ ನೀಡಿದೆ.


COMMERCIAL BREAK
SCROLL TO CONTINUE READING

ಇಪಿಎಫ್ಒದ ಈ ಉಪಕ್ರಮವು ಯೂನಿಯನ್ ಬಜೆಟ್ 2024-25 ರಲ್ಲಿ ಪರಿಚಯಿಸಲಾದ ಉದ್ಯೋಗಿಗಳು ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ (ELI) ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಹಕಾರಿ ಆಗಿದೆ. ಇದಕ್ಕಾಗಿ ಪ್ರತಿ ಇಪಿ‌ಎಫ್‌ಓ ಬಳಕೆದಾರರು 30 ನವೆಂಬರ್ 2024 ರೊಳಗೆ ಆಧಾರ್ ಆಧಾರಿತ OTP ಮೂಲಕ ತಪ್ಪದೇ ಯುಎಎನ್ ಸಕ್ರಿಯಗೊಳಿಸಿ. 


ಇದನ್ನೂ ಓದಿ- ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆ ಯಾರಾದ್ರೂ ಬಳಸ್ತಾ ಇದ್ದಾರಾ? ಎರಡೇ ನಿಮಿಷದಲ್ಲಿ ಪತ್ತೆ ಹಚ್ಚಿ!


ಇಪಿ‌ಎಫ್‌ಒ ಡಿಜಿಟಲ್ ಸೇವೆ: 
ಯುಎಎನ್ ಸಕ್ರಿಯಗೊಳಿಸುವಿಕೆಯು ಪ್ರಾವಿಡೆಂಟ್ ಫಂಡ್ (ಪಿ‌ಎಫ್) ಖಾತೆಗಳನ್ನು ನಿರ್ವಹಿಸಲು, ಆನ್‌ಲೈನ್ ಕ್ಲೈಮ್‌ಗಳನ್ನು ಸಲ್ಲಿಸುವುದು, ವೈಯಕ್ತಿಕ ವಿವರಗಳನ್ನು ನವೀಕರಿಸುವುದು ಮತ್ತು ನೈಜ ಸಮಯದಲ್ಲಿ ಕ್ಲೈಮ್‌ಗಳನ್ನು ಟ್ರ್ಯಾಕ್ ಮಾಡುವುದನ್ನು ಸರಳಗೊಳಿಸುತ್ತದೆ. 


ಇದನ್ನೂ ಓದಿ- ಲಂಚ ನೀಡಿ ಗುತ್ತಿಗೆ ಪಡೆದ  ಆರೋಪ : ಅಮೆರಿಕದಲ್ಲಿ ಗೌತಮ್ ಅದಾನಿ ಅರೆಸ್ಟ್ ವಾರೆಂಟ್ ಜಾರಿ 


ಇಪಿಎಫ್ಒ ಬಳಕೆದಾರರು ಯುಎಎನ್ ಸಕ್ರಿಯಗೊಳಿಸುವುದರ ಮೂಲಕ EPFO ​​ಕಚೇರಿಗಳಿಗೆ ಭೇಟಿ ನೀಡದೆಯೇ ಈ ಸೇವೆಗಳಿಗೆ ತಡೆರಹಿತ, 24/7 ಪ್ರವೇಶವನ್ನು ಪಡೆಯಬಹುದು. 


ಯುಎಎನ್ ಸಕ್ರಿಯಗೊಳಿಸಲು ಹಂತ-ಹಂತದ ಪ್ರಕ್ರಿಯೆ: 
ಹಂತ-1: ಮೊದಲಿಗೆ ಇಪಿಎಫ್ಒ ಸದಸ್ಯರ ಪೋರ್ಟಲ್ ಗೆ ಭೇಟಿ ನೀಡಿ. 
ಹಂತ-2:  ಇದರಲ್ಲಿ ಪ್ರಮುಖ ಲಿಂಕ್ಗಳ ಅಡಿಯಲ್ಲಿ ಕಾಣುವ ಯುಎಎನ್ ಸಕ್ರಿಯಗೊಳಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
ಹಂತ-3: ಮುಂದಿನ ಪುಟದಲ್ಲಿ ನಿಗದಿತ ಜಾಗದಲ್ಲಿ ನಿಮ್ಮ ಯುಎಎನ್ ಸಂಖ್ಯೆ, ಆಧಾರ್ ಸಂಖ್ಯೆ, ಹುಟ್ಟಿದ ದಿನಾಂಕ, ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. 
ಹಂತ-4: ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಲಾದ ಓ‌ಟಿ‌ಪಿ ನಮೂದಿಸಿ “Authorisation PIN” ಪಡೆಯಿರಿ. 
ಹಂತ-5: ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ ನಮೂದಿಸಿದ ಓ‌ಟಿ‌ಪಿ ನಮೂದಿಸಿ ಸಕ್ರಿಯಗೊಳಿಸಿದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಾಸ್‌ವರ್ಡ್ ಕಳುಹಿಸಲಾಗುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ